[t4b-ticker]

15 ವರ್ಷ ಹಳೆಯ ವಾಹನಗಳಿಗೆ ಡೀಸೆಲ್ ,ಪೆಟ್ರೋಲ್ ಹಾಕಲ್ಲ ; ಮಾರ್ಚ್‌ 31ರಿಂದ ಹೊಸ ನಿಯಮ ಜಾರಿ!

1 min read
Share it

ನವದೆಹಲಿ: ಮಾರ್ಚ್ 31ರಿಂದ ದೆಹಲಿಯ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ 15 ವರ್ಷ ಮೇಲ್ಪಟ್ಟ ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಲ್ಲ. ಯಾವುದೇ ಕಾರಣಕ್ಕೂ ಹಳೆಯ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಗೆ, ಹೊಗೆ, ಹೊಗೆ.. ಮನೆಯಿಂದ ಹೊರಗೆ ಬಂದು ಉಸಿರಾಡಿದ್ರೆ ಒಂದು ದಿನಕ್ಕೆ 25-30 ಸಿಗರೇಟ್ ಸೇದಿದಂತೆ ಆಗುವ ವಾತಾವರಣ. ರಾಷ್ಟ್ರ ರಾಜಧಾನಿ ದೆಹಲಿಯ ಹವಾಮಾನ ನಿಜಕ್ಕೂ ಆರೋಗ್ಯಕ್ಕೆ ಹಾನಿಕಾರಕ. ಇದೀಗ ಈ ವಾಯು ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ.

 

ದೆಹಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಈ ಹಿಂದಿನ ಆಪ್ ಸರ್ಕಾರ ಸಮ, ಬೆಸ ಸಂಖ್ಯೆಯ ನಿಯಮ ಜಾರಿಗೆ ತಂದಿತ್ತು. ಇದೀಗ ಬಿಜೆಪಿ ಸರ್ಕಾರ ವಾಯುಮಾಲಿನ್ಯ ತಡೆಗೆ ಹೊಸ ನಿಯಮ ಜಾರಿಗೊಳಿಸಲು ನಿರ್ಧಾರ ಮಾಡಿದೆ. ದೆಹಲಿಯ ಪರಿಸರ ಇಲಾಖೆ ಈ ಬಗ್ಗೆ ಮಹತ್ವದ ಆದೇಶ ಹೊರಡಿಸಲಾಗಿದ್ದು, ಇದೇ ಮಾರ್ಚ್ 31ರಿಂದ ಹೊಸ ನಿಯಮ ಜಾರಿಗೆ ಬರುತ್ತಿದೆ. ಈ ಹಿಂದೆ ಸಮ- ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಗೆ ತಂದರು ದೆಹಲಿಯಲ್ಲಿ ಯಾವುದೇ ಪ್ರಯೋಜನವಾಗಿರಲಿಲ್ಲ. ದೆಹಲಿಯಲ್ಲಿ ವರ್ಷದಿಂದ ವರ್ಷಕ್ಕೆ ವಾಯು ಮಾಲಿನ್ಯ ಹೆಚ್ಚಳ ಆಗುತ್ತಲೇ ಇದೆ. ಈಗ ಹಳೆಯ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ಬಿಜೆಪಿ ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?