[t4b-ticker]

ದೇಶಕ್ಕೆ ಮಾದರಿಯಾದ ಬನ್ನೇರುಘಟ್ಟ ಮೃಗಾಲಯ ಇನ್ನು ವಿಶ್ವಕ್ಕೆ ಮಾದರಿಯಾಗಲಿದೆ. -ಡಾ ಸುನಿಲ್ ಪನ್ಸಾರೆ, ಎಂಎಸ್ ZAK

1 min read
Share it

https://youtu.be/Qve3-rd931s?si=6g7aChFA7ETsqcev

ದೇಶದಲ್ಲಿಯೇ ಅತ್ಯುತ್ತಮ ಬನ್ನೇರುಘಟ್ಟ ಉದ್ಯಾನವನ ಪ್ರಪಂಚದಲ್ಲಿಯೇ ಮಾದರಿಯಾಗುವಂತೆ ಮಾಡಿ -ಡಾಸುನಿಲ್ ಪನ್ವಾರ್ ಸದಸ್ಯ ಕಾರ್ಯದರ್ಶಿ ಝಡ್ಎಕೆ ಕರೆ.

ಬೆಂಗಳೂರು,ಆನೇಕಲ್,ಮಾ,04: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ ಸುನಿಲ್ ಪನ್ವಾರ್ ಮುಖ್ಯ ಅತಿಥಿಯ ಅಧ್ಯಕ್ಷೀಯ ಭಾಷಣ ಮಾಡಿ ಈ ಹಿಂದೆ ಕರೋನಾ ಸಂದರ್ಭದಲ್ಲಿ ಮೃಗಾಲಯದಲ್ಲಿ ಹಣದ ಹರಿವಿನ ಕೊರತೆಯಿತ್ತು ಅದಾದ ನಂತರ ಅದರಿಂದ ಹೊರ ಬರಲು ಸಿಬ್ಬಂದಿ ಅಧಿಕಾರಿಗಳು ಹೆಣಗಾಡಿದ್ದುಂಟು. ಆದರೆ ಇದೀಗ ಪ್ರಸ್ತುತ ಇಡಿ ಕಾರ್ಯದಕ್ಷತೆಯಿಂದ ಮೃಗಾಲಯ ದೇಶದಲ್ಲೇ ಸರ್ವೋತ್ತಮ ಎಂಬ ಖ್ಯಾತಿಗೆ ಒಳಗಾಗಿದೆ. ಇನ್ನೂ ಮುಂದುವರೆದು ಪ್ರಪಂಚದಲ್ಲಿಯೇ ಉತ್ತಮವಾದ ಸಾಧನೆಗಳೊಂದಿಗೆ ಮುಂದುವರೆಯುವಂತಾಗಲಿ. ಇರುವ ಎಲ್ಲ ಸಿಬ್ಬಂದಿಗಳು ಶ್ರದ್ದೆಯಿಂದ ಜೀವಿಗಳನ್ನು ಕಾಪಾಡುತ್ತಿರುವುದು ಗಮನಿಸುತ್ತಿದ್ದೇನೆ ಎಂದು ಶ್ಲಾಘಿಸಿದರು. ಇಂತಹ ಕಾರ್ಯಕ್ರಮಗಳಿಂದ ಸಿಬ್ಬಂದಿಯಲ್ಲಿ ಹೊಸ ಹುರುಪನ್ನು ಹೆಚ್ಚಿಸಿ ಕಾರ್ಯತತ್ಪರರಾಗಲು ಉತ್ತೇಜಿಸಿದಂತಾಗುತ್ತದೆ, ಆದ್ದರಿಂದ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದರು.

ಅವರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ ದಿನಾಚರಣೆಯ ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ ಅಧಿಕಾರಿ ಸಿಬ್ಬಂದಿಗಳ ಕಾರ್ಯಶೈಲಿ ಶ್ಲಾಘಿಸುತ್ತಾ ಮಾತನಾಡಿದರು.

ಪ್ರಾಣಿಪಾಲಕರಾಗಲಿ ಸಿಬ್ಬಂದಿಯಾಗಲಿ ಸೇವೆಯಲ್ಲಿರುವಾಗ ಸಾವನ್ನಪ್ಪಿದರೆ ಸರ್ಕಾರದಿಂದ ಈ ಹಿಂದೆ ಸಾಲೂ ಸಾಲದ ಪರಿಹಾರ ಸಿಗ್ತಿತ್ತು. ಇನ್ನು ಮುಂದೆ ಕನಿಷ್ಟವಾದ ಸೌಲಭ್ಯ ಪರಿಹಾರ ಸಿಗಲಿದೆ. ಅಲ್ಲದೆ ಪ್ರಾಣಿ ಪಾಲಕರ ಕುಟುಂಬಗಳಿಗೆ ಆರೋಗ್ಯ ನೆರವನ್ನು ಒದಗಿಸಲು ಅಲ್ಲದೆ ಸಮವಸ್ತ್ರ ಶುಚಿಯಾಗಿಡಲು ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದೇವೆ ಎಂದು ಭರವಸೆ ನೀಡಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿಯೇ ಪ್ರಖ್ಯಾತಿ ಹೊಂದಿರುವ ಈ ಮೃಗಾಲಯವನ್ನು ಇನ್ನೂ ಉನ್ನತಮಟ್ಟಕ್ಕೆ ಏರಿಸುವ ಜವಾಬ್ದಾರಿ ಎಲ್ಲ ಸಿಬ್ಬಂದಿಗಳ ಮೇಲಿರುವುದರಿಂದ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸುವವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ‌ ಇದು ಪ್ರತಿ ವರ್ಷ ಮುಂದುವರೆಯುತ್ತದೆ ಎಂದರು. ಮೃಗಾಲಯದ ಜೀವಿಗಳ ಸಲಹಲು ಬೇಕಾದ ವೃತ್ತಿಪರತೆಯನ್ನು ಮುಂದೆ ತೆಗೆದುಕೊಂಡು ಹೋಗುವ ಎಲ್ಲ ಪರಿಣಾಮಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನಾವು ಮುನ್ನುಗ್ಗಬೇಕಿದೆ ಎಂದರು. ಜೀವ ಜಗತ್ತಿನ ಸೊಬಗನ್ನು ಹೆಚ್ಚಿಸುವ ಜೊತೆಗೆ ಮೃಗಾಲಯದ ಹಚ್ಚ ಹಸಿರಿನ ಹೂ ತೋಟವನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯಿದೆ ಎಂದರು.
ಹೊಸ ಹೊಸ ಖಾಯಿಲೆಗಳ ತಪಾಸಣೆ ಅವುಗಳ ನಿವಾರಣೆ ಸಮೇತ ಹೊಸ ಪರಿಶೀಲನಾ ಪ್ರಜ್ಞೆಯನ್ನ ಬೆಳೆಸಲು, ಶ್ರದ್ದೆಯಿಂದ ಬನ್ನೇರುಘಟ್ಟ ಜೀವ ಸಂಕುಲವನ್ನು ಉಳಿಸುವ ಕಾಪಾಡುವುದಕ್ಕಾಗಿ ಹೆಚ್ಚಿನ ಶಿಕ್ಷಣ ಬೇಕಾಗಿದೆ. ಅಂತಹ ನುರಿತ ಸಲಹೆಗಳನ್ನು ನಾವು ಅಳವಡಿಸಿಕೊಂಡು ಮೃಗಾಲಯವನ್ನು ಇನ್ನಷ್ಟು ಉನ್ನತೀಕರಿಸಲು ಉದ್ದೇಶಿಸಲಾಗಿದೆ ಎಂದರು.
ಈ ಹಿಂದೆ ಕರೋನಾ ಸಂದರ್ಭದಲ್ಲಿ ಇಡಿ ಆಗಿದ್ದಾಗ ಮೃಗಾಲಯದ ಸಾಧಕ ಬಾಧಕಗಳ ಅರಿವಿದೆ. ಆಗ ಆರ್ಥಿಕ ಸಂಕಷ್ಟ ಅನುಭವಿಸಿದ್ದು ನೆನಪಿದೆ. ಆದರೆ ಈಗ ನನಗಿಂತಲೂ ಸೊಗಸಾಗಿ ಉದ್ಯಾನವನದ ಅಧಿಕಾರಿ ಸಿಬ್ಬಂದಿ ಕಾಪಾಡಿಕೊಂಡಿರುವುದು ಸಂತಸ ತಂದಿದೆ ಎಂದರು.
ಅಲ್ಲದೆ ಉದ್ಯಾನದ ಸಿಬ್ಬಂದಿಗಳ ಮಕ್ಕಳು ಉತ್ತಮ ಅಂಕ ಪಡೆದ ಕಾರಣ ಅವರಿಗೆ ತಲಾ 5000 ಪ್ರೋತ್ಸಾಹದನ ವಿತರಿಸಲಾಗಿದೆ. ಇವೆಲ್ಲದರ ಮೂಲಕ ಒಂದು ಉದ್ಯಾನವೇ ನಮ್ಮ ಒಂದು‌ ಕುಟುಂಬ ಎಂಬ ಭಾವನೆ ಬಂದರೆ ತನ್ನಂತಾನೆ ಉದ್ಯಾನವನ ಉತ್ತಮವಾಗಿ ಮೂಡಿಬರಲು ಸಾಧ್ಯ ಎಂದು ತಿಳಿಸಿದರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್ ಅಜಿತ್ ಪಾಟೀಲ್ ಮಾತನಾಡಿ ಮುಂದಿನ ಎಲ್ಲ ಮೃಗಾಲಯ ಕಾರ್ಯಗಳು ಸಕಾಲವಾಗಿ ನಡೆಯಲಿ ಎಂದು ಹರಸಿದರು.

ಕಾನನದ ಸುಂದರತೆಯನ್ನು ನೆನಪಿಸುವ ಗೀತೆ, ಹಾಗು ನೃತ್ಯರೂಪಕಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು.

ಮೃಗಾಲಯದ ಸಿಬ್ಬಂದಿ ಮಕ್ಕಳಿಂದ ಭರತನಾಟ್ಯ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ ಸ್ಪರ್ದಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಪ್ರತಿ ಕ್ಷೇತ್ರದಲ್ಲಿ ಸಾಧನೆಗೈದವರನ್ನು ವೇದಿಕೆ ಮೇಲೆ ನೆನಪಿನ ಕಾಣಿಕೆಯೊಂದಿಗೆ ಬಹುಮಾನ ನೀಡಿ ಗೌರವಿಸಿದರು.

ವೇದಿಕೆಯ ಸ್ವಾಗತ ನಿರೂಪಣೆ ಮತ್ತು ವಂದನಾರ್ಪಣೆಯನ್ನು ಪಿಆರ್ಒ ಮಹದೇವ್ ಮಾಡಿದರು.
ಉಳಿದಂತೆ ಅಧಿಕಾರಿ ಸಿಬ್ಬಂದಿಗಳಾದ ಅಮಲಾ, ಸುರೇಶ್, ಮಧು ಮುಂತಾದವರು ಇದ್ದರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?