January 29, 2026

c24kannada

ವಸ್ತುಸ್ಥಿತಿಯತ್ತ

ಪ್ಯಾಂಟ್ ಒಳಗಡೆ ಸೇರಿದ್ದ ನಾಗರಹಾವು.. ಭಯಾನಕ ಘಟನೆ..!

Share it

ಉತ್ತರ ಕನ್ನಡ :  ರಾಜ್ಯದಲ್ಲಿ ಬಿಸಿಲ ಆರ್ಭಟ ಜೋರಾಗಿದೆ. ಬಿಸಿಲ ತಾಪಕ್ಕೆ ಮನುಷ್ಯರು ಮಾತ್ರವಲ್ಲ ಪಕ್ಷಿಗಳು , ಪ್ರಾಣಿಗಳು, ಕೂಡ ಕಂಗಾಲಾಗಿವೆ.  ನೆರಳು ಇರುವ ಜಾಗವನ್ನು ಸರಿಸೃಪಗಳು ಅರಸುತ್ತಿವೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವ್ಯಕ್ತಿಯೊಬ್ಬರ ಪ್ಯಾಂಟ್ ಒಳಗೆ ಹಾವು ಸೇರಿತ್ತು. ಶಿರಸಿಯ ನಾರಾಯಣಗುರು ನಗರದಲ್ಲಿ ಮಾಂತೇಶ್ ಅನ್ನೋರು ವಾಸವಿದ್ದಾರೆ. ಅವರು ತಮ್ಮ ಮನೆಯಲ್ಲಿ ಇಟ್ಟಿದ್ದ ಪ್ಯಾಂಟ್​​​​​​ ಒಳಗೆ ನಾಗರ ಹಾವು ಬಂದು ಸೇರಿತ್ತು. ಹಾವು ಸೇರಿರೋದು ಮಾಂತೇಶ್ ಗಮನಕ್ಕೆ ಬರಲಿಲ್ಲ. ಹರಿಬರಿಯಲ್ಲಿ ಪ್ಯಾಂಟ್ ಧರಿಸಲು ಮುಂದಾಗುತ್ತಾರೆ. ಆಗ ಹಾವು ಬುಸ್ ಅಂತಾ ಹೆಡೆ ಎತ್ತಿ ಕಚ್ಚಲು ಮುಂದಾಗಿದೆ. ಹಾವನ್ನು ನೋಡಿದ ಮಾಂತೇಶ್ ಒಂದು ಕ್ಷಣ ಕಂಗಾಲ್ ಆಗಿದ್ದಾರೆ. ಕೊನೆಗೆ ಪ್ಯಾಂಟ್ ಎಸೆದು ಹಾವಿನಿಂದ ಬಚಾವ್ ಆಗಿದ್ದಾರೆ. ನಂತರ ಉರಗ ತಜ್ಞರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಪ್ರಶಾಂತ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.

Loading

Leave a Reply

Your email address will not be published. Required fields are marked *

error: Content is protected !!