ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧನ ಮನೆ ದೋಚಿದ ಖದೀಮರು

ಬೀದರ್ : ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧನ ಮನೆ ಖದೀಮರು ದೋಚಿದ ಘಟನೆ ಬೀದರ್ ನಗರದ ಸಂಗಮೇಶ ಕಾಲೋನಿಯಲ್ಲಿ ನಡೆದಿದೆ. ಸಿಐಎಸ್‌ಎಪ್ ಮಾಜಿ ಯೋಧನ ಮನೆಗೆ ಕನ್ನ ಹಾಕಿ, ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ, ವೀರಶೆಟ್ಟಿ ಘಾಳೆಪ್ಪಾ ರಾಮಶೆಟ್ಟಿ ಎಂಬುವವರ ಮನೆಯಲ್ಲಿ ಕಳ್ಳತನವ ಆಗಿದ್ದು, ಮಗಳ ಮದುವೆ ನಿಮಿತ್ತ 16 ತೊಲೆ ಬಂಗಾರ, 5 ತೊಲೆ ಬೆಳ್ಳಿ, 30 ಸಾವಿರ ನಗದು ಲೂಟಿ ಮಾಡಿದ್ದಾರೆ. ಮದುವೆ ಹಿನ್ನೆಲೆ, ಲಗ್ನ ಪತ್ರಿಕೆ ಹಂಚಲು ಸ್ವಗ್ರಾಮಕ್ಕೆ ತೆರಳಿದ್ದರು.ಮನೆಯಲ್ಲಿ ಯಾರೂ ಇರದ ವೇಳೆ ಕೃತ್ಯ ನಡೆಸಿ ಖದೀಮರು ಪರಾರಿಯಾಗಿದ್ದಾರೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]()