CarAccidentDeath ಕಾರಿನ ಕಿಟಕಿ ಏರಿ ಕಿರಿಕ್ ತೆಗೆದು ಅಪಘಾತ, ಮರಕ್ಕೆ ಡಿಕ್ಕಿ ಹೊಡೆದ ಕಾರು. ಯುವಕ ಸಾ**ವು.
CarAccidentDeath ಕಾರಿನ ಕಿಟಕಿ ಏರಿ ಕಿರಿಕ್ ತೆಗೆದು ಅಪಘಾತ, ಮರಕ್ಕೆ ಡಿಕ್ಕಿ ಹೊಡೆದ ಕಾರು. ಯುವಕ ಸಾ**ವು.

ಕ್ರಿಕೆಟ್ ಸೋಲು-ಗೆಲುವಿನ ವಿಚಾರದಲ್ಲಿ ಎಣ್ಣೆ ಪಾರ್ಟಿ ಗಲಾಟೆ, ಕಾರು ಅಪಘಾತ, ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ.
ಬೆಂ,ಆನೇಕಲ್,ಜ,26: ಭಾನುವಾರ ರಾತ್ರಿ ಕ್ರಿಕೆಟ್ ವಿಚಾರದಲ್ಲಿ ಗೆದ್ದವನ ಕಾರಿನ ಕಿಟಕಿಗೆ ಏರಿದ ಸೋತ ಪ್ರಶಾಂತ್ ಕೊಟ್ಟ ಕಿರಿಕಿರಿಗೆ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೋತವ ಸಾವನ್ನಪ್ಪಿದರೆ, ಕಾರು ಚಾಲಕ ರೋಷನ್ ಹೆಗಡೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಾರು ಜಖಂಗೊಂಡ ಘಟನೆ ಹೆಬ್ಬಗೋಡಿ ಕಮ್ಮಸಂದ್ರದಲ್ಲಿ ನಡೆದಿದೆ.
ಹೆಬ್ಬಗೋಡಿಯ ವೀರಸಂದ್ರ ನಿವಾಸಿ 28 ವರ್ಷದ ಪ್ರಶಾಂತ್ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಕಾರು ಚಲಾಯಿಸುತ್ತಿದ್ದ ರೋಷನ್ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಶನಿವಾರ ಕಮ್ಮಸಂದ್ರ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂಧ್ಯಾವಳಿಗಳನ್ನ ಏರ್ಪಡಿಸಲಾಗಿತ್ತು.
ಪಂದ್ಯದಲ್ಲಿ ಗಾಯಾಳು ರೋಷನ್ ಪಂದ್ಯ ಗೆದ್ದಿದ್ದ, ಸಾವನ್ನಪ್ಪಿರುವ ಪ್ರಶಾಂತ್ ಸೋತಿದ್ದ.
ಇದೇ ಸೋಲಿನ ಕೋಪದಲ್ಲಿ ಮನೆಗೆ ಹೋಗಿದ್ದ ಪ್ರಶಾಂತ್, ಗೆದ್ದ ರೋಷನ್ ಮತ್ತಿತರಿಗೆ ಪೋನ್ ಮಾಡಿ ಮಾತಿನ ಚಕಮಕಿ ಹೆಚ್ಚಿತ್ತು. ಈ ನಡುವೆ ಮತ್ತೆ ಕಮ್ಮಸಂದ್ರ ಕ್ರಿಕೆಟ್ ಆಟದ ಮೈದಾನಕ್ಕೆ ಬಂದ ಪ್ರಶಾಂತ್ ಕುಡಿದ ಮತ್ತಿನಲ್ಲಿಯೇ ಗೆದ್ದ ರೋಷನ್ ಮೇಲೆ ಗಲಾಟೆಗೆ ನಿಂತಿದ್ದ.
ರೋಷನ್ ಹೆಗಡೆ ಮೇಲೆ ಹಲ್ಲೆಯಾಗುತ್ತಿದ್ದಂತೆ ತನ್ನ ಕಾರಿನಲ್ಲಿ ಮನೆಗೆ ಹೊರಡಲು ಸಜ್ಜಾಗಿದ್ದ. ಆದರೆ ಪ್ರಶಾಂತ್ ಬಿಡದೆ ಕಾರಿನ ಎಡಭಾಗದ ಕಿಟಕಿ ಹಿಡಿದು ರೋಷನ್ ಗೆ ಅವ್ಯಾಚ್ಯ ಪದಗಳಿಂದ ನಿಂದಿಸುತ್ತಿದ್ದ ಇದರಿಂದ ರೋಷನ್ ಕಾರಿನ ವೇಗ ಹೆಚ್ಚಿಸಿದಾಗ ಆಯತಪ್ಪಿ ಕಾರು ರಸ್ತೆಯ ಎಡಕ್ಕೆ ಇದ್ದ ಮರಕ್ಕೆ ಡಿಕ್ಕಿ ಹೊಡೆದಿದೆ.
ಪ್ರಶಾಂತ್ ನನ್ನು ಆಸ್ಪತ್ರೆಗೆ ಸಾಗಿಸುವ ಮದ್ಯೆ ಸಾವನ್ನಪ್ಪಿದ್ದಾನೆ.
ಕಾರು ಚಲಾಯಿಸಿದ ರೀಷನ್ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
![]()