ಜಾತಿಗಣತಿ ಬಗ್ಗೆ ಒಕ್ಕಲಿಗ ಶಾಸಕರ ಸಭೆ.. ಡಿಕೆ ಶಿವಕುಮಾರ್ ನೇತೃತ್ವದ ಮೀಟಿಂಗ್
1 min read
ಬೆಂಗಳುರು : ಕಾಂಗ್ರೆಸ್ ಸರ್ಕಾರದಲ್ಲೇ ಜಾತಿ ಗಣತಿ ಜಟಾಪಟಿ ತಾರಕಕ್ಕೇರಿದೆ. ಲಿಂಗಾಯತ, ಒಕ್ಕಲಿಗ ಸೇರಿ ಪ್ರಬಲ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಜಾತಿ ಗಣತಿ ವಿಚಾರ ರಾಜ್ಯದಲ್ಲಿ ರಾಜಕೀಯ ವಾಕ್ಸಮರಕ್ಕೆ ಪಾಯ ತೋಡಿದೆ. ಈ ನಡುವೆ ಡಿ.ಕೆ ಶಿವಕುಮಾರ್ ಒಕ್ಕಲಿಗರ ಶಾಸಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಜಾತಿಗಣತಿ ಜಟಾಪಟಿಗೆ ಪ್ರಬಲ ಒಕ್ಕಲಿಗ ಸಮುದಾಯದ ವಿರೋಧವೂ ಕಾರಣ. ಈ ನಿಟ್ಟಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ನಡೆಸಿದ್ರು
ಜಾತಿ ಗಣತಿ ವರದಿ ಸಂಬಂಧ ಡಿಕೆಶಿ, ಒಕ್ಕಲಿಗರ ಶಾಸಕರ ಮೀಟಿಂಗ್ ನಡೆಸಿದ್ದು, ಒಕ್ಕಲಿಗ ಸಮುದಾಯದ ಹಿತಕ್ಕೆ ಸಿದ್ಧ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಈ ಮೀಟಿಂಗ್ಗೂ ಮೊದಲು ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾಗಿ ಡಿಕೆಶಿ ಚರ್ಚೆ ನಡೆಸಿದ್ರು. ಈ ವೇಳೆ ಸಮುದಾಯದ ಹಿತ ಕಾಯುವಂತೆ ಶ್ರೀಗಳ ನಿರ್ದೇಶನ ನೀಡಿದ್ರು ಅನ್ನೋ ಮಾಹಿತಿ ಸಿಕ್ಕಿದೆ. ಈ ಬೆನ್ನಲ್ಲೇ ಒಕ್ಕಲಿಗರ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಜಾತಿಗಣತಿ ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿದ್ರು. ವರದಿಯ ಸಾರಾಂಶದ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಡಲಾಯ್ತು. ಈ ವರದಿಗೆ ಸಂಬಂಧಿಸಿದಂತೆ ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನ ತಿಳಿಸಿದ್ದಾರೆ. ಇದು ಒಕ್ಕಲಿಗ ನಾಯಕರ ಒಕ್ಕೊರಲ ಮಾತಾದ್ರೆ ಅತ್ತ ಲಿಂಗಾಯತ ಸಮುದಾಯವಂತೂ ಜಾತಿಗಣತಿಗೆ ಸಂಪೂರ್ಣ ವಿರೋಧವಾಗಿ ನಿಂತಿದೆ.
ಜಾತಿಗಣತಿ ವರದಿ ಜಾರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧ ವ್ತಕ್ತಪಡಿಸಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ ? ಅಂತಾ ಪ್ರಶ್ನೆ ಮಾಡಿದ್ದಾರೆ. ಈ ರಾಜ್ಯದಲ್ಲಿ ಹೆಚ್ಚಿರೋದು ಲಿಂಗಾಯತರು, ನಂತರ ಬರೋದು ಒಕ್ಕಲಿಗರು.. ನಾವಿಬ್ಬರು ಸೇರಿ ಹೋರಾಟ ಮಾಡುತ್ತೇವೆ ಅಂತಾ ಶಾಮನೂರು ಶಿವಶಂಕರಪ್ಪ ಸಮರ ಸಂದೇಶ ರವಾನೆ ಮಾಡಿದ್ದಾರೆ. ಒಟ್ಟಾರೆ ಜಾತಿಗಣತಿ ವರದಿಗೆ ಕಾಂಗ್ರೆಸ್ ನಾಯಕರ ಜೊತೆಗೆ ಎಲ್ಲಾ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ವಿರೋಧಕ್ಕೆ ಕಾರಣವಾಗಿದೆ.
