c24kannada

ವಸ್ತುಸ್ಥಿತಿಯತ್ತ

ಕಟ್ಟಡ ಕಾರ್ಮಿಕರಿಗೆ ಗುಡ್​​ನ್ಯೂಸ್…ಕಟ್ಟಡ ಕಾರ್ಮಿಕರ ಆಕಸ್ಮಿಕ ಸಾವು, ನೋವುಗಳಿಗೆ ಮಿಡಿದ ಸಿಎಂ ಸಿದ್ದರಾಮಯ್ಯ

Share it

ಬೆಂಗಳೂರು: ಬೆಂಗಳೂರು : ೨೦೨೫-೨೦೨೬ ನೇ ಸಾಲಿನ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡುತ್ತಿದ್ದಾರೆ. ಮುಂಗಡ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಮಿಕರು, ಕಟ್ಟಡ ಕಾರ್ಮಿಕರಿಗೆ ಗುಡ್​​ನ್ಯೂಸ್ ನೀಡಿದ್ದಾರೆ. ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಕ್ಕೆ ಮುಂದಾಗಿದೆ. ಈ ಸಂಬಂಧ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ 6ನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳಿಗಾಗಿ ವಸತಿ ಶಾಲೆಗಳನ್ನು  ನಿರ್ಮಿಸಲಾಗುತ್ತದೆ. ಇವುಗಳನ್ನು ಹಿಂದುಳಿದ ಕಲ್ಯಾಣ ಇಲಾಖೆಯ ಮೂಲಕ ನಿರ್ವಹಿಸಲಾಗುತ್ತದೆ. ಇದಕ್ಕೆ 750 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

 

ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ನೀಡುವ ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಸರ್ಕಾರ ವಿಸ್ತರಣೆ ಮಾಡಿದೆ. ಇದಕ್ಕಾಗಿ ನೀಡುತ್ತಿರುವ ಹಣವನ್ನು ಮತ್ತೆ ಈಗ ಡಬಲ್ ಮಾಡಲಾಗಿದೆ. ನೋಂದಾಯಿ ಕಾರ್ಮಿಕರು ಸಹಜ ಮರಣ ಹೊಂದಿದರೆ ನೀಡುವ ಸಹಾಯಧನವನ್ನು 75,000 ದಿಂದ 1.5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಒಂದು ವೇಳೆ ಕೆಲಸದ ಸ್ಥಳದಲ್ಲಿ ಮರಣ ಹೊಂದಿದರೆ ಕಾರ್ಮಿಕ ಕುಟುಂಬಸ್ಥರಿಗೆ ನೀಡುವ ಪರಿಹಾರ ಮೊತ್ತವನ್ನು 5 ಇದ್ದಿದ್ದನ್ನು 8 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.

Loading

Leave a Reply

Your email address will not be published. Required fields are marked *

error: Content is protected !!