ಭ್ರಷ್ಟಾಧಿಕಾರಿಗಳ ಮನೆ, ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ..!
1 min read
ಬೆಂಗಳೂರು: ಭ್ರಷ್ಟಾಧಿಕಾರಿಗಳ ಮನೆ, ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುತ್ತಿರುತ್ತದೆ. ಈ ಆಸ್ತಿಗೆ, ಮೌಲ್ಯಯುತ ವಸ್ತುಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಳ್ಳುತ್ತಾರೆ. ಅದರಂತೆ ಇಂದು ಬೆಳಂ ಬೆಳಗ್ಗೆಯೇ ಭ್ರಷ್ಟಾಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಬೆಳಂ ಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆಯ ಬಾಗಿಲನ್ನು ಲೋಕಾಯುಕ್ತ ಅಧಿಕಾರಿಗಳು ತಟ್ಟಿದ್ದಾರೆ. ಇಷ್ಟು ಬೆಳಗ್ಗೆ ಯಾರು ಬಂದಿರುತ್ತಾರೆ ಎಂದು ಮನೆಯ ಬಾಗಿಲು ತೆಗೆದು ನೋಡಿದಾಗ ಫುಲ್ ಶಾಕ್ ಆಗಿದ್ದಾರೆ. ಬೇರೆ ಬೇರೆ ಕಡೆಗಳಲ್ಲಿ ದಾಳಿ ಮಾಡಿರುವ ಲೋಕಾಯುಕ್ತ, ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಯಾವ ಯಾವ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ರೇಡ್ ಆಗಿದೆ?
ಕ್ವಾಲಿಟಿ ಕಂಟ್ರೋಲ್ ಹಾಗೂ ಬಿಬಿಎಂಪಿ ಎಕ್ಸೀಕ್ಯೂಟಿವ್ ಇಂಜಿನಿಯರ್ ಹೆಚ್.ಬಿ ಕಲ್ಲೇಶಪ್ಪ
ಕಲಬುರುಗಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೂನಿಟ್ನ ಅಧಿಕಾರಿ ಜಗನ್ನಾಥ್
ದಾವಣಗೆರೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗದ ಡಿಸ್ಟಿಕ್ ಸ್ಟ್ಯಾಟಿಕಲ್ ಆಧಿಕಾರಿ ಜಿಎಸ್ ನಾಗರಾಜು
ಕೋಲಾರ ಟೌನ್ ಬೆಸ್ಕಾಂ ಎಇಇ ಜಿ.ನಾಗರಾಜ್ಡಿಪಿಎಆರ್ ಚೀಫ್ ಇಂಜಿನಿಯರ್ ಟಿ.ಡಿ ನಂಜುಂಡಪ್ಪ
ತುಮಕೂರು ತಾವರಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚೀಫ್ ಮೆಡಿಕಲ್ ಆಫೀಸರ್ ಡಾ.ಜಗದೀಶ್
ವಿಜಯಪುರ ಹೌಸಿಂಗ್ ಬೋರ್ಡ್ ಎಫ್ಡಿಎ ಶಿವಾನಂದ್ ಶಿವಶಂಕರ್ ಕೆಂಭಾವಿ
ಬಾಗಲಕೋಟೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಎಫ್ಡಿಎ ಮಲ್ಲಪ್ಪ ಸಾಬಣ್ಣ
ಈ 8 ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಆದಾಯಕ್ಕಿಂತ ಹೆಚ್ಚಿಗೆ ಗಳಿಸಿದ್ದನ್ನ ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ವೇಳೆ ಅವರ ಆಸ್ತಿಗಳ ಹಿನ್ನೆಲೆ, ಖರೀದಿ ಇತ್ಯಾದಿಗಳ ಮಾಹಿತಿಗಳ ದಾಖಲೆಗಳನ್ನು ಲೋಕಾಯುಕ್ತ ವಶಕ್ಕೆ ಪಡೆಯಲಿದೆ.
