ರೈತನಿಗೆ ಚಾಕು ಇರಿದು ಹಣ ಮತ್ತು ಒಡವೆ ದರೋಡೆ..
1 min read
ತುಮಕೂರು : ರೈತನಿಗೆ ಚಾಕು ಇರಿದು ಹಣ ಮತ್ತು ಒಡವೆ ದರೋಡೆ ಮಾಡಿರುವ ಘಟನೆ ತುಮಕೂರು ನಗರ ಹೊರವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ. ವಾಚ್, ಚಿನ್ನದ ಸರ, 6 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿರುವ ದುಷ್ಕರ್ಮಿಗಳು.. ಟೊಮೆಟೊ ಬೆಳಗಾರ ಗಿರೀಶ್ ಚಾಕು ಇರಿತೊಳಕ್ಕಾಗಿದಾರೆ. ಗಿರೀಶ್ ಮತ್ತು ಚೇತನ್ ಅರಸೀಕೆರೆಯಿಂದ ಬೆಂಗಳೂರಿಗೆ ವಾಹನದಲ್ಲಿ ಟೊಮೆಟೊ ತೆಗೆದುಕೊಂಡು ಹೋಗುತ್ತಿದ್ದರು.. ಬುಧವಾರ ರಾತ್ರಿ 11.30 ಗಂಟೆ ಸುಕಾರಿಗೆ ನಿದ್ದೆ ಬಂದಂತಾಗಿ, ರಿಂಗ್ ರಸ್ತೆ ಬಳಿ ವಾಹನ ನಿಲ್ಲಿಸಿಕೊಂಡಿದ್ದರು.. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಚಾಕು ತೋರಿಸಿ ಬೆದರಿಸಿದ್ದಾರೆ.. ಹಣ ಕೊಡಲು ಒಪ್ಪದಿದ್ದಾಗ ಗಿರೀಶ್ ತೊಡೆಗೆ ಚಾಕುವಿನಿಂದ ಇರಿದಿದ್ದಾರೆ.. ಹಣ, ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಧ್ಯ ರೈತ ಗಿರೀಶ್ ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
