ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಡಾ.ಬಿ.ಆರ್.ಅಂಬೇಡ್ಕರ್ ರವರ ವಿವಿಧ ಸ್ಮಾರಕಗಳು ಅಭಿವೃದ್ಧಿ-ಅಧ್ಯಕ್ಷ ಅಂದಪ್ಪ ಹಾರೂಗೇರಿ
1 min read
ಮುಂಡರಗಿ: ಅನೇಕ ರಾಜಕೀಯ ಪಕ್ಷಗಳು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬಳಸಿಕೊಂಡವು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರ ವಿವಿಧ ಸ್ಮಾರಕ ಹಾಗೂ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅವರಿಗೆ ಗೌರವ ನೀಡಲಾಯಿತು ಎಂದು ರೋಣ ಮತಕ್ಷೇತ್ರದ ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ ಅಭಿಪ್ರಾಯಪಟ್ಟರು. ಡಂಬಳ ಹೋಬಳಿ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ರೋಣ ಮತಕ್ಷೇತ್ರದ ಡಂಬಳ ಮಂಡಳ ವತಿಯಿಂದ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ಎಸ್.ಸಿ ಮೋರ್ಚಾ ಅಧ್ಯಕ್ಷ ಕೃಷ್ಣ ಬಂಡಿ ಮಾತನಾಡಿ, ಶಿಕ್ಷಣ,ಸಂಘಟನೆ ಹೋರಾಟದ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳಬೇಕು. ಪಾಲಕರು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಈಶಪ್ಪ ರಂಗಪ್ಪನವರ, ಪಂಚಾಕ್ಷರಿ ಹರ್ಲಾಪೂರಮಠ, ಪ್ರಭು ಕರಮುಡಿ, ಪ್ರವೀಣ ವಡ್ಡಟ್ಟಿ, ನಾಗರಾಜ ನವಲಿ, ಮುತ್ತು ಬಿನ್ನಾಳ, ಪ್ರಭು ಬೋಳಣ್ಣವರ, ವಿನಾಯಕ ರಾಠೋಡ, ಮುದಕಣ್ಣ ಮುಳಗುಂದ, ಯಲ್ಲಪ್ಪ ಸೋಮಣ್ಣವರ, ಶಿವಪುತ್ರಪ್ಪ ದುಂಡಪ್ಪನವರ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು, ಭಾಗವಹಿಸಿದ್ದರು.
