ಜಾತಿ ಜನಗಣತಿ ವರದಿ ಓದುತ್ತಿದ್ದೇನೆ ಇದರಲ್ಲಿ ಎರಡು ಮೂರು ವಿಚಾರಗಳಿವೆ – ಪರಮೇಶ್ವರ್
1 min read
ಬೆಂಗಳೂರು : ಜಾತಿ ಜನಗಣತಿ ವರದಿಯನ್ನು ಇನ್ನು ಓದುತ್ತಿದ್ದೇನೆ, ನಾಲ್ಕೈದು ಪೇಜ್ ಓದಿದ್ದೇನೆ ಒಟ್ಟಾರೆ ಇದರಲ್ಲಿ ಎರಡು ಮೂರು ವಿಚಾರಗಳಿವೆ ಎಂದು ಪರಮೇಶ್ವರ್ ಹೇಳಿದರು. ನಗರದಲ್ಲಿ ಮತನಾಡಿದ ಅವರು 2018ರಲ್ಲಿ ಪ್ರಾರಂಭ ಮಾಡಿ ಮುಗಿದಿದೆ ಎಂದು ಹೇಳಿ ಎರಡು ಮೂರು ವರ್ಷ ಆಯ್ತು. ಅದರ ಇಂಪ್ಯಾಕ್ಟ್, ಯೋಜನೆಗಳು ಚರ್ಚೆ ಒಂದು ಭಾಗದಲ್ಲಿ ಇಡೋಣ, ವಸ್ತುಸ್ಥಿತಿ ಏನಿದೆ ಎಂದು ಗೊತ್ತಾಗಿದೆ. ಮುಂದೆ ಅದರ ಎಫೆಕ್ಟ್ ಯೋಜನೆಗಳು ಕಾರ್ಯಕ್ರಮ ಈಗಲೇ ಹೇಳಲು ಆಗುವುದಿಲ್ಲ, ಕೊಟ್ಟಿರುವ ಪ್ರತಿಗಳನ್ನು ಎಲ್ಲಾ ಮಂತ್ರಿಗಳು ಓದಿಕೊಂಡು ಬರಬೇಕು. 17ರಂದು ಬೇರೆ ಯಾವುದು ವಿಷಯ ಬೇಡ ಈ ಒಂದು ವಿಚಾರದ ಮೇಲೆ ಚರ್ಚೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಚರ್ಚೆ ಮಾಡಿದ ನಂತರದಲ್ಲಿ ಸ್ವೀಕರಿಸುವ ಬಗ್ಗೆ ತೀರ್ಮಾನ ಆಗಲಿದೆ. ಈಗ ವರದಿಯ ಬಗ್ಗೆ ನಾವು ಏನು ಹೇಳಲು ಆಗುವುದಿಲ್ಲ 2015 ರಿಂದ ಪ್ರಾರಂಭವಾಗಿದ್ದು 10 ವರ್ಷಗಳ ಬಳಿಕ ನಾವು ಆಚೆಗೆ ತರುತ್ತಿದ್ದೇವೆ. ಸ್ಟಡಿ ಮಾಡಿ ಚರ್ಚೆ ಮಾಡಬೇಕಿದೆ. ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡಲು ಹೋಗುವುದಿಲ್ಲ, ಸಮುದಾಯದ ಅಭಿಪ್ರಾಯಗಳು , ರಾಜಕಾರಣಿಗಳ ಅಭಿಪ್ರಾಯಗಳು , ಎಲ್ಲವೂ , ಬರುತ್ತಿದೆ ಚರ್ಚೆ ಮಾಡಿ ನಂತರ ನೋಡುತ್ತೇವೆ ಎಂದು ಹೇಳಿದರು..
