c24kannada

ವಸ್ತುಸ್ಥಿತಿಯತ್ತ

ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟ ಪ್ರಿಯತಮೆ..ಚಿಕ್ಕತಿರುಪತಿ ಹುಂಡಿಯಲ್ಲಿ ವಿಶೇಷ ಕೋರಿಕೆ

Share it

ಕೋಲಾರ: ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು.ಎಂದು ಯುವತಿಯೊಬ್ಬಳು ಚಿಕ್ಕ ತಿರುಪತಿ ಹುಂಡಿಯಲ್ಲಿ ಲವ್​ ಲೇಟರ್​ ಬರೆದು ಹಾಕಿದ್ದಾಳೆ. ಸಾಮಾನ್ಯವಾಗಿ ದೇವರ ಹುಂಡಿಯಲ್ಲಿ ಆಗಾಗ ಈ ರೀತಿಯ ವಿಚಿತ್ರ ಕೋರಿಕೆಗಳನ್ನು ಬರೆದಿರುವ ಪತ್ರಗಳು ಸಿಗುತ್ತಲೇ ಇರುತ್ತವೆ. ಇದೀಗ ಮತ್ತೊಂದು ಅಂತಹ ಘಟನೆ ಕೋಲಾರದಲ್ಲಿ ನಡೆದಿದೆ.

 

ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು. ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು. ಆಫೀಸ್​​ನಲ್ಲಿ ಎಲ್ಲದಕ್ಕಿಂತ, ಹೊರಗಡೆ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು. ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದೆಯೋ, ಅವನಿಗೂ ಅದಕ್ಕಿಂತ 7% ಜಾಸ್ತಿ ಫೀಲಿಂಗ್ ಇರಬೇಕು ಎಂದು ಚಿಕ್ಕ ತಿರುಪತಿ ಹುಂಡಿಯಲ್ಲಿ ಲವ್​ ಲೇಟರ್​ ಬರೆದು ಹಾಕಿದ್ದಾಳೆ.

 

Loading

Leave a Reply

Your email address will not be published. Required fields are marked *

error: Content is protected !!