ಬುಧವಾರ ರಾಶಿ ಭವಿಷ್ಯ- ಏಪ್ರಿಲ್ , 02,2025
1 min read
ಮೇಷ ರಾಶಿ
ಯಾರದ್ದಾದರೂ ಬೆಳವಣಿಗೆಗೆ ಕಾರಣವಾದರೂ ಹೇಳಿಕೊಳ್ಳುವಂತಿಲ್ಲ.
ಅನಾರೋಗ್ಯ ಪೀಡಿತರು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
ನಿಮಗೆ ಹಿತಶತೃಗಳಿಂದ ತೊಂದರೆ ಸಾಧ್ಯತೆಯಿದೆ, ಎಚ್ಚರಿಕೆ ಇರಲಿ
ಕುಟುಂಬದ ಸದಸ್ಯರ ಮಧ್ಯೆ ಕಲಹ ಸಾಧ್ಯತೆ ಇದೆ
ಇಂದು ಆದಷ್ಟು ಶಾಂತವಾಗಿರಿ, ನಿಮ್ಮ ಕೆಲಸ-ಕಾರ್ಯಗಳ ಬಗ್ಗೆ ಗಮನಹರಿಸಿ
ಈಶ್ವರನನ್ನು ಪ್ರಾರ್ಥನೆ ಮಾಡಬೇಕು
ವೃಷಭ ರಾಶಿ
ವಿಶ್ವಸ್ಥರ ಮೇಲಿನ ನಂಬಿಕೆ ದ್ವಂದ್ವದ ನಡುವೆ ಸಿಲಿಕುವುದು.
ದೊಡ್ಡ ಉದ್ದಿಮೆ-ಕೈಗಾರಿಕೆಗಳನ್ನು ಹೊಂದಿರುವವರಿಗೆ ಶುಭಫಲ
ಹಿಂದೆ ಮಾಡಿದ್ದ ಉತ್ತಮ ಕೆಲಸಗಳಿಗೆ ಇಂದು ಮೆಚ್ಚುಗೆ ಸಿಗುತ್ತದೆ
ಕುಟುಂಬಕ್ಕೆ ಹೊಸ ಅತಿಥಿ ಆಗಮನ ಸಾಧ್ಯತೆ ಇದೆ
ನಿಮ್ಮ ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
ಬೇರೆಯವರಿಗೆ ಸಹಾಯ ಮಾಡುತ್ತೀರಿ, ಇದರಿಂದ ಮನಸ್ಸಿಗೆ ತೃಪ್ತಿ
ಹೊಸ ಕೆಲಸಗಳು, ಯೋಜನೆಗಳು ಆರಂಭವಾಗುವ ದಿನ
ಇಷ್ಟದೇವತಾ ಪ್ರಾರ್ಥನೆ ಮಾಡಬೇಕು
ಮಿಥುನ ರಾಶಿ
ವ್ಯಾಪಾರದಿಂದ ಸಂಗಾತಿಯ ನಡುವೆ ಮನಸ್ತಾಪ
ಅವಸರದಲ್ಲಿ ಮಾಡಿದ ಕೆಲಸಗಳಿಂದ ನಷ್ಟ ಸಾಧ್ಯತೆ, ಎಚ್ಚರಿಕೆ ಇರಲಿ
ವಾಹನ ಚಾಲಕರು ನಿಯಮಾನುಸಾರ ವಾಹನ ಚಾಲನೆ ಮಾಡಿದರೆ ಒಳ್ಳೆಯದು
ಇಂದು ಉದ್ಯೋಗ, ವ್ಯಾಪಾರಿಗಳಿಗೆ ಉದ್ವೇಗ ಹೆಚ್ಚು ಆದ್ದರಿಂದ ತಾಳ್ಮೆಯಿಂದ ವರ್ತಿಸಿ
ಹೊಸ ಕೆಲಸವನ್ನು ಶುರು ಮಾಡುವ ಯೋಚನೆ ಬರುತ್ತದೆ, ಅನುಕೂಲವೂ ಇದೆ
ಪೂರ್ವಿಕರು, ಹಿರಿಯರು ಮಾಡಿದ ಧರ್ಮ, ಕರ್ಮಗಳಿಂದ ನಿಮಗೆ ಯಶಸ್ಸು ಸಿಗುತ್ತದೆ
ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣಕ್ಕಾಗಿ ವೇದಿಕೆ ಸಿದ್ಧಪಡಿಸಿಕೊಳ್ಳಲು ಉತ್ತಮ ದಿನ
ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಬೇಕು
ಕಟಕ ರಾಶಿ
ವೃತ್ತಿಪರರು ನಿಮ್ಮ ಮೇಲಾಧಿಕಾರಿಗಳ ವಿಶ್ವಾಸಕ್ಕೆ ಪಾತ್ರರಾಗುತ್ತೀರಿ
ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು
ಸಮಾಜದಲ್ಲಿ ನಿಮ್ಮ ಚಿಂತನೆ-ವಿಚಾರಗಳಿಗೆ ಮನ್ನಣೆ ದೊರೆಯುತ್ತದೆ
ಇಂದು ನಿಮ್ಮ ಮಾತುಗಳಲ್ಲಿ ಗೊಂದಲವಿಲ್ಲದೆ ಸ್ಪಷ್ಟವಾಗಿರಲಿ
ಬಹಳ ಕಾಲದ ನಂತರ ನಿಮ್ಮ ಪ್ರೀತಿ ಪಾತ್ರರ ದರ್ಶನದಿಂದ ಮನಸ್ಸಿಗೆ ಆನಂದ
ಮಕ್ಕಳ ಆರೋಗ್ಯ ವ್ಯತ್ಯಾಸದಿಂದ ಸಾಯಂಕಾಲದ ಸಮಯಕ್ಕೆ ಬೇಸರ ಸಾಧ್ಯತೆ
ಸಾಯಂಕಾಲದ ಸೂರ್ಯನನ್ನು ಪ್ರಾರ್ಥನೆ ಮಾಡಬೇಕು
ಸಿಂಹ ರಾಶಿ
ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಸುಳ್ಳಾಡುವಿರಿ.
ಜಮೀನು-ಆಸ್ತಿ ವಿಚಾರಗಳ ಬಗ್ಗೆ ಪರ-ವಿರೋಧ ಚರ್ಚೆ ಸಾಧ್ಯತೆ
ಮನೆಯ ಹೊರಗಡೆ ವಿನಾಕಾರಣ ಜಗಳವಾಗಬಹುದು ಎಚ್ಚರಿಕೆ ಇರಲಿ
ನೀವು ಬಳಸುವ ವಾಹನ ಬಗ್ಗೆ ಜಾಗ್ರತೆ ಇರಲಿ, ವಾಹನದಿಂದ ನಷ್ಟವಿದೆ
ಇಂದು ವಾಹನ ಚಾಲನೆ ಮಾಡದೆ ಇದ್ದರೆ ಒಳ್ಳೆಯದು
ಹೃದ್ರೋಗಿಗಳು ತುಂಬಾ ಕಷ್ಟ ಅನುಭವಿಸುವ ಸಾಧ್ಯತೆ ಇದೆ
ಔಷಧೋಪಚಾರಗಳು ಪರಿಣಾಮ ಬೀರದೆ ಇರಬಹುದು ಎಚ್ಚರ
ಉಗ್ರ ನರಸಿಂಹನ ಪ್ರಾರ್ಥನೆ ಮಾಡಬೇಕು
ಕನ್ಯಾ ರಾಶಿ
ನಿಮ್ಮ ಪ್ರಭಾವವು ಇಂದು ಹೆಚ್ಚು ಮಾಡಿಕೊಳ್ಳುವಿರಿ. ಸ್ತ್ರೀಯರು ಸಾಹಸಕ್ಕೆ ಕೈಹಾಕುವರು
ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಾಧ್ಯತೆ
ಕಾರ್ಯಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಸಾಧನೆ, ಬದಲಾವಣೆ ಸಾಧ್ಯತೆ
ಎಲ್ಲರ ಹಾರೈಕೆಯಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯತೆ
ವೈವಾಹಿಕ ಜೀವನ ಸುಖದಾಯ, ಅವಿವಾಹಿತರಿಗೆ ವಿವಾಹ ವಿಚಾರದಲ್ಲಿ ಶುಭ ಫಲ
ಆದಾಯದಲ್ಲಿ ಹೆಚ್ಚಳ, ಆತ್ಮವಿಶ್ವಾಸ ಹೆಚ್ಚಾಗಿ ಸಂತೋಷ ಉಂಟಾಗಬಹುದು
ಶ್ರೀಲಕ್ಷ್ಮಿದೇವಿಯನ್ನು ಪ್ರಾರ್ಥನೆ ಮಾಡಬೇಕು
ತುಲಾ ರಾಶಿ
ಬೇರೆಯವರ ವಿಷಯಕ್ಕೆ ತಲೆ ಹಾಕಬೇಡಿ, ಅವಮಾನ ಸಾಧ್ಯತೆ
ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು.
ಚಿನ್ನಾಭರಣಗಳ ಖರೀದಿ ಬೇಡ, ಮನೆಯಲ್ಲಿರುವ ಆಭರಣಗಳ ಬಗ್ಗೆ ಜಾಗ್ರತೆ ಇರಲಿ
ಹೊಸ ಸಂಪರ್ಕಗಳಿಂದ ಮನಸ್ಸಿಗೆ ಖುಷಿಯಾಗಬಹುದು
ಇಂದು ಮಕ್ಕಳ ಶಿಕ್ಷಣ ವಿಚಾರವಾಗಿ ಉತ್ತಮ ದಿನ
ನಿಮ್ಮ ಆಲೋಚನೆಗಳು ಕುಟುಂಬಕ್ಕೆ ಸೀಮಿತವಾಗಿರದೆ ಸಮಾಜಮುಖಿಯಾಗಿರಲಿ
ವೈಯಕ್ತಿಕ ಲಾಭಕ್ಕೆ ನಂಬಿದವರಿಂದ ಮೋಸ ಸಾಧ್ಯತೆ
ವೀರಾಂಜನೇಯನ ಪ್ರಾರ್ಥನೆ ಮಾಡಬೇಕು
ವೃಶ್ಚಿಕ ರಾಶಿ
ಇಂದು ಹಣ ಹೂಡಿಕೆಯಿಂದ ಮನಸ್ಸಿಗೆ ಸಮಾಧಾನ ಸಿಗಬಹುದು
ಆಕಸ್ಮಿಕವಾಗಿ ಹಣ ಸಿಗುವುದರಿಂದ ಅಹಂಕಾರ ಬರಬಹುದು ಎಚ್ಚರ
ಸಂಬಂಧಿಕರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ
ನಿಮ್ಮ ತಾಳ್ಮೆ – ವಿನಯ ಮಾತ್ರ ನಿಮ್ಮನ್ನು ಕಾಪಾಡಬಲ್ಲದು
ನಿಮ್ಮನ್ನು ನೀವು ಮರೆಯುವ ಸಾಧ್ಯತೆ ಇದೆ
ಹಣದ ವ್ಯವಹಾರ-ಹೂಡಿಕೆಯನ್ನು ಮಧ್ಯಾಹ್ನದ ನಂತರ ಮಾಡಿ
ಮನೆಯಲ್ಲಿ ಇಂದು ಸಂಭ್ರಮದ ವಾತಾವರಣ ಇರುವುದು
ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಬೇಕು
ಧನಸ್ಸು ರಾಶಿ
ಸೈದ್ಧಾಂತಿಕವಾಗಿ ಮಾಡಬೇಕಿರುವ ಸಮಸ್ಯೆಗಳ ಪರಿಹಾರಕ್ಕೆ ಹಿನ್ನಡೆ
ನಿಮ್ಮ ಶತ್ರುಗಳ ಮಾತಿನಿಂದ ನಿಮ್ಮ ಆತ್ಮೀಯರು ನಿಮ್ಮನ್ನು ಅವಮಾನಿಸುವ ಸಾಧ್ಯತೆ
ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸುವುದಿಲ್ಲ, ಮಾತಾಡಲು ಒಪ್ಪುವುದಿಲ್ಲ
ಇಂದು ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಅಹಂಕಾರ ಬಿಟ್ಟರೆ ಒಳ್ಳೆಯದು
ಸಮಾಜದಲ್ಲಿ ಚಿಕ್ಕವರ ಮುಂದೆ ಚಿಕ್ಕವರಾಗುವ ಸಾಧ್ಯತೆ ಇದೆ
ಪ್ರಯಾಣದಲ್ಲಿ ಉಂಟಾದ ಪರಿಚಯದಿಂದ ಅಪಾಯ ಬರಬಹುದು.
ಕಲ್ಕಿ ಭಗವಾನರನ್ನು ಪ್ರಾರ್ಥನೆ ಮಾಡಬೇಕು
ಮಕರ ರಾಶಿ
ಸ್ಮೇಹಿತರೊಂದಿಗೆ ನಿಮ್ಮ ವಿದ್ಯಾಭ್ಯಾಸ, ಕೆಲಸ, ಹೊಸ ಆಲೋಚನೆಗಳ ಬಗ್ಗೆ ಚರ್ಚೆ ಮಾಡಬಹುದು
ಕೆಲಸದ ಒತ್ತಡ ಇದ್ದಾಗ್ಯೂ ಜನಸೇವೆ ಮಾಡಿ ಗೌರವ ಹೆಚ್ಚಾಗುತ್ತದೆ
ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು
ಬೆಳ್ಳಂಬೆಳಗ್ಗೆ ಕಹಿ ಘಟನೆಯಿಂದ ಮನೆಯಲ್ಲಿ ಅಶಾಂತಿ ಸಾಧ್ಯತೆಯಿದೆ
ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
ನೀವಾಡುವ ಮಾತುಗಳ ಬಗ್ಗೆ ಎಚ್ಚರಿಕೆಯಿರಲಿ
ಕೋದಂಡರಾಮನ ಪ್ರಾರ್ಥನೆ ಮಾಡಬೇಕು
ಕುಂಭ ರಾಶಿ
ಇಂದು ಹಣದ ವಿಚಾರದಲ್ಲಿ ಗೊಂದಲ ಸಾಧ್ಯತೆ
ಆದಾಯ-ಖರ್ಚಿನ ಅಸ್ಪಷ್ಟತೆಯಿಂದ ತೊಳಲಾಡಬಹುದು
ಗಂಟಲಿನ ಸಮಸ್ಯೆ ಕಾಡಬಹುದು ತಾತ್ಸಾರ ಮಾಡಬೇಡಿ
ಸಂಗೀತಕಾರರಿಗೆ ತಮ್ಮ ಕಾರ್ಯದಲ್ಲಿ ಹಿನ್ನಡೆ, ಕಾರ್ಯಕ್ರಮ ರದ್ದಾಗುವ ಸೂಚನೆ
ರಾಜಕಾರಣಿಗಳಿಗೆ ಹೊಸ ಸುದ್ದಿ ಸಾಧ್ಯತೆ
ಮಕ್ಕಳ ಉತ್ತಮ ಫಲಿತಾಂಶದಿಂದ ಸಮಾಧಾನ
ನಿಮ್ಮಿಂದ ಕುಟುಂಬಕ್ಕೆ ಕೀರ್ತಿ. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು
ಶಿವಾರಾಧನೆ ಮಾಡಬೇಕು
ಮೀನ ರಾಶಿ
ತತ್ವ ಸಿದ್ಧಾಂತದ ಆಧಾರದ ಮೇಲೆ ಸಮಸ್ಯೆಗಳನ್ನು ಬಗೆಹರಿಸಲು ಕಷ್ಟದ ದಿನ
ಪ್ರಾಯೋಗಿಕ ರೀತಿಯಿಂದ ಬಗೆಹರಿಸಿಕೊಳ್ಳಿ
ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಆತ್ಮಗೌರವಕ್ಕೆ ಕೊರತೆ ಸಾಧ್ಯತೆ
ವಿದ್ಯಾರ್ಥಿಗಳಿಗೆ ಸಮಸ್ಯೆ ಬಗೆ ಹರಿಯುತ್ತದೆ
ಮನೆ ದೇವಾಲಯಗಳಲ್ಲಿ ಕುಟುಂಬದ ಹಿತಕ್ಕಾಗಿ ಧರ್ಮಕಾರ್ಯ ನಡೆಯುತ್ತವೆ
ಮನಸ್ಸಿಗೆ ಆಹ್ಲಾದ ನೆಮ್ಮದಿ ದೊರೆಯುತ್ತದೆ
ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು
ನವಗ್ರಹರ ಆರಾಧನೆ ಮಾಡಬೇಕು
