ಪುಡಿ ರೌಡಿಗಳ ಅಟ್ಟಹಾಸ… ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ಲಾಂಗು ಮಚ್ಚು ಪ್ರದರ್ಶನ

ಬೆಳಗಾವಿ : ಕ್ಷುಲ್ಲಕ ಕಾರಣಕ್ಕಾಗಿ ಕೆಲ ಪುಡಿರೌಡಿಗಳು ಲಾಂಗು ಮಚ್ಚು ಹಿಡಿದು ಯುವಕರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮ ಮತ್ತು ಗುರ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ಲಾಂಗು ಮಚ್ಚು ಪ್ರದರ್ಶನ ಮಾಡುತ್ತಿದ್ಧಾರೆ, ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಶುರುವಾಗಿದೆ. ಹಳ್ಳೂರ ಗ್ರಾಮದ ಯುವಕರ ಮೇಲೆ ಅಟ್ಯಾಕ್ ಮಾಡಲು ಗ್ಯಾಂಗ್ ಬಂದಿದ್ದು, ಮಚ್ಚು ಲಾಂಗು ಪ್ರದರ್ಶನ ಮಾಡ್ತಿದ್ದನ್ನ ಕಂಡು ಯುವಕರ ಗ್ಯಾಂಗ್ ಗ್ರಾಮಸ್ಥರು ತಡೆದಿದ್ದರಿಂದ ಈ ವೇಳೆ ಗ್ರಾಮಸ್ಥರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದರು. ಪೊಲೀಸರ ಭಯವೇ ಇಲ್ಲದೇ ಪಕ್ಕದ ಊರಿಗೆ ಬಂದು ಹತ್ತಕ್ಕೂ ಅಧಿಕ ಯುವಕರು ದಾದಾಗಿರಿ ಮಾಡುತ್ತಿದ್ದಾರೆ. ಗ್ರಾಮಸ್ಥರು ಜೀವ ಪಣಕ್ಕಿಟ್ಟು ಇಬ್ಬರನ್ನ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಗಲಾಟೆ ಬಳಿಕ ಬಂದು ಗ್ರಾಮದಲ್ಲಿ ಪೊಲೀಸರ ರೌಂಡ್ಸ್ ಹಾಕಿದ್ದಾರೆ. ದಾದಾಗಿರಿ ಮಾಡಿದ ಯುವಕರ ವಿರುದ್ಧ ಕ್ರಮಕ್ಕೆ ಹಳ್ಳೂರ ಗ್ರಾಮಸ್ಥರ ಒತ್ತಾಯಿಸಿದರು. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
![]()