ಹಾಡಹಗಲೇ ಮಕ್ಕಳನ್ನ ಅಪಹರಿಸಲು ಯತ್ನಿಸಿದ ಖದೀಮ… ಯುವಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆ
1 min read
ಬೀದರ್ : ಆಟವಾಡುತ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಘಟನೆ ಬೀದರ್‌ನ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದೆ. ನಿನ್ನೆ ಸಾಯಂಕಾಲ 6 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಕ್ಕಳನ್ನ ಯುವಕನೊಬ್ಬ ಮಾತನಾಡಿಸುತ್ತಾ ಮನೆಗೆ ನುಗ್ಗಿದ್ದಾನೆ. ಆತನ ಅಸಬ್ಯ ವರ್ತನೆ ಕಂಡು ಕೂಡಲೇ ಎಚ್ಚೆತ್ತ ಮಕ್ಕಳು ಪೋಷಕರ ಗಮನಕ್ಕೆ ತಂದರು.ಪೋಷಕರು ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆ ಸ್ಥಳದಿಂದ ಖದೀಮ ಕಾಲ್ಕಿತ್ತಿದ್ದಾನೆ, ಯುವಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೋಷಕರು ಗಾಂಧಿ ಗಂಜ್ ಠಾಣೆಗೆ ದೂರು ನೀಡಿದರು. ಈ ಘಟನೆ ಕಂಡು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ,
