
ಮಂಡ್ಯ : ಮನ್ಮುಲ್ ನಿರ್ದೇಶಕ ಡಾಲು ರವಿ, ಕೆಆರ್ ಪೇಟೆ ಶಾಸಕ ಹೆಚ್‌ಟಿ ಮಂಜು ವಿರುದ್ದ ಏಕ ವಚನದಲ್ಲಿ ಅವಹೇಳನಕಾರಿಯಾಗಿ ಮಾತನಾಡ್ತಿದ್ದಾರೆ ಅಂತ ಕೆಆರ್ ಪೇಟೆ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಕೆಆರ್ ಪೇಟೆಯಲ್ಲಿ ಈ ಕುರಿತು ಸಭೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಮನ್ಮುಲ್ ನಿರ್ದೇಶಕ ಡಾಲು ರವಿ, ಎಂಬಿ ಹರೀಶ್ ಇಬ್ಬರು ಶಾಸಕ ಮಂಜು ಅವರನ್ನ ಏಕವಚನದಲ್ಲಿ ಮನಬಂದಂತೆ ತೆಗಳುತ್ತಿದ್ದಾರೆ. ಅವರ ಮಾತಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ರೆ ಇನ್ಮುಂದೆ ಡಾಲು ರವಿ ಅವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.
