ರಾತ್ರ್ರಿ ಗ್ಯಾಸ್ ಸೋರಿಕೆ: ಬಾಡಿಗೆ ಮನೆಯ ಒಂದೇ ಕೊಠಡಿಯಲ್ಲಿ ನಾಲ್ವರು ಉಸಿರುಗಟ್ಟಿ ಕಾರ್ಮಿಕರ ಸಾ*ವು.
ಉಸಿರುಗಟ್ಟಿ ಒಂದೇ ಕೊಠಡಿಯಲ್ಲಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಉಪವಿಭಾಗದ ಮುತ್ಸಂದ್ರ ಗ್ರಾಮದ ಬಾಡಿಗೆ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು ಇಂದು ಮದ್ಯಾಹ್ನ ಬೆಳಕಿಗೆ ಬಂದ ಘಟನೆ ಇದಾಗಿದ್ದು ನಾಲ್ವರು ಕಾರ್ಮಿಕರು ಅಂತರರಾಜ್ಯದವರಾಗಿದ್ದಾರೆ. ಜಯಂತ್ ಸಿಂಗ್ (೨೫), ನೀರೇಂದ್ರ ನಾಥ್ ಟೈಡ್( ೨೪), ಡಾಕ್ಟರ್ ಟೈಡ್(೨೫) ದನಂಜಯ್ ಟೈಡ್ (೨೦) ಅಸುನೀಗಿದ ಕಾರ್ಮಿಕರಾಗಿದ್ದಾರೆ.
ಬಾಡಿಗೆ ಮನೆಯಲ್ಲಿ ರಾಥ್ರಿ ಮಲಗುವ ಮುನ್ನ ಗ್ಯಾಸ್ ಸೋರಿಕೆಯಾಗಿದ್ದು ಗಮನಿಸದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಮೇಲ್ನೋಟಕ್ಕೆ ಶಂಕೆ ಮೂಡಿದೆ. ಅದಲ್ಲದೆ ರಾಥ್ರಿ ಚಳಿಗೆ ಕಿಟಕಿಗಳನ್ನೂ ಮುಚ್ಚಿ ನಾಲ್ವರು ಮಲಗಿದ್ದರು.
ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಚಂದ್ರಕಾAತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ದಏಹಗಳನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳಿಸಿಕೊಡಲಾಗಿದೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![]()
