ಡಿಕೆಶಿವಕುಮಾರ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಸದ್ದು
1 min read
ಡಿಸಿಎಂ ಡಿ.ಕೆ.ಶಿವಕುಮಾರ್ರ ಇತ್ತೀಚಿನ ಒಂದೊಂದು ನಡೆಯೂ. ಒಂದೊಂದು ಹೇಳಿಕೆಯು ಕೇವಲ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಭಾರೀ ಸದ್ದು ಮಾಡುತ್ತಿದೆ. ಮಹಾಕುಂಭಮೇಳವನ್ನು ಕಾಂಗ್ರೆಸ್ ಹೈಕಮಾಂಡ್ ಟೀಕಿಸಿತ್ತು. ಆದ್ರೆ ಡಿಸಿಎಂ ಡಿಕೆಶಿ ಅದೇ ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದು ಕಾಂಗ್ರೆಸ್ಗೆ ಮುಖಭಂಗ ತರಿಸಿತು. ಇದೀಗ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಶಿವರಾತ್ರಿ ಧಾನ್ಯ ಮಾಡಿದ್ದು.. ಅದರಲ್ಲೂ ಅಮಿತ್ ಶಾ ಜೊತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಕಾಂಗ್ರೆಸ್ ಹೈಕಮಾಂಡ್ನ ನಿದ್ದೆ ಗೆಡಿಸಿದಿದೆ. ಹೀಗಾಗಿ ಡಿಕೆಶಿಯ ನಡೆ-ನುಡಿ ಬಗ್ಗೆ ಕಾಂಗ್ರೆಸ್ನ ರಾಜ್ಯ ನಾಯಕರು ಮಾತ್ರವಲ್ಲ, ಹೈಕಮಾಂಡ್ ನಾಯಕರು ಗರಂ ಆಗಿದ್ರು.. ಆದ್ರೆ ಈ ಎಲ್ಲ ಟೀಕೆ ಟಿಪ್ಪಣಿಗಳಿಗೆ ಡಿಕೆಶಿ ಮಾತಿನ ಮೂಲಕ ತಿರುಗೇಟು ನೀಡಿದ್ದಾರೆ.
ಇಶಾ ಕೇಂದ್ರದಲ್ಲಿ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಎಐಸಿಸಿ ಕಾರ್ಯದರ್ಶಿ ವಿ.ಪಿ. ಮೋಹನ್ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ರು. ಇದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿರುವ ಡಿ.ಕೆ.ಶಿ, ನಾನು ಹೋಗಿದ್ದು ಶಿವರಾತ್ರಿಗೆ, ಅದು ನನ್ನ ವೈಯಕ್ತಿಕ ನಂಬಿಕೆ. ಹೈಕಮಾಂಡ್ನ ದೊಡ್ಡ ನಾಯಕರ ಬಗ್ಗೆ ನಾನು ಮಾತನಾಡಲ್ಲ. ಯಾವ ಎಐಸಿಸಿ ಯಾವ ಲೀಡರ್. ಯಾವ ನ್ಯಾಷನಲ್ ಲೀಡರ್. ಯಾರ್ ಏನ್ ಕಮೆಂಟ್ ಮಾಡಿದ್ರು ಡೋಂಟ್ಕೇರ್ ಎಂಬಂತೆ ರಿಯಾಕ್ಟ್ ಮಾಡಿದರು.
