[t4b-ticker]

ಭಾನುವಾರ ರಾಶಿ ಭವಿಷ್ಯ -ಫೆಬ್ರವರಿ-02,2025

1 min read
Share it

 

ಮೇಷ ರಾಶಿ : ಮಾನಸಿಕವಾದ ಕಿರಿಕಿರಿ, ಮನಸ್ತಾಪ ಇರಲಿದೆ. ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದುಆಸ್ತಿಯ ವಿಚಾರದಲ್ಲಿ ಆತಂಕವಾಗಬಹುದು. ನೀರು ಮತ್ತು ಬೆಂಕಿ, ವಾಹನಗಳಿಂದ ಎಚ್ಚರವಹಿಸಿ ಹಿರಿಯರಲ್ಲಿ ಭಕ್ತಿ ಪ್ರದರ್ಶಿಸುತ್ತೀರಿ. ಬೇರೆಯವರಿಂದ ಹಣ ಸಿಗುವ ಸಾಧ್ಯತೆಯಿದೆ.ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು.

 

ವೃಷಭ : ನೌಕರಿಯಲ್ಲಿ ವಾದವನ್ನು ಮಾಡುತ್ತೀರಿ ಬಡ್ತಿಗೆ ಅವಕಾಶವಿದೆ. ಕೈ ಹಾಕಿದ ಕೆಲಸದಲ್ಲಿ ಜಯ ಸಿಗಲಿದೆ. ಬಂಧುಗಳಲ್ಲಿ ಕಲಹದ ಸಾಧ್ಯತೆ. ಜನರು ನಿಮ್ಮನ್ನು ಹಿಂಬಾಲಿಸುತ್ತಾರೆ. ಮಾಡಿಕೊಳ್ಳುವ ಸಾಧ್ಯತೆಯಿದೆ. ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು.

 

ಮಿಥುನ : ಆರ್ಥಿಕ ಸಂಕಷ್ಟದಿಂದ ಪಾರಾಗುತ್ತೀರಿ, ಮಾನಸಿಕ ನೋವು, ಕುಟುಂಬ ಕಲಹ ಉಂಟಾಗಬಹುದು. ಸ್ತ್ರೀಯರಿಂದ ಮನೆಯಲ್ಲಿ ಅನುಕೂಲವಿದೆ. ಮೋಜು ಮಸ್ತಿಯಿಂದ ತೊಂದರೆಯಾಗಬಹುದು. ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ. ಚಂಚಲ ಮನಸ್ಸನ್ನು ನಿಯಂತ್ರಿಸಿ, ಶಕ್ತಿ ದೇವತಾ ಆರಾಧನೆ ಮಾಡಬೇಕು.

 

ಕಟಕ :  ಗುತ್ತಿಗೆ ಕೆಲಸಗಾರರಿಗೆ ಅನುಕೂಲವಿದೆ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಮನಸ್ಸಿಗೆ ಸದಾ ಸಂಕಟದ ಅನುಭವವಿರಲಿದೆ. ವಿನಾಕಾರಣ ನಿಷ್ಠೂರದ ಸಾಧ್ಯತೆ. ಅವಕಾಶ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಇಂದು ನಿದ್ರಾಭಂಗ ಆಗಬಹುದು. ಬಂಧುಗಳಲ್ಲಿ ವಿರೋಧವನ್ನು ಕಟ್ಟಿಕೊಳ್ಳುತ್ತೀರಿ. ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು.

 

ಸಿಂಹ : ಕೈ ಹಾಕಿದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ.ಇಂದು ಹೊಸಬರ ಪರಿಚಯವಾಗಲಿದೆ. ಕೆ ಲಸ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದೆ. ಯಾರ ಜೊತೆಯಲ್ಲಿಯೂ ಶತ್ರುತ್ವ ಕಟ್ಟಿಕೊಳ್ಳಬೇಡಿ. ಈ ದಿನ ಆರ್ಥಿಕವಾಗಿ ಚೆನ್ನಾಗಿರಲಿದೆವಿಶೇಷ ಅಧ್ಯಯನ ಅಥವಾ ಆಧ್ಯಾತ್ಮಕ್ಕೆ ಅವಕಾಶವಿದೆ. ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಬೇಕು.

 

ಕನ್ಯಾ : ಮಕ್ಕಳಿಂದ ಲಾಭ, ಪ್ರೀತಿಯ ಉಡುಗೊರೆ ಸಿಗಲಿದೆ. ಸ್ವಯಂಕೃತ ಅಪರಾಧದಿಂದ ತೊಂದರೆಯಾಗಬಹುದು. ಮಿತ್ರರಿಂದ ಹಿನ್ನಡೆಯಾಗಬಹುದು. ರಾಜಕಾರಣಿಗಳಿಂದ ತೊಂದರೆ ಮತ್ತು ನಷ್ಟವೂ ಆಗಲಿದೆ. ಆಸ್ತಿ ವಿಚಾರದಲ್ಲಿ ಕಲಹ ಬಗೆಹರಿಯುವುದಿಲ್ಲ. ರಿಯಲ್ ಎಸ್ಟೇಟ್ ಏಜೆಂಟ್ಸ್ ಗಳಿಗೆ ನಷ್ಟ ಸಂಭವ. ಶಿವರಾಧನೆಯನ್ನು ಮಾಡಬೇಕು.

 

ತುಲಾ : ಆರ್ಥಿಕವಾಗಿ ಬೆಳೆಯಲು ಯೋಜನೆ ರೂಪಿಸುತ್ತೀರಿ. ಕಾಲಿಗೆ ಸಂಬಂಧಿಸಿದ ತೊಂದರೆ ಕಾಣಬಹುದು. ಮನೆಯಲ್ಲಿ ಹೊಸ ವಸ್ತು ಖರೀದಿಗೆ ಅವಕಾಶವಿದೆ. ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಅಧಿಕಾರಿಗಳ ಸಲಹೆ ಮನಸ್ಸಿಗೆ ಒಪ್ಪುವುದಿಲ್ಲ, ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡಬೇಕು, ವಿಷ್ಣು ಸಹಸ್ರನಾಮ ಶ್ರವಣ ಮಾಡಬೇಕು.

 

ವೃಶ್ಚಿಕ : ತಂದೆಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತೀರಿ, ದೂರ ಪ್ರಯಾಣದ ಸಂಭವವಿದೆ. ಅವಕಾಶ ಕೈ ತಪ್ಪದೆ ಇರುವ ಹಾಗೆ ನೋಡಿಕೊಳ್ಳಿ, ಮಿತ್ರರಿಂದ ಸಹಾಯ ದೊರೆಯಬಹುದು ವಾಹನ ಅಪಘಾತದ ಸಂಭವವಿದೆ, ಆಲಸ್ಯ, ಮಾನಸಿಕ ಚಂಚಲತೆ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ. ಕುಲದೇವತಾರಾಧನೆ ಮಾಡಬೇಕು.

 

ಧನಸ್ಸು : ಅಕಾಲ ಭೋಜನದಿಂದ ಅನಾರೋಗ್ಯ ಉಂಟಾಗಬಹುದು, ಮಾತಿನ ಮೇಲೆ ನಿಗಾ ಇರಲಿ. ಸಾಲದ ವಿಚಾರ ಚರ್ಚೆ ಮಾಡುತ್ತೀರಿ. ಉತ್ತಮ ಅವಕಾಶಗಳ ಸೂಚನೆ ಇದೆ. ಹಿಡಿತವಿಲ್ಲದ ಖರ್ಚು ತೊಂದರೆಗೆ ಅವಕಾಶ ಮಾಡಿಕೊಡಲಿದೆ. ಬೇರೆಯವರು ನಿಮ್ಮನ್ನು ಸಾಕ್ಷಿ ಸಹಿತ ನಿಂದಿಸುತ್ತಾರೆ. ದುರ್ಗಾರಾಧನೆಯನ್ನು ಮಾಡಬೇಕು.

 

ಮಕರ : ಸಾಂಸಾರಿಕವಾಗಿ ಸಮಸ್ಯೆಯಾಗಬಹುದು, ಕರ್ತವ್ಯ ಲೋಪದಿಂದ ಅವಮಾನ ಆಗಬಹುದು. ವ್ಯವಹಾರದಲ್ಲಿ ಅನಾಸಕ್ತಿಯಿಂದ ನಷ್ಟವಾಗಬಹುದು. ಆಪ್ತರಿಂದ ಸಹಾಯದ ಭರವಸೆ ಸಿಗಲಿದೆ ಆದರೆ ನೆರವೇರುವುದಿಲ್ಲ, ಅತಿಯಾದ ಆಸೆ, ಮಿತಿಮೀರಿದ ಚಿಂತನೆ ಒಳ್ಳೆಯದಲ್ಲ. ಸಾಧಾರಣ ಫಲ ಕಂಡರೂ ಪ್ರಯತ್ನ ತಪ್ಪುವುದಿಲ್ಲ. ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಬೇಕು.

 

ಕುಂಭ : ಅನಗತ್ಯ ಚರ್ಚೆ, ಖರ್ಚಿನಿಂದ ಮುಖಭಂಗ ಆಗಲಿದೆ. ವಿರೋಧಿಗಳ ದ್ವೇಷ, ಕಿರುಕುಳವನ್ನು ಅನುಭವಿಸಬೇಕಾಗಬಹುದು. ಕೋಪದಿಂದ ಕೆಲಸಕ್ಕೆ ತೊಂದರೆಯಾಗಬಹುದು. ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣುತ್ತೀರಿ, ಅಪವಾದದ ಭೀತಿ ಹೆಚ್ಚಾಗಿ ಕಾಡಬಹುದು. ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಬೇಕು.

 

ಮೀನ : ಮಕ್ಕಳ ವಿಚಾರದಲ್ಲಿ ಗಂಭೀರ ಚಿಂತೆ ನಡೆಸುತ್ತೀರಿ, ದುಶ್ಚಟಗಳ ಸಹವಾಸವಿದ್ದರೆ ತೊಂದರೆ ಅನುಭವಿಸುತ್ತೀರಿ, ಪ್ರಯತ್ನ ಮಾಡಿದರು ಕಾರ್ಯ ವಿಫಲವಾಗಲಿದೆ. ಇಂದು ನಂಬಿಕಸ್ಥರಿಂದ ಅಶಾಂತಿ. ಅನಾವಶ್ಯಕ ವಿಚಾರಗಳು ಮುನ್ನೆಲೆಗೆ ಬರಬಹುದು. ದೂರ ಪ್ರಯಾಣ ಬೇಡ ತೊಂದರೆಯಾಗಬಹುದು. ಗಣಪತಿಯನ್ನು ಪ್ರಾರ್ಥನೆ ಮಾಡಬೇಕು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?