ಪಾಠ ಮಾಡುತ್ತಿರುವಾಗಲೇ ಹಾರಿಹೋಯಿತು ಶಿಕ್ಷಕನ ಪ್ರಾಣ…!
1 min read
ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ತೆಲಸಂಗ ವಸತಿ ತೋಟದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಿನ್ನೆ ಜರುಗಿದೆ. ಮೃತಪಟ್ಟ ಶಿಕ್ಷಕನನ್ನು ಭೈರಪ್ಪ ಆರ್ ಸಾತಗೊಂಡನವರ (55) ಎನ್ನಲಾಗಿದ್ದು, ಮೃತ ಶಿಕ್ಷಕ ಇಬ್ಬರು ಪುತ್ರಿಯರನ್ನು, ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ.
