ನಾನು ಯುದ್ಧಕ್ಕೆ ಹೋಗಲು ಸಿದ್ಧ ಎಂದು ಎದೆ ತಟ್ಟಿ, ತಟ್ಟಿ ಹೇಳಿದ ಸಚಿವ ಜಮೀರ್ ಅಹಮ್ಮದ್
1 min read
ಮೋದಿ, ಅಮಿತ್ ಷಾ, ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಲಿ, ನಾನು ಯುದ್ಧಕ್ಕೆ ಹೋಗಲು ಸಿದ್ಧ ಎಂದು ಎದೆ ತಟ್ಟಿ, ತಟ್ಟಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು. ಹೊಸಪೇಟೆಯಲ್ಲಿ ಮಾತನಾಡಿದ ಅವರು ಪಾಕಿಸ್ತಾನ ಎಂದಿಗೂ ನಮಗೆ ಸಂಬಂಧವಿಲ್ಲ, ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ, ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ, ಮೋದಿ, ಅಮಿತ್ ಷಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ಕೊಡಲಿ ನಾನು ಯುದ್ಧ ಮಾಡೋದಕ್ಕೆ ಸಿದ್ಧ ಎಂದು ಎದೆ ತಟ್ಟಿ, ತಟ್ಟಿ ಹೇಳಿದ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಸಚಿವ ಶಿವಾನಂದ ಪಾಟೀಲ್ ಮತ್ತು ಯತ್ನಾಳ್ ರಾಜೀನಾಮೆ ಜಟಾಪಟಿ ವಿಚಾರವಾಗಿ ಮಾತನಾಡಿದ ಅವರು ಯತ್ನಾಳ್ ಅವರು, ಯಾವಾಗಲೂ ದಮ್ಮು, ತಾಕತ್ತು ಅಂತ ಮಾತಾಡ್ತಾರೆ ಪದೇ, ಪದೇ, ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ. ಸಚಿವ ಶಿವಾನಂದ ಪಾಟೀಲ್, ದಮ್ಮು ತಾಕತ್ತು ತೋರಿಸಿದ್ದಾರೆ. ಅವರಪ್ಪಗೆ ಹುಟ್ಟಿದವರಾದ್ರೆ, ರಾಜೀನಾಮೆ ಕೊಟ್ಟು ಬರಲಿ ಅಂತ ಯತ್ನಾಳ್ ಹೇಳ್ತಾರೆ. ಶಿವಾನಂದ್ ಪಾಟೀಲ್ ರಾಜಿನಾಮೆ ಕೊಟ್ಟು ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಿದ್ದಾರೆ. ಅದೇ ಯತ್ನಾಳ್ ರಾಜೀನಾಮೆ ನೀಡಿ, ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಲಿ ಎಂದು ಸವಾಲ್ ಹಾಕಿದರು.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕೊಲೆ ಪ್ರಕರಣ ಬಗ್ಗೆ ಮಾತನಾಡಿದ ಅವರು ಕೊಲೆಯಾಗಿದೆ, ಕೊಲೆಯಾಗಬಾರದಾಗಿತ್ತು. ಸತ್ತಿರೋರು ಉತ್ತಮ ಚಾರಿತ್ರ್ಯ ವ್ಯಕ್ಯಿ, ರೌಡಿ ಶೀಟರ್ ಅಂತೆ ಹಿಂದೆ ಕೊಲೆ ಕೇಸ್ ನಲ್ಲಿದ್ರಂತೆ, ಪೊಲೀಸರು ತನಿಖೆ ಮಾಡ್ತಾರೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವೇ , ಕೊಲೆಯಾಗಬಾರದಾಗಿತ್ತು. ಬಿಜೆಪಿಯವರಿಗೆ ಎಲ್ಲದ್ರಲ್ಲೂ ರಾಜಕಾರಣ ಅವರು ಜಾತಿ ರಾಜಕಾಣರ ಮನೆಯಲ್ಲಿ ಮಾಡಿಕೊಳ್ಳಲಿ, ರಾಜಕೀಯದಲ್ಲಿ ಬಂದು ಮಾಡಬಾರದು. ಹೊಸಪೇಟೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
