ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು, ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿಯಲ್ಲಿ ಘಟನೆ, ಮೊಬೈಲ್ನಲ್ಲಿ ದೃಶ್ಯ ಸೆರೆ.

https://youtu.be/ki1KDDScGY8
https://youtu.be/ki1KDDScGY8ಆನೇಕಲ್:
ಈಜಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರು ಹೂರವಲಯದ
ಆನೇಕಲ್ ತಾಲೂಕಿನ ಬನ್ನೇರುಘಟ್ಟ ಸಮೀಪದ ಸುವರ್ಣಮುಖಿ ಕಲ್ಯಾಣಿಯಲ್ಲಿ ಘಟನೆ ನಡೆದಿದ್ದು. ನೀರಿನಲ್ಲಿ ಈಜಡಲು ಹೋಗಿದ್ದ ಇವರು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ.
ಬೊಮ್ಮನಹಳ್ಳಿಯ ಗಾರ್ವೆಬಾವಿ ಪಾಳ್ಯದ ದೀಪು (20) ಯೋಗೀಶ್ವರನ್ (20) ಮೃತ ವಿದ್ಯಾರ್ಥಿಗಳು, ಹೆಬ್ಬಗೋಡಿಯ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಇಂದು ಸ್ನೇಹಿತರ ಜೊತೆಗೆ ಬನ್ನೇರುಘಟ್ಟಕ್ಕೆ ತೆರಳಿದ್ದರು, ಮೊದಲು ಸುವರ್ಣಮುಖಿ ಕಲ್ಯಾಣಿಗೆ ಇಳಿದಿದ್ದ ಯೋಗೇಶ್ವರನ್ ಈಜಾಡಲು ಬರದೆ ಪರದಾಡುತ್ತಿರುವುದನ್ನು ನೋಡಿ ಸ್ನೇಹಿತ ದೀಪು ನೆರವಿಗೆ ಎಂದು ದಾವಿಸಿದ್ದಾನೆ ಈ ಸಂದರ್ಭದಲ್ಲಿ ಇಬ್ಬರು ಕೂಡ ಈಜಾಡಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಕೂಡಲೇ ಸ್ನೇಹಿತರು ಬನ್ನೇರುಘಟ್ಟ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದು, ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ…
