ವಿದ್ಯತ‌್ ತಗುಲಿ ಸಾವನಪ್ಪಿದ ರೈತ ಪರಿವಾರಕ್ಕೆ ಪರಿಹಾರ ಚೆಕ್ ವಿತರಿಸಿದ ಶಾಸಕ ಬೆಲ್ದಾಳೆ
1 min read
ಬೀದರ್ : ಬೀದರ ದಕ್ಷಿಣ ಕ್ಷತ್ರದ ವಿವಿಧೆಡೆ ವಿದ್ಯುತ್ ತಗುಲಿ ಮೃತಪಟ್ಟ ರೈತರ ಎರಡು ಕುಟುಂಬದ ಸಂತ್ರಸ್ತರಿಗೆ ತಲಾ 2 ಲಕ್ಷ ಸೇರಿ ಒಟ್ಟು 4 ಲಕ್ಷ ರೂ. ಚೆಕ್ ವಿತರಣೆ . ಎರಡು ಎತ್ತುಗಳು ಮೃತಪಟ್ಟ ರೈತನಿಗೆ 1 ಲಕ್ಷ ರೂ. ಚೆಕ್ ವಿತರಿಸಿದರು. ವಿಧ್ಯುತ ತಗುಲಿ ಮೃತ ಪಟ್ಟ ಎರಡು ಕುಟುಂಬದ ಕುಟುಂಬಸ್ಥರಿಗೆ ವಿಧ್ಯುತ ತಗುಲಿ ಮೃತಪಟ್ಟ ಎರಡು ಎತ್ತುಗಳ ಓರ್ವ ರೈತ ಸೇರಿ ಮೂವರು ಸಂತ್ರಸ್ತ ಕುಟುಂಬಕ್ಕೆ ಜೆಸ್ಕಾಂ ವತಿಯಿಂದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ 5 ಲಕ್ಷ ರೂ. ಚೆಕ್ ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.
ಬೀದರ್ ನಗರದ ಶಾಸಕರ ಕಚೇರಿಯಲ್ಲಿ ಜೆಸ್ಕಾಂ ವತಿಯಿಂದ ಶಾಸಕರು ಸಂತ್ರಸ್ತರಿಗೆ ಚೆಕ್ ವಿತರಿಸಿದರು. ಬೀದರ್ ದಕ್ಷಿಣ ಕ್ಷೇತ್ರದ ಮರ್ಜಾಪುರ ಎಂ ಗ್ರಾಮದ ಪ್ರಕಾಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದರೆ ಯದಲಾಪುರ ಗ್ರಾಮದ ಜೈ ಭೀಮ ತಮ್ಮ ಮನೆಯ ಮೇಲ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿಧ್ಯುತ ತಂತಿ ತಗುಲಿ ಮೃತಪಟ್ಟಿದ್ದರು….. ಬಗದಲ್ ತಾಂಡದ ರೈತ ಹರಿಲಾಲ ಎತ್ತುಗಳು ಜಮೀನಿನಲ್ಲಿ ಮೇಯುತ್ತಿರುವಾಗ ವಿಧ್ಯುತ ತಂತಿ ತಗುಲಿ ಮೃತಪಟ್ಟಿದ ಎತ್ತುಗಳ ಮಾಲಿಕರಿಗೆ 1 ಲಕ್ಷ ರೂ. ಪರಿಹಾರ ಚೆಕ್ ವಿತರಿಸಲಾಗಿದೆ. ಬೀದರ ದಕ್ಷಿಣ ಕ್ಷೇತ್ರ ದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ….ಮೃತಪಟ್ಟ ಕುಟುಂಬಸ್ಥರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದರು.
