ಅತಿಥಿ ಶಿಕ್ಷಕರಿಗೆ , ಬಿಸಿಯೂಟ ಕಾರ್ಯಕರ್ತೆಯರಿಗೂ ಸಿದ್ದರಾಮಯ್ಯ ಗುಡ್ನ್ಯೂಸ್.. !
1 min read
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕದ ಮುಂಗಡ ಪತ್ರವನ್ನು ಮಂಡಿಸುತ್ತಿದ್ದು ಇದು ಅವರ 16ನೇ ಬಜೆಟ್ ಆಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮೊತ್ತ ಹೊಂದಿರುವ ಬಜೆಟ್ ಒಟ್ಟು ₹4,09,549 ಲಕ್ಷ ಕೋಟಿ ರೂಪಾಯಿ ಆಗಿದೆ. ಎಲ್ಲ ಕ್ಷೇತ್ರಗಳಿಗೂ ಅನುದಾನ ಘೋಷಣೆ ಮಾಡಿರುವ ಸಿಎಂ, ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಘೋಷಣೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈ ಸಲ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಶಿಕ್ಷಣ ಇಲಾಖೆಗೆ 45,286 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಬಿಸಿಯೂಟ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವಂತೆ ಹೋರಾಟ ಮಾಡಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಗೌರವಧನದಲ್ಲಿ 1 ಸಾವಿರ ಏರಿಕೆ ಮಾಡಿದ್ದಾರೆ. ಅದರಂತೆ ಮಕ್ಕಳಿಗೆ ನೀಡುವ ಹಾಲು, ಮೊಟ್ಟೆ ಹಾಗೂ ಬಾಳೆಹಣ್ಣುಗಳ ವಿತರಣೆಯನ್ನು ವಿಸ್ತರಣೆ ಮಾಡಿದ್ದಾರೆ.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವಧನ 2,000 ರೂಪಾಯಿ ಹೆಚ್ಚಳ ಮಾಡಿರುವುದು ಶಿಕ್ಷಕರಿಗೆ ಖುಷಿ ತಂದಿದೆ. ಸಿಇಟಿ, ಎನ್ಇಇಟಿ ಹಾಗೂ ಜೆಇಇ ತರಬೇತಿಗಾಗಿ 25,000 ವಿದ್ಯಾರ್ಥಿಗಳಿಗೆ 5 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುದಾನಗಳನ್ನು ಗಮನಿಸಿದರೆ..
ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸಲು 6 ದಿನ ಮೊಟ್ಟೆ, ಬಾಳೆಹಣ್ಣು ವಿತರಣೆ
2,500 ಕೋಟಿ ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭ
53 ಲಕ್ಷ ಮಕ್ಕಳಿಗೆ 1,500 ಕೋಟಿ ವೆಚ್ಚದಲ್ಲಿ ಮೊಟ್ಟೆ, ಬಾಳೆಹಣ್ಣು ವಿತರಣೆ
ಬಿಸಿಯೂಟ ತಯಾರಿಕೆ ಸಿಬ್ಬಂದಿ ಮಾಸಿಕ ಗೌರವಧನ 1,000 ರೂ. ಏರಿಕೆ
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಅತಿಥಿ ಶಿಕ್ಷಕರ ಗೌರವಧನ 2,000 ರೂ. ಏರಿಕೆ
ಗಣಿತ ಗಣಕ ಯೋಜನೆ ಅಡಿ 3 ರಿಂದ 5ನೇ ತಗರತಿ ಮಕ್ಕಳಿಗೆ ಫೋನ್ ಮೂಲಕ ಬೋಧನೆ
AI ಆಧಾರಿತ ಕಲಿಕಾ ದೀಪ ಕಾರ್ಯಕ್ರಮ 2,000 ಶಾಲೆಗಳಿಗೆ ವಿಸ್ತರಣೆ
ಚಿಕ್ಕಪಳ್ಳಾಫುರದ ಚಿಂತಾಮಣಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 150 ಕೋಟಿ ವೆಚ್ಚದಲ್ಲಿ ನಿರ್ಮಾಣ
25,000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿಗಾಗಿ 5 ಕೋಟಿ ರೂ.
ಕಲ್ಯಾಣ ಕರ್ನಾಟಕ ಭಾಗದ 5,267 ಶಿಕ್ಷಕರ ಹುದ್ದೆ ಭರ್ತಿ- ಸಿಎಂ ಸಿದ್ದರಾಮಯ್ಯ
