ಸೋಮವಾರ ರಾಶಿ ಭವಿಷ್ಯ ಮಾರ್ಚ್-07,2025
1 min read
ಮೇಷ ರಾಶಿ
ಮಕ್ಕಳ ಕೆಟ್ಟ ಅಭ್ಯಾಸಗಳಿಂದ ಅವಮಾನ, ಮನಸ್ಸಿಗೆ ನೋವು ಉಂಟಾಗಬಹುದು
ಆಸ್ತಿಯ ವಿಚಾರವಾಗಿ ವಾದ-ವಿವಾದಗಳು ಏರ್ಪಡಬಹುದು
ಹೊಸ ಹೊಸ ಬದಲಾವಣೆಯಾಗುವ ಸೂಚನೆಗಳು ಕಾಣಬಹುದು
ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಗೌರವ, ಪುರಸ್ಕಾರ ದೊರೆಯುವ ದಿನ
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುರ್ಗಾ ಹೋಮ ಮಾಡಿಸಬೇಕು
ವೃಷಭ ರಾಶಿ
ಈ ದಿನ ನಿಮಗೆ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ
ನಿಮ್ಮ ಬುಧ್ಧಿವಂತಿಕೆಯಿಂದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ
ಹಣದ ವಿಚಾರವಾಗಿ ಅಥವಾ ದೈಹಿಕ, ಮಾನಸಿಕ ತೊಂದರೆ ಸಾಧ್ಯತೆ
ಅಗತ್ಯವಿದ್ದಾಗ ಹಿರಿಯರ ಸಹಾಯ, ಸಲಹೆ ಪಡೆದುಕೊಂಡರೆ ಒಳ್ಳೆಯದು
ನಿಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಸ್ತುಗಳು ಕಳುವಾಗಬಹುದು ಜಾಗ್ರತೆ ವಹಿಸಿ
ನಿಮ್ಮಲ್ಲಿರುವ ಬೇರೆಯವರ ವಸ್ತುಗಳು ಕಳೆದು ಹೋಗುವ ಸಾಧ್ಯತೆ
ರಸ್ತೆಯಲ್ಲಿರುವ ಮರ ಅಥವಾ ಮರದ ಕೊಂಬೆಯಿಂದ ತೊಂದರೆ ಸಾಧ್ಯತೆ, ಎಚ್ಚರಿಕೆ
ಹಯಗ್ರೀವನನ್ನು ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ
ವಿವಾಹ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಡಬಹುದು
ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆ ಇರಲಿ ಶುಭವಾಗುತ್ತದೆ
ನಿಮ್ಮ ಕೆಲಸಕ್ಕೆ ಮನೆಯವರ ಸಹಾಯ, ಸಹಕಾರ ದೊರೆಯದೆ ಇರಬಹುದು
ಪ್ರತ್ಯಂಗಿರ ದೇವಿಯನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ಮಾಂತ್ರಿಕವಾದ ದೋಷ ನಿಮ್ಮನ್ನು ಮತ್ತು ಕುಟುಂಬವನ್ನು ಕಾಡಬಹುದು
ಅನಗತ್ಯ ಹಣ ಖರ್ಚು ಮಾಡಿ ಸಮಸ್ಯೆ ಬಗೆಹರಿಯದೆ ಒದ್ದಾಡಬೇಕಾಗಬಹುದು
ಇಲ್ಲಸಲ್ಲದ ವಿಚಾರಗಳೇ ಹೆಚ್ಚಾಗಿ ಚರ್ಚೆ ಮಾಡಬಹುದು
ಮಾನಸಿಕ ನೆಮ್ಮದಿಗಾಗಿ ಗುರು-ಹಿರಿಯರ ಸಲಹೆ ಮುಖ್ಯವಾಗುತ್ತದೆ
ಉಚ್ಚಾಟನಾ ಸುದರ್ಶನ ಹೋಮ ಮಾಡಿಸಬೇಕು
ಸಿಂಹ ರಾಶಿ
ದ್ರವ ಪದಾರ್ಥಗಳನ್ನು ವ್ಯಾಪಾರ ಮಾಡುವ ವ್ಯಕ್ತಿಗಳಿಗೆ ವಾಹನ ಅಪಘಾತವಾಗುವ ಸಾಧ್ಯತೆಯಿದೆ ಎಚ್ಚರಿಕೆ
ಅಪಘಾತದಿಂದ ಹೆಚ್ಚು ಹಣ ಖರ್ಚಾಗಬಹುದು, ಜಾಗ್ರತೆ ಇರಲಿ
ಇಂದು ಅನಿರೀಕ್ಷಿತ ಹಣ ಕೂಡ ನಿಮ್ಮ ಕೈ ಸೇರಬಹುದು
ಕಪಾಲಿನೀ ದೇವಿಯನ್ನು ಆರಾಧನೆ ಮಾಡಬೇಕು
ಕನ್ಯಾ ರಾಶಿ
ನಿಮ್ಮ ನಿಮ್ಮ ಕ್ಷೇತ್ರದಲ್ಲಿ ವಿಶೇಷ ಗೌರವ ಸಿಗುವ ದಿನ
ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ, ಸನ್ಮಾನ ಸಿಗುತ್ತವೆ
ಭೂ ವ್ಯಾಪಾರಿಗಳಿಗೆ ಉತ್ತಮವಾದ ದಿನ
ಇಂದು ಉತ್ತಮವಾದ ಕಾರ್ಯಗಳು ಆರಂಭವಾಗಬಹುದು
ಊಟವೂ ಸಕಾಲಕ್ಕೆ ದೊರೆಯದೇ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ
ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಸಿಗಬಹುದು
ಅನ್ನಪೂರ್ಣೇಶ್ವರಿಯನ್ನು ಆರಾಧನೆ ಮಾಡಬೇಕು
ತುಲಾ ರಾಶಿ
ಇಂದು ನಿಮ್ಮ ಆತ್ಮವಿಶ್ವಾಸದ ಜೊತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲವು
ನಿಮ್ಮ ಪ್ರತಿಭೆಯನ್ನ ವೈಯಕ್ತಿಕ ಲಾಭಕ್ಕಿಂತ ಸಮಾಜ ಸೇವೆಗೆ ಉಪಯೋಗಿಸಿ
ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಾ ಇನ್ನೂ ಹೆಚ್ಚಿನ ಮನ್ನಣೆಯನ್ನು ಪಡೆಯಿರಿ
ಮನೆಯ ಚಿಕ್ಕಮಕ್ಕಳ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಗಮನವಿರಲಿ
ರಾಜಕೀಯ ವ್ಯಕ್ತಿಗಳ ಹಾಗೂ ಗಣ್ಯರ ಬೆಂಬಲ ಹೆಚ್ಚಾಗಬಹುದು
ಕುಲದೇವತಾ ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ದೂರದೂರಿಗೆ ಪ್ರಯಾಣ ಮಾಡಬಹುದಾದ ದಿವಸ
ಪ್ರೇಯಸಿಯೊಂದಿಗೆ ನಿಮ್ಮ ಪ್ರಯಾಣ ಆನಂದವಾಗಿರುತ್ತದೆ
ಸ್ತ್ರೀಯರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿದರೆ ಲಾಭ ಪಡೆಯಬಹುದು
ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಾಣುವ ದಿನ
ಬರಬೇಕಾದ ಬಾಕಿ ಹಣ ನಿಮ್ಮ ಕೈಸೇರಬಹುದು
ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಬೇಕು
ಧನಸ್ಸು ರಾಶಿ
ವ್ಯಾಪಾರ-ವ್ಯವಹಾರಗಳಲ್ಲಿ ತಪ್ಪು ಸಂಭವಿಸಬಹುದು
ಸ್ನೇಹಿತರು ನಿಮ್ಮನ್ನು ವ್ಯವಹಾರದಿಂದ ಹೊರಗಿಟ್ಟು ರಹಸ್ಯವಾಗಿ ವ್ಯವಹರಿಸುತ್ತಾರೆ
ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಮಧ್ಯೆ ಅಸಮಾಧಾನ ಏರ್ಪಟ್ಟು ಕಲಹವಾಗಬಹುದು
ನಿಮ್ಮ ಸ್ನೇಹಿತರ ಜೊತೆ ವ್ಯವಹಾರವನ್ನ ರದ್ದು ಮಾಡಬಹುದು
ವ್ಯಾಪಾರ, ವ್ಯವಹಾರದಲ್ಲಿ ಪಾಲುದಾರಿಕೆಯಿಂದ ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು
ದುರ್ಗಾ ದೇವಿಯನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ನಿಮಗೆಲ್ಲಾ ಇದ್ರೂ ಇನ್ನು ಏನೇನೋ ಮಾಡಬೇಕೆಂದು ಬೇಡವಾದುದ್ದನ್ನು ಗಂಟು ಹಾಕಿಕೊಳ್ಳುತ್ತೀರಿ
ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಚಿಂತನೆಗಳು,ಯೋಜನೆಗಳು ಯಾರಿಗೂ ಸರಿಯಾಗಿ ಅರ್ಥವಾಗದೇ ಹಿನ್ನಡೆಯಾಗಬಹುದು
ನಿಮ್ಮಿಂದ ಹಲವರು ಉಪಕಾರ ಪಡೆದು ನಿಮ್ಮ ಸ್ವಭಾವಕ್ಕೆ ಬೇಸತ್ತು ದೂರವಾಗುತ್ತಾರೆ
ದೇವಿಯನ್ನು ದ್ರವ್ಯದಿಂದ ಆರಾಧಿಸಬೇಕು
ಕುಂಭ ರಾಶಿ
ವಿವಾಹದ ದೃಷ್ಟಿಯಿಂದ ನಿಮ್ಮ ಹಳೆಯ ಬಂಧುಗಳು ಹೊಸ ಸಂಬಂಧ ಬೆಳೆಸುವ ಅವಕಾಶವಿದೆ
ನಿಮ್ಮ ಮಾತು ಇಂದು ಬಹಳ ಮುಖ್ಯವಾಗಿರುತ್ತದೆ
ನಿಮ್ಮ ಹಣದ ಸ್ಥಿತಿ ಸುಧಾರಿಸುತ್ತದೆ
ಏಕರಾಶಿ ಏಕ ನಕ್ಷತ್ರದಲ್ಲಿರುವ ದಂಪತಿಗಳು ಇವತ್ತಿನ ಮಾತುಕತೆಗೆ, ವ್ಯವಹಾರಕ್ಕೆ ಕೇಂದ್ರ ಬಿಂದುವಾಗ್ತೀರಿ
ಸ್ವಯಂವರ ಪಾರ್ವತಿ ಆರಾಧನೆ ಮಾಡಬೇಕು
ಮೀನ ರಾಶಿ
ಚರ್ಮರೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಜಾಗರೂಕರಾಗಿರಬೇಕು
ನಿಮ್ಮ ಚರ್ಮರೋಗ ಹೆಚ್ಚಾಗುವ ಸೂಚನೆಗಳಿವೆ
ವೈದ್ಯರು ಹೇಳಿದ ಪಥ್ಯಗಳನ್ನು ಶಿಸ್ತಿನಿಂದ ಪಾಲಿಸಬೇಕು
ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ ಆನಂದವಾಗಿರುತ್ತೀರಿ
ಕುಟುಂಬದಲ್ಲಿ, ವ್ಯವಹಾರದಲ್ಲಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ
ಚರ್ಮರೋಗಿಗಳು ಅಮೃತ ಬಳ್ಳಿ ಎಲೆಗಳನ್ನು ಸೇವಿಸಿ
ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು
