[t4b-ticker]

ರೈಲ್ವೆ ನೇಮಕಾತಿ ಮಂಡಳಿಯಿಂದ SSLC, ITI, BE ಮುಗಿಸಿದವ್ರಿಗೆ ಗುಡ್​​ನ್ಯೂಸ್​.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read
Share it

ರೈಲ್ವೆ ನೇಮಕಾತಿ ಮಂಡಳಿಯಿಂದ SSLC, ITI, BE ಮುಗಿಸಿದವ್ರಿಗೆ ಗುಡ್​​ನ್ಯೂಸ್​.. 9,970 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈಗಿನ ಕಾಲದಲ್ಲಿ ಉದ್ಯೋಗ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಹೇಗಾದರೂ ಮಾಡಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದು ಟಾರ್ಗೆಟ್ ಇಟ್ಟುಕೊಂಡವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ.  ರೈಲ್ವೆ ನೇಮಕಾತಿ ಮಂಡಳಿಯು ದೊಡ್ಡ ಮಟ್ಟದಲ್ಲಿ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ.

 

ಭಾರತ ಸರ್ಕಾರದಡಿ ಬರುವ ರೈಲ್ವೆ ನೇಮಕಾತಿ ಮಂಡಳಿಯು ಬೃಹತ್ ಉದ್ಯೋಗಗಳನ್ನು ಕುರಿತಂತೆ ನೋಟಿಫಿಕೇಶನ್ ಅನ್ನು ಈಗಾಗಲೇ ರಿಲೀಸ್ ಮಾಡಿದೆ. ದೇಶದ್ಯಾಂತ ಹಲವಾರು ರೈಲ್ವೆ ವಲಯಗಳಲ್ಲಿ ಕೆಲಸಗಳು ಖಾಲಿ ಇವೆ. ಇವುಗಳಲ್ಲಿ ಪೂರ್ವ ಕರಾವಳಿ ರೈಲ್ವೆ, ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಅಭ್ಯರ್ಥಿಗಳೆಲ್ಲಾ ಇಲಾಖೆಯ ಅಧಿಕೃತ ವೆಬ್​ಸೈಟ್​ನಿಂದ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಆರ್​ಆರ್​ಬಿ ಸದ್ಯ ಕರೆದಿರುವ ಹುದ್ದೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿರುತ್ತದೆ. ಅರ್ಜಿ ಶುಲ್ಕ, ವಿದ್ಯಾರ್ಹತೆ, ಎಷ್ಟು ಉದ್ಯೋಗಗಳು, ಆಯ್ಕೆ ಪ್ರಕ್ರಿಯೆ ಇತ್ಯಾದಿ ಮಾಹಿತಿ ಇಲ್ಲಿದೆ. ಅಭ್ಯರ್ಥಿಗಳು ಎಲ್ಲವನ್ನು ಗಮನದಲ್ಲಿಟ್ಟು ಓದಿಕೊಂಡು ವೃತ್ತಿ ಪಡೆಯಲು ಶ್ರಮಿಸಬೇಕು.

 

ಉದ್ಯೋಗದ ಹೆಸರು – ಸಹಾಯಕ ಲೋಕೋ ಪೈಲಟ್   (ALP)

ಎಷ್ಟು ಉದ್ಯೋಗಗಳು – 9,970

ವಿದ್ಯಾರ್ಹತೆ –  10ನೇ ತರಗತಿ ಜೊತೆಗೆ ಐಟಿಐ ಅಥವಾ ಇಂಜಿನಿಯರಿಂಗ್, ಡಿಪ್ಲೋಮಾ

 

ವಯೋಮಿತಿ – 18 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ ಹೇಗಿದೆ?

  • ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ 1)
  • ಸಿಬಿಟಿ 1 ಪಾಸ್ ಆದ್ರೆ ಸಿಬಿಟಿ 2 ಟೆಸ್ಟ್
  • ಕಂಪ್ಯೂಟರ್ ಬೇಸ್ಡ್​ ಅಪ್ಟಿಟ್ಯೂಟ್ ಟೆಸ್ಟ್ (ಸಿಬಿಎಟಿ)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರಿಶೀಲನೆ

ಅರ್ಜಿ ಶುಲ್ಕ ಎಷ್ಟು ಇರುತ್ತದೆ?

ಜನರಲ್, ಒಬಿಸಿ- 500 ರೂಪಾಯಿಗಳು
ಎಸ್​​ಸಿ, ಎಸ್​​ಟಿ- 250 ರೂಪಾಯಿಗಳು

ಈ ಕೆಲಸಕ್ಕೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು

  • ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ- 10 ಏಪ್ರಿಲ್ 2025
  • ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 09 ಮೇ 2025

 

ಅರ್ಜಿ ಸಲ್ಲಿಕೆಗೆ ಲಿಂಕ್- http://www.indianrailways.gov.in

Loading

More Stories

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?