ಭಾರತದ ಪ್ರತೀಕಾರಕ್ಕೆ ಪಾಪಿ ಪಾಕಿಸ್ತಾನ ವಿಲವಿಲ..ಆ 23 ನಿಮಿಷದಲ್ಲಿ ಏನೆಲ್ಲ ಆಯ್ತು.. ಕಂಪ್ಲೀಟ್ ಟೈಮ್ಲೈನ್
1 min read
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ ಆರಂಭಿಸಿತು.. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಿತ್ತು. ಭಾರತದ ಮಾಸ್ಟರ್ ಸ್ಟ್ರೋಕ್ಗೆ 80ಕ್ಕೂ ಹೆಚ್ಚು ಉಗ್ರರು ಹತರಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಈ ದಾಳಿ ಮಾಡಲಾಗಿದ್ದು, ಮುರೀದ್ಕೆ, ಮುಜಾಫರ್ಬಾದ್, ಬಹಾವಲ್ಪುರ್, ಕೋಟ್ಲಿ, ಚಾಕ್ಅಮ್ರು, ಗುಲ್ಪುರ್, ಭಿಂಬರ್ನಲ್ಲಿ ದಾಳಿ ಆಗಿದೆ. ಇನ್ನೂ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ 23 ನಿಮಿಷದಲ್ಲಿ ಪಾಕ್ನ 9 ನೆಲೆಯನ್ನು ಉಡೀಸ್ ಮಾಡಲಾಗಿದೆ.. 23 ನಿಮಿಷದಲ್ಲೇ 80 ಕ್ಕೂ ಹೆಚ್ಚು ಉಗ್ರರು ಮೃತಪಟ್ಟರು.. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.
ಮಧ್ಯರಾತ್ರಿ 1.44ಕ್ಕೆ ಭಾರತೀಯ ವಾಯುಪಡೆಯಿಂದ ಏರ್ ಸ್ಟ್ರೈಕ್ ಮಾಡಿದೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ದಾಳಿ ಬೆನ್ನಲ್ಲೇ ಭಾರತ 3.10ಕ್ಕೆ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾಹಿತಿ ನೀಡಿತ್ತು. ಇದಾದ ಬಳಿಕ 3.20ಕ್ಕೆ ಲಾಹೋರ್, ಸಿಯಾಲ್ ಕೋಟ್ ಏರ್ ಪೋರ್ಟ್ ಬಂದ್ ಮಾಡಲಾಗಿದೆ. ಭಾರತದ ಏರ್ ಸ್ಟ್ರೈಕ್ನಲ್ಲಿ 80- 90ಕ್ಕೂ ಹೆಚ್ಚು ಉಗ್ರರ ಸಾವನ್ನಪ್ಪಿದ್ದಾರೆ. ಭವಾಲ್ಪುರ ಒಂದೇ ಸ್ಥಳದಲ್ಲಿ 25-30 ಮಂದಿ ಉಗ್ರರ ಮೃತಪಟ್ಟಿದ್ದಾರೆ. ಮತ್ತೆ ಮುರ್ದಿಕ್ನಲ್ಲಿ 25-30 ಮಂದಿ ಉಗ್ರರು ಸಾವನ್ನಪ್ಪಿದ್ದು, ಮುಜಾಫರಬಾದ್ನಲ್ಲಿ ಜೆಇಎಂ ಉಗ್ರರ ಟ್ರೇನಿಂಗ್ ಕ್ಯಾಂಪ್ ಸಂಪೂರ್ಣ ನಾಶವಾಯಿತು..
3 ನಿಮಿಷಗಳ ಆಪರೇಷನ್ ಸಿಂಧೂರ..!
01:28-01:51AM – ಭಾರತದಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಯಿತು
02:05 AM – 9 ಕಡೆ ದಾಳಿ ಮಾಡಿರೋ ಬಗ್ಗೆ ಅಧಿಕೃತ ಮಾಹಿತಿ
02:17AM – ಭಾರತಕ್ಕೆ ಪಾಕಿಸ್ತಾನ ಎಚ್ಚರಿಕೆ ಸಂದೇಶ ರವಾನಿಸಿತು
02:21AM – ಭಾರತ POKಯಲ್ಲಿ 3 ಕಡೆ ದಾಳಿ ಮಾಡಿದ ಬಗ್ಗೆ ದೃಢಪಡಿಸಿದ ಪಾಕ್
02:28 AM – ಭಾರತ ದಾಳಿಯ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಿತ್ತು
02:46 AM – ರಕ್ಷಣಾ ಸಚಿವ ರಾಜನಾಥ್ಸಿಂಗ್ರಿಂದ ಭಾರತ್ ಮಾತಾ ಕೀ ಜೈ ಎಂದು ಟ್ವೀಟ್ ಮಾಡಿದರು
02:50 AM – ರಷ್ಯಾ, ಇಂಗ್ಲೆಂಡ್ಗೆ ಭಾರತದಿಂದ ದಾಳಿಯ ಬಗ್ಗೆ ಮಾಹಿತಿ
02:51 AM – ಪಾಕಿಸ್ತಾನದ ಸೇನಾ ವಕ್ತಾರ, ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿಯಿಂದ ಸ್ಪಷ್ಟನೆ
03:00 AM – ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಚಕಮಕಿ
03:05 AM – ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಮೂವರು ನಾಗರಿಕರು ಸಾವನಪ್ಪಿದರು
