26 ಅಮಾಯಕ ಹೆಣ್ಮಕ್ಕಳ ಸಿಂಧೂರ ಅಳಿಸಿದ ಪ್ರತೀಕಾರವೇ ‘ಆಪರೇಷನ್ ಸಿಂಧೂರ.

Share it

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ಪಾಪಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದರು. ಅದರಲ್ಲೂ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಒಬ್ಬೊಬ್ಬರನ್ನೇ ಗುಂಡಿಕ್ಕಿ ಕೊಂದಿದ್ದರು. ಈ ದಾಳಿಯಲ್ಲಿ ಬರೋಬ್ಬರಿ 26 ಅಮಾಯಕರು ತಮ್ಮ ಹೆಂಡತಿ ಹಾಗೂ ಮಕ್ಕಳ ಮುಂದೆ ಪ್ರಾಣಬಿಟ್ಟಿದ್ದರು. ಅಮಾಯಕರ ಬಲಿ ಪಡೆದ ಉಗ್ರರ ವಿರುದ್ಧ ಭಾರತ ಕೊನೆಗೂ ಸೇಡು ತೀರಿಸಿಕೊಂಡಿದೆ. ಏಪ್ರಿಲ್ 22ರಂದು ಪಹಲ್ಗಾಮ್​ನ ಬೈಸರನ್​​ನಲ್ಲಿ ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ನಡೆಸಿ, ಬರೋಬ್ಬರಿ 26 ಮಂದಿಯ ಜೀವವನ್ನು ತೆಗೆದರು. ಈ ಕೃತ್ಯದ ಬೆನ್ನಲ್ಲೇ ಇಡೀ ದೇಶ ಪಾಕಿಸ್ತಾನದ ಮೇಲೆ ಕೆಂಡ ಕಾರಿತ್ತು. ಒಂದು ಕಡೆ ಪಾಪಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಅಂತ ಆಕ್ರೋಶ ವ್ಯಕ್ತವಾಗುತ್ತಿತ್ತು. ಮತ್ತೊಂದು ಕಡೆ ಉಗ್ರರನ್ನು ಉಡಾಯಿಸಬೇಕೆಂದು ಭಾರತ ಸರ್ಕಾರ ಯುದ್ಧಕ್ಕೆ ತಯಾರಿ ಮಾಡಿಕೊಳ್ಳುತ್ತಿತ್ತು. ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ.

 

ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ​’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್​ನ 9 ನೆಲೆಯನ್ನು ಉಡೀಸ್​ ಮಾಡಿದೆ. ಜಸ್ಟ್​ 23 ನಿಮಿಷದಲ್ಲೇ 70 ಉಗ್ರರು ಮೃತಪಟ್ಟಿದ್ದಾರೆ. ಭಾರತವು ಪಾಕ್ ಆಕ್ರಮಿತ ಕಾಶ್ಮೀರದ 5 ಸ್ಥಳ ಮತ್ತು ಪಾಕ್​ನ ನಾಲ್ಕು ಸ್ಥಳ ಸೇರಿ ಉಗ್ರರ ನೆಲೆ, ಟ್ರೆನಿಂಗ್ ಕ್ಯಾಂಪ್​ಗಳ ಮೇಲೆ ಏಕಕಾಲದಲ್ಲಿ 9 ಕಡೆಯಲ್ಲಿ ದಾಳಿ ಮಾಡಿ ಹೊಡೆದುರುಳಿಸಿದೆ. ಇದರಲ್ಲಿ‌  ಈ ಮೂಲಕ ಭಾರತ ತನ್ನ ಪ್ರತೀಕಾರವನ್ನು ತೀರಿಸಿಕೊಂಡಿದೆ.

ಏನೆಲ್ಲ ಆಗಿದೆ..?

ಭಾರತೀಯ ವಾಯುಪಡೆಯು ರಫೇಲ್​ನ ಸ್ಕಾಲ್ಪ್ ಮಿಸೈಲ್ ಬಳಸಿ ದಾಳಿ

ಜೊತೆಗೆ ಬ್ರಹ್ಮೋಸ್ ಮಿಸೈಲ್ ಮೂಲಕವೂ ಉಗ್ರರ ನೆಲೆಗಳ ಮೇಲೆ ಅಟ್ಯಾಕ್

ಪಾಕ್‌ ಟೆರರ್ ಕಂಟ್ರೋಲ್ ರೂಮುಗಳನ್ನೇ ಧ್ವಂಸ ಮಾಡಿದ ಭಾರತ

ಪಾಕ್ ಐಎಸ್‌ಐ-ಟೆರರ್ ಕಂಟ್ರೋಲ್ ರೂಮ್​ ಕೂಡ ಧ್ವಂಸಗೊಂಡಿದೆ

ಹ್ಯಾಮರ್ ಬಾಂಬ್ ಬಳಸಿ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ

ಪಾಕ್​ಗೆ ಚೀನಾ ನೀಡಿದ್ದ JF -17 ಯುದ್ಧ ವಿಮಾನ ಉಡೀಸ್

ಸುಮಾರು 70ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರುವ ಶಂಕೆ

ಉಗ್ರ ಹಫೀಜ್ ಸಯ್ಯದ್​ ಅಡುಗುತಾಣಗಳು ಧ್ವಂಸ

ವಿಮಾನಗಳ ಹಾರಾಟ ರದ್ದು ಮಾಡಿದ ಪಾಕ್, ಆತಂಕದಲ್ಲಿ ಉಗ್ರರಸ್ಥಾನ

Loading

Leave a Reply

Your email address will not be published. Required fields are marked *

error: Content is protected !!