ಹುಸ್ಕೂರು ಕುರುಜು ಬಿದ್ದ ಪ್ರಕರಣದ ಹೊಣೆಗಾರರನ್ನಾಗಿಸಿ ಕೆಳ ಹಂತದ ಕಂದಾಯ ಅಧಿಕಾರಿಗಳನ್ನ ವಜಾ ಆದೇಶ. ಪ್ರತಿಭಟನೆ.
https://youtu.be/QVT-3eg65zA?si=5irkVyW9uGvcrjS2
ಹುಸ್ಕೂರು ಕುರುಜು ಬಿದ್ದ ಪ್ರಕರಣದ ಹೊಣೆಗಾರರನ್ನಾಗಿಸಿ ಕೆಳ ಹಂತದ ಕಂದಾಯ ಅಧಿಕಾರಿಗಳನ್ನ ವಜಾ ಆದೇಶ. ಪ್ರತಿಭಟನೆ.
ಬೆಂ,ಆನೇಕಲ್,ಮಾ,28: ತಾಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆಯ ಎರೆಡು ಕುರುಜು ಕುಸಿದು ಇಬ್ಬರು ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂದಿಸಿದಂತೆ ಇಬ್ಬರು ಕೆಳ ಹಂತದ ಕಂದಾಯ ಅಧಿಕಾರಿಗಳನ್ನ ವಜಾಗೊಳಿಸಿದ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಖಂಡನೆ ವ್ಯಕ್ತವಾಯಿತು.
ಆನೇಕಲ್ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡ ಆರ್ಪಿಐ ಕಾರ್ಯಕರ್ತರು ಕೂಡಲೇ ವಜಾ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಇಟ್ಟಂತೆ, ನಿಷ್ಠಾವಂತ ಆರ್ ಐ ಆಗಿ ಕೆಲಸ ನಿರ್ವಹಿಸಿತ್ತಿರುವ ಪ್ರಶಾಂತ್ ಮತ್ತು ಗ್ರಾಮಲೆಕ್ಕಿಗ ಕಾರ್ತಿಕ್ರನ್ನ ಹೊಣೆಗಾರರನ್ನಾಗಿಸಿ ವಜಾ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿರುವುದು ಖಂಡನೀಯ ಎಂದು ಪ್ರಜ್ವಲ್ ಆಕ್ರೋಶ ವ್ಯಕ್ತಪಡಿಸಿದರು.
ಇಂಡ್ಲವಾಡಿ ಗ್ರಾ ಪಂ ಉಪಾಧ್ಯಕ್ಷ ಆದೂರು ಪ್ರಕಾಶ್ ಮಾತನಾಡಿ ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವಂತಹ ಕೆಲಸವಾಗಬಾರದು ಸಾರ್ವಜನಿಕ ವಲಯದಲ್ಲಿ ಒಂದು ಕಪ್ಪು ಚುಕ್ಕೆಯನ್ನು ಇಟ್ಟುಕೊಳ್ಳದ ಪ್ರಶಾಂತ್ ರ ಅಮಾನತ್ತು ಪಡಿಸಿರುವುದು ಖಂಡನೀಯ, ಇದಕ್ಕೆ ಅನುಮತಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕು ಜಾತ್ರೆಯಲ್ಲಿ ತೇರಿನಡಿ ಸಿಕ್ಕಿ ಪ್ರಾಣ ಕಳೆದುಕೊಂಡ ಬಡವರಿಗೆ ಸರ್ಕಾರ ತಲಾ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ಹೊಂಪಲಘಟ್ಟ ರವಿ ಮಾತನಾಡಿ ಅಳತೆಗೆ ಮೀರಿ ರಥವನ್ನು ಕಟ್ಟಿ ತಂದವರ ಮೇಲೆ ಕ್ರಮ ಜರುಗಿಸಲು ಧೈರ್ಯವಿಲ್ಲದ ಹೇಡಿ ಅಧಿಕಾರಿಗಳು ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಅಮಾನತು ಪಡಿಸಿರುವುದು ಪ್ರಾಮಾಣಿಕತೆಗೆ ಮಾಡಿದ ಅಪಮಾನವಾಗಿದೆ ಪ್ರಶಾಂತ್ ರವರನ್ನು ಸೇವೆಯಲ್ಲಿ ಮುಂದುವರಿಸಲು ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು
ಪ್ರತಿಭಟನೆಯಲ್ಲಿ ದೊಡ್ಡಹಾಗಡೆ ಕೃಷ್ಣಪ್ಪ. ಸಿ ಕೃಷ್ಣ ಮಹೇಂದ್ರ ರಾಮಚಂದ್ರ, ದೊಡ್ಡ ಹಾಗಡೆ ಎಲ್ಲಪ್ಪ ಸಮಂದೂರು ಚಿನ್ನಪ್ಪ ಸುಬ್ರಮಣಿ ಇದ್ದರು.
![]()