January 29, 2026

c24kannada

ವಸ್ತುಸ್ಥಿತಿಯತ್ತ

ಅನಂತ್ ಅಂಬಾನಿ ಹುಟ್ಟುಹಬ್ಬದ ಹಿನ್ನೆಲೆ ಪಾದಯಾತ್ರೆ.. ರಸ್ತೆಯಲ್ಲಿ ಹೋಗುವಾಗ ದುಪ್ಪಟ್ಟು ಬೆಲೆಗೆ ಕೋಳಿಗಳ ಖರೀದಿ ಮಾಡಿದ ಅನಂತ್ ಅಂಬಾನಿ

Share it

ಏಷ್ಯಾದಲ್ಲೇ   ಅತ್ಯಂತ ಶ್ರೀಮಂತ ಕುಟುಂಬ ಅಂಬಾನಿ ಕುಟುಂಬ ,  ಕೇವಲ ದುಡ್ಡು, ಶ್ರೀಮಂತಿಕೆ ವಿಚಾರವಷ್ಟೇ ಅಲ್ಲ, ಇನ್ನೂ ಹತ್ತಾರು ಒಳ್ಳೆಯ ವಿಚಾರಗಳಿಗೆ ಈ ಕುಟುಂಬ ಹೆಸರುವಾಸಿಯಾಗಿದೆ.  ಈಗ್ಲೂ ಅಂಥಾದ್ದೇ ಒಂದು ವಿಚಾರ ದೇಶದ ಜನರು ಹುಬ್ಬೇರಿಸುವಂತೆ ಮಾಡಿದೆ. ಕಳೆದ ವರ್ಷ ವಿಶ್ವವೇ ಬೆರಗಾಗುವಂತೆ ಮದುವೆಯಾದ ಅನಂತ್ ಅಂಬಾನಿ ಇಟ್ಟಿರೋ ಹೆಜ್ಜೆ ಬಗ್ಗೆ ಇಡೀ ದೇಶದ ಜನರೆ  ಮಾತನಾಡುತ್ತಿದ್ದಾರೆ..  ಶ್ರೀಮಂತರ ಮಕ್ಕಳು ಅಂದ್ರೆ ಅವರ ಬರ್ತ್​ಡೇನಾ ಗ್ರ್ಯಾಂಡ್​ ಆಗಿ ಹೋಟೆಲ್​ಗಳಲ್ಲಿ ಪಾರ್ಟಿ ಮಾಡ್ಕೊಂಡು, ಕುಡ್ಕೊಂಡು ತಿನ್ಕೊಂಡು ಎಂಜಾಯ್​ ಮಾಡ್ತಾರೆ. ಆದ್ರೆ, ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬವನ್ನ ಅರ್ಥಪೂರ್ಣವಾಗಿ ಆಚರಿಸಲು ಪಾದಯಾತ್ರೆ ಮಾಡ್ತಿದ್ದಾರೆ.

 

ಅನಂತ್​ ಅಂಬಾನಿ ತಮ್ಮ 30ನೇ ವರ್ಷದ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಧಾರ್ಮಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಶ್ರೀರಾಮ ಹಾಗೂ ಶ್ರೀಕೃಷ್ಣನ ಪರಮ ಭಕ್ತರಾಗಿರೋ ಅನಂತ್‌, ಜಾಮ್‌ನಗರದಿಂದ ದ್ವಾರಕಾ ನಗರಿಗೆ ಪಾದಯಾತ್ರೆ ಮಾಡ್ತಿದ್ದಾರೆ. ಬರೋಬ್ಬರಿ ಒಟ್ಟು 140 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಅನಂತ್ ಕ್ರಮಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಬ್ಬವನ್ನ ದೈವ ಭಕ್ತಿಯ ಮೂಲಕ ಆಚರಿಸುತ್ತಿದ್ದಾರೆ. ಯುವ ಉದ್ಯಮಿಯ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

ಅನಂತ್ ಅಂಬಾನಿ ತಮ್ಮ ಪಾದಯಾತ್ರೆ ಮಾಡುವಾಗ ರಸ್ತೆಯಲ್ಲಿ ಟ್ರಕ್‌ವೊಂದು 250 ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಬಳಿಕ ಅವುಗಳನ್ನು ವಧೆ ಮಾಡಲಾಗುತ್ತಿತ್ತು. ಆದರೆ ಕೋಳಿಗಳನ್ನು ನೋಡಿದ ಅನಂತ್, ತಕ್ಷಣ ಆ ಟ್ರಕ್​ ಅನ್ನು ನಿಲ್ಲಿಸಿ, ಚಾಲಕನೊಂದಿಗೆ ಮಾತನಾಡಿದ್ದಾರೆ. ಒಂದೊಂದು ಕೋಳಿಗೆ ದುಪ್ಪಟ್ಟು ಬೆಲೆ ಕೊಟ್ಟು ಎಲ್ಲ 250 ಕೋಳಿಗಳನ್ನು ಖರೀದಿಸಿ ಅವುಗಳನ್ನು ರಕ್ಷಣೆ ಮಾಡಲೆಂದು ಕನಸಿನ ಕೂಸು ಆದ ವಂತರಾಗೆ ಕಳುಹಿಸಿಕೊಟ್ಟಿದ್ದಾರೆ. ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ ಹಿನ್ನೆಲೆಯಲ್ಲಿ ಅನಂತ್ ಒಂದು ಕೋಳಿಯನ್ನ ಕೈಯಲ್ಲಿಡಿದು, ಜೈ ದ್ವಾರಕಾಧೀಶ ಎನ್ನುತ್ತಾ ತಮ್ಮ ಪಾದಯಾತ್ರೆ ಮುಂದುವರೆಸಿದರು.

 

ಏ.10 ರಂದು ಹುಟ್ಟುಹಬ್ಬ, ಅನಂತ್ ಅಂಬಾನಿ ಪಾದಯಾತ್ರೆ

ಮಾ. 27 ರಂದು ಅನಂತ್ ಅಂಬಾನಿ ಪಾದಯಾತ್ರೆ ಆರಂಭವಾಗಿದೆ

ಜಾಮ್ ನಗರದಿಂದ ದ್ವಾರಕಾಗೆ 140 ಕಿ.ಮೀ. ಪಾದಯಾತ್ರೆ

ನಿತ್ಯ 20 ಕಿ.ಮೀ, 12 ರಿಂದ 13 ದಿನ ಅನಂತ್‌ ಪಾದಯಾತ್ರೆ

ಹೈವೇ ಪಕ್ಕದಲ್ಲೇ ರಾತ್ರಿ ಹೊತ್ತು ಅನಂತ್‌ ಅಂಬಾನಿ ಕಾಲ್ನಡಿಗೆ

ಏಪ್ರಿಲ್ 8 ರಂದು ಅನಂತ್ ಅಂಬಾನಿ ದ್ವಾರಕ ತಲುಪುತ್ತಾರೆ

ಏಪ್ರಿಲ್ 10ರಂದು  ಅನಂತ್ ಅಂಬಾನಿ ಪತ್ನಿ ರಾಧಿಕಾ ಜೊತೆ ಶ್ರೀಕೃಷ್ಣನ ದರ್ಶನ ಮಾಡುತ್ತಾರೆ

 

Loading

Leave a Reply

Your email address will not be published. Required fields are marked *

error: Content is protected !!