ದೇವರ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಮುದ್ದೆ ತಿಂದು ಆಸ್ಪತ್ರೆ ಸೇರಿದ ಭಕ್ತರು!
1 min read
https://youtu.be/YB9rGJ9wKzA?si=NjzaD1bLkaPtzHzj
ಮಂಡ್ಯ : ಮಂಡ್ಯದ ಪಾಂಡವಪುರದ ನರಹಳ್ಳಿ ಗ್ರಾಮದ ಶ್ರೀ ಚನ್ನಬೀರೇಶ್ವರ ದೇವರ ಹಬ್ಬ ಕಳೆದ ಶುಕ್ರವಾರ (ಫೆ.28) ನಡೆದಿತ್ತು. ಹಬ್ಬದ ಹಿನ್ನೆಲೆ ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.ಈ ವೇಳೆ ದೇವರ ಪ್ರಸಾದವಾಗಿ ಭಕ್ತರಿಗೆ ಅವರೆಕಾಳು, ಮುದ್ದೆಯನ್ನು ನೀಡಲಾಗಿತ್ತು. ಇದನ್ನು ಸೇವಿಸಿದ ಗ್ರಾಮದ ಭಕ್ತರು ಇದೀಗ ಎರಡು ದಿನದ ಬಳಿಕ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.ಇನ್ನು ಪ್ರಸಾದ ಸೇವಿಸಿದವರಿಗೆ ಫುಡ್ ಫಾಯಿಸನ್ ಆಗಿರಬಹುದು ಎಂದು ಶಂಕಿಸಲಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಕೆಲವರನ್ನ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಘಟನೆ ನಡೆದ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
