KARNATAKA LOCAL ಡೆಂಕಣಿಕೋಟೆಯ ತಿಮ್ಮಸಂದ್ರದಲ್ಲಿ ಮಹಾಶಿವರಾತ್ರಿ ವಿಶಿಷ್ಟ ಆಚರಣೆಗೆ ನೆರೆದ ಸಾವಿರಾರು ಮಂದಿ ಭಕ್ತರು. 1 min read 1 month ago newsdesk Share ithttps://youtu.be/e5-LfawHb7I ಪಾಪಣ್ಣಸ್ವಾಮಿಗಳು ಅಂತ ಅವಧೂತ ಸ್ವಾಮಿಗಳು ಕಾಶಿಯಿಂದ ಶಿವಲಿಂಗ ತಂದಿದ್ರು, ಅನಂತರ ಅವ್ರು ಇಲ್ಲಿ ಕಾಶಿಯ ಶಿವಲಿಂಗ ಬಿಟ್ಟು ಮತ್ತೆ ಕಾಶಿಗೆ ಹೋದವರು ಮತ್ತೆ ಮರಳಲಿಲ್ಲ ಹೀಗಾಗಿ ಅದೇ ಲಿಂಗವನ್ನು ನೀರಲ್ಲಿಟ್ಟು ಪೂಜೆ ನಡೆಸಿ ಗುಡಿ ಕಟ್ಟುವ ಹಂತದಲ್ಲಿದ್ದ ಗ್ರಾಮಸ್ಥರಿಗೆ ಅದು ಭಿನ್ನಗೊಂಡಿದ್ದು ಕಂಡು ಅದೇ ಮಾದರಿ ಪ್ರತಿ ಲಿಂಗವನ್ನು ಪ್ರತಿಷ್ಟಾಪಿಸಿ ಪೂಜೆಗೆ ಸಿದ್ದಗೊಳಿಸಲಾಯಿತು. ಹೀಗೆ ಗ್ರಾಮದ ಪ್ರಮುಖ ದೇವರಾಗಿ ಪೂಜಿಸಿದ ಶ್ರೀಕಾಶಿ ವಿಶ್ವೇಶ್ವರ ಸ್ವಾಮಿ ಸಕಲ ಸಿದ್ದ ಹರಕೆಗಳನ್ನು ಜನರಲ್ಲಿ ಪರಿಹರಿಸುತ್ತಿರುವುದರಿಂದ ಇದೀಗ ತಿಮ್ಮಸಂದ್ರದ ದೇವಾಲಯ ಪ್ರಖ್ಯಾತಿ ಪಡೆಯುತ್ತಿದೆ ಎಂದು ಸರಳವಾಗಿ ಭಕ್ತರ ಸಂಕಷ್ಟಗಳನ್ನು ಆಲಿಸಿ ಸಲಹೆ ಕೊಡುವ ಪ್ರಧಾನ ರ‍್ಚಕ ಮಂಜುನಾಥ ಆರಾಧ್ಯ ತಿಳಿಸುತ್ತಾರೆ. ಈÃಗ್ಗೆ ಶತಮಾನಗಳಿಂದ ಇಲ್ಲಿ ಶಿವಲಿಂಗ ನೆಲೆಸಿದ್ದು ಅನಂತರ ಇಲ್ಲಿನ ಗೌಡರ ಕೃಪೆಯಿಂದ ದೇವಾಲಯ ನರ‍್ಮಿಸಿ ಹೊಸ ದೇವಾಲಯ ತಲೆ ಎತ್ತಿದೆ. ನಂತರ ಹದಿನಾಲ್ಕು ರ‍್ಷದಿಂದ ೧೬ ಅಡಿ ಎತ್ತರದ ಶಿವ ಲಿಂಗದ ರೀತಿ ಎತ್ತರದ ೧೨ ಮರಗಳಿಂದ ಕಟ್ಟಿ ಎತ್ತರದಲ್ಲಿ ವಿಭೂತಿ ತರಹದ ಶ್ವೇತ ವಸ್ತç ಕಟ್ಟಿ ನಡುವೆ ತ್ರಿನೇಂತ್ರದ ತರಹ ಕೆಂಪು ಬಟ್ಟೆಯೊಂದಿಗೆ ಅಲಂಕರಿಸಿ ಹೂ ಪುಷ್ಟಗಳಿಂದ ಸಿಂಗರಿಸಿ ಒಪ್ಪ ಹೋರಣವಾಗಿಸಿರುವುದು ಸುತ್ತಲ ಗ್ರಾಮಸ್ಥರಿಗೆ ಕಣ್ಣಿಗೆ ಮುದ ನೀಡುತ್ತದೆ. ಎಳ್ಳೆಣ್ಣೆ ಮೂಲಕ ನಿಲುವಿನ ಶಿವ ಲಿಂಗಕ್ಕೆ ಬೆಂಕಿ ಇಟ್ಟು ಜ್ಯೋತಿ ಬೆಳಗಿಸಿ ಅದನ್ನು ಉರಿಸುವ ಮೂಲಕ ಇಡೀ ರ‍್ನಾಟಕದ ಗ್ರಾಮೀಣಭಾಗದಲ್ಲಿ ವಿಶಿಷ್ಟ ಪೂಜೆ ನೆರವೇರಿಸಲಾಗುತ್ತದೆ. ಅದಕ್ಕೂ ಮುನ್ನ ವೀರಗಾಸೆ ಮೂಲಕ ಶಿವನನ್ನು ಸಂತೃಪ್ತಿ ಪಡಿಸಿ ಭಕ್ತರು ಸಂಭ್ರಮಿಸುತ್ತಾರೆ. ಈ ದೇವಾಲಯವೂ ಒಂಬತ್ತು ನಾಗಮರ‍್ತಿಗಳ ಮೂಲಕ ನಾಗದೋಷ ನಿವಾರಣೆಗೆ ಅನುವುಮಾಡಿಕೊಡುವುದಲ್ಲದೆ ಶನಿ ಕಾಟ ತಪ್ಪಿಸಲು ರ‍್ಷಕ್ಕೊಮ್ಮೆ ೨೧ ಅಡಿಯ ಶಿವನ ಲಿಂಗಕ್ಕೆ ಜ್ಯೋತಿ ಬೆಳಗಿಸಿ ಎಳ್ಳೆಣ್ಣೆ ಮೂಲಕ ಅಗ್ನಿಯನ್ನು ಉರಿಸಲಾಗುತ್ತದೆ. ಅಷ್ಟಲ್ಲದೆ ಬಿಲ್ವಪತ್ರೆ ಮರ, ಶಿವನಿಗೆ ಅತ್ಯಾಪ್ತ ಗಿಡ, ಹಾಲಿನ ಅಭಿಷೇಕ ಮುಂತಾದ ಕೈಂರ‍್ಯಗಳನ್ನು ನೆರವೇರಿಸಲಾಗುತ್ತದೆ. ರುದ್ರಾಕ್ಷಿಯ ಮಾಲೆ, ಹಚ್ಚ ಹಸಿರಿನ ತೋರಣ ರಂಗೋಲೆಗಳ ಮೂಲಕ ಇಡೀ ಊರು ಹಬ್ಬದ ಸಡಗರಕ್ಕೆ ಸಾಕ್ಷಿಯಾಗುತ್ತದೆ. Continue Reading Previous ಕರ್ನಾಟಕ ಭಿಕ್ಷುಕರ ರಾಜ್ಯವಾಗುತ್ತಿದೆ-ಚಾಮರಾಜನಗರದಲ್ಲಿ ಮಾಜಿ ಸಚಿವ ಶ್ರೀರಾಮುಲು ವಾಗ್ಧಾಳಿNext ಶನಿವಾರ ರಾಶಿ ಭವಿಷ್ಯ – ಮಾರ್ಚ್- 1,2025