c24kannada

ವಸ್ತುಸ್ಥಿತಿಯತ್ತ

ಡಿಕೆಶಿವಕುಮಾರ್‌ ಸಿಎಂ ಆಗುವ ಬಗ್ಗೆ ಧ್ರುವ ಸರ್ಜಾ ಅಚ್ಚರಿ ಹೇಳಿಕೆ.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಾಜಕೀಯ ಮಾತು..!

Share it

ನಟ ಧ್ರುವ ಸರ್ಜಾ ಕೂಡ ಡಿ.ಕೆ ಶಿವಕುಮಾರ್‌ನ ಫ್ಯೂಚರ್ ಸಿಎಂ ಅಂತ ಕರೆಯುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಡಿಸಿಎಂ ಡಿಕೆಶಿ ಮಾಲೀಕತ್ವದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾರ್ಯಕ್ರಮದಲ್ಲಿ ಸ್ಪೆಷಲ್ ಗೆಸ್ಟ್ ಆಗಿ ನಟ ಧ್ರುವ ಸರ್ಜಾ ಭಾಗಿಯಾಗಿದ್ದರು .. ವೇದಿಕೆ ಉದ್ದೇಶಿಸಿ ಮಾತನಾಡುವ ವೇಳೆ ನಾನು ಯಾರ ಬಗ್ಗೆ ಮಾತಾಡ್ತಿದ್ದೀನಿ ಗೊತ್ತಾ.. ನಾನು ಫ್ಯೂಚರ್ ಸಿಎಂ ಬಗ್ಗೆ ಮಾತನಾಡ್ತಾ ಇದ್ದೀನಿ ಎಂದ ಧ್ರುವ  ಸರ್ಜಾ ಡಿಕೆಶಿವಕುಮಾರ್ ಅವರನ್ನು  ಹೊಗಳುವ ವೇಳೆ ಪರೋಕ್ಷ ಹಿಂಟ್ಸ್ ಕೊಟ್ಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಮುಂದಿನ ಸಿಎಂ ಆಗಬೇಕು ಅನ್ನೋದು ಅವರ ಕುಟುಂಬಸ್ಥರು, ಅಭಿಮಾನಿಗಳ ಕನಸು. ಸ್ವತಃ ಡಿಕೆಶಿವಕುಮಾರ್  ಕೂಡ ಮುಖ್ಯಮಂತ್ರಿ ಕುರ್ಚಿಗೇರಲು ಎಲ್ಲಾ ಕಸರತ್ತು ನಡೆಸ್ತಿದ್ದಾರೆ. ಈ ಮಧ್ಯೆ ಆ್ಯಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ ಕೂಡ ಮುಂದಿನ ಸಿಎಂ ಡಿಕೆಶಿ ಅಂತ ಹೇಳುವ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ.‌ ಧ್ರುವ ಸರ್ಜಾ ಹೇಳಿಕೆಗೆ ಚಪ್ಪಾಳೆ ಹೊಡೆದ ವಿದ್ಯಾರ್ಥಿಗಳು ಕೇಕೆ ಹಾಕಿದ್ದಾರೆ.

 

ಟೈಂ ಮ್ಯಾನೇಜ್ಮೆಂಟ್ ಅಂತಾ ಮಾತೋಡದ್ಕಿಂತ ಮುಂಚೆ ನಾನು ಅಣ್ಣನ ಕೇಳುತ್ತಿದ್ದೆ. ಅಣ್ಣಾ ಎಷ್ಟು ಗಂಟೆಗೆ ಮಲಗುತ್ತೀರಾ? ಎಷ್ಟು ಗಂಟೆಗೆ ಎದ್ದೇಳ್ತೀರಾ ಎಂದು. ಪಾಪ ಅವರು, ತಮ್ಮ ಬ್ಯುಸಿ ಶೆಡ್ಯೂಲ್ ಹೇಳಿದರು. ರಾತ್ರಿ 2.30 ಮಲಗಿಕೊಂಡು ಬೆಳಗ್ಗೆ 6.30ಗೆ ಎದ್ದೆ ಅಂದ್ರು. ಈ ಸ್ಥಾನಕ್ಕೆ ಬರೋದಕ್ಕೆ ಇದೇ ರೀತಿ ಎಷ್ಟೋ ವರ್ಷದಿಂದ ಮಾಡುತ್ತಿರುತ್ತಾರೆ. ನಾನು ಯಾರು ಬಗ್ಗೆ ಮಾತನಾಡುತ್ತಿದ್ದೇನೆ ಗೊತ್ತಾಯ್ತಾ..? ಏ ನಮ್ಮ ಫ್ಯೂಚರ್ ಸಿಎಂ ಬಗ್ಗೆ ಮಾತಾಡ್ತಾ ಇದ್ದೀನಪ್ಪ ಎಂದು ಧ್ರುವ ಸರ್ಜಾ ಹೇಳಿದರು. ಒಟ್ಟಾರೆ, ನಾನು ಮುಂದಿನ ಸಿಎಂ ಆಗ್ಬೇಕು ಅಂತ ಕನವರಿಸ್ತಿರೋ ಡಿಕೆಶಿವಕುಮಾರ್ ಗೆ     ಫ್ಯೂಚರ್ ಸಿಎಂ ಎನ್ನುವ ಮೂಲಕ ನಟ ಧ್ರುವ ಸರ್ಜಾ ಕೂಡ ಬೆಂಬಲ ನೀಡಿರೋದು ಡಿಕೆಶಿವಕುಮಾರ್‌ ಗೆ  ಉತ್ಸಾಹ ಇಮ್ಮಡಿಸಿದಂತಾಗಿದೆ.

 

Loading

Leave a Reply

Your email address will not be published. Required fields are marked *

error: Content is protected !!