January 2026
M T W T F S S
 1234
567891011
12131415161718
19202122232425
262728293031  
January 29, 2026

c24kannada

ವಸ್ತುಸ್ಥಿತಿಯತ್ತ

SCSPTSP ACT ಕಾಂಗ್ರೆಸ್ ದಲಿತರಿಗೆಷ್ಟು ಸಹಕರಿಸಿದ್ದೀರಿ? ಶ್ವೇತಪತ್ರ ಹೊರಡಿಸಿ. -ಪಟಾಪಟ್ ರವಿ, ಜೆಡಿಎಸ್ ಎಸ್ಸಿ ಘಟಕ ರಾಜ್ಯ ಕಾರ್ಯದರ್ಶಿ.

SCSPTSP ACT ಕಾಂಗ್ರೆಸ್ ದಲಿತರಿಗೆಷ್ಟು ಸಹಕರಿಸಿದ್ದೀರಿ? ಶ್ವೇತಪತ್ರ ಹೊರಡಿಸಿ. -ಪಟಾಪಟ್ ರವಿ, ಜೆಡಿಎಸ್ ಎಸ್ಸಿ ಘಟಕ ರಾಜ್ಯ ಕಾರ್ಯದರ್ಶಿ. ದಲಿತ ಪರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ ಎಸ್ಸಿಎಸ್ಪಿ ಟಿಎಸ್ಪಿ ಕಾಯಿದೆಯ ೨೦೨೪-೨೫ರ ಅಡಿ ಎಷ್ಟು ಖರ್ಚಾಗಿದೆ ಶ್ವೇತ ಪತ್ರ ಹೊರಡಿಸಿ ಎಂದು ಜೆಟಿಎಸ್ ರಾಜ್ಯ ಎಸಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ. ಅವರು ಅತ್ತಿಬೆಲೆಯಲ್ಲಿ ಮಾಧ್ಯಮಘೋಷ್ಟಿಯನ್ನುದ್ದೇಶಿಸಿ ಸರ್ಕಾರ ನಿಜವಾಗಲೂ ದಲಿತ ಪರವಿದ್ದರೆ ಕಾಂಗ್ರೆಸ್ ಮಾಡಿರುವ ಕಾನೂನನನ್ನೇ ತಿರುಚಿ ತಮಗೆ ಬೇಕಾದ ಹಾಗೆ ಬಳಸಿ ದಲಿತರ ಉದ್ದಾರಕ್ಕೆ ಇರುವ ಯೋಜನೆಗಳನ್ನ ಇತರೆ ಯೋಜನೆಗಳಿಗೆ ಬಳಸಿವೆ ಇದನ್ನ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಒಪ್ಪಿದ್ದಾರೆ. ಹೀಗಾಗಿ ಎಲ್ಲಿ ಕಾಂಗ್ರೆಸ್ ದಲಿತಪರವಿದೆ ಎಂದು ಪ್ರಶ್ನಿಸಿದ್ದಾರೆ.
JDS ANEKAL

ಕಾಂಗ್ರೆಸ್ ದಲಿತರಿಗೆಷ್ಟು ಸಹಕರಿಸಿದ್ದೀರಿ? ಶ್ವೇತಪತ್ರ ಹೊರಡಿಸಿ. -ಪಟಾಪಟ್ ರವಿ, ಜೆಡಿಎಸ್ ಎಸ್ಸಿ ಘಟಕ ರಾಜ್ಯ ಕಾರ್ಯದರ್ಶಿ.

Share it
JDS ANEKAL
ಕಾಂಗ್ರೆಸ್ ದಲಿತರಿಗೆಷ್ಟು ಸಹಕರಿಸಿದ್ದೀರಿ? ಶ್ವೇತಪತ್ರ ಹೊರಡಿಸಿ. -ಪಟಾಪಟ್ ರವಿ, ಜೆಡಿಎಸ್ ಎಸ್ಸಿ ಘಟಕ ರಾಜ್ಯ ಕಾರ್ಯದರ್ಶಿ.

 

SCSPTSP ACT ಆನೇಕಲ್,ಜ,೨೩: ದಲಿತ ಪರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಸರ್ಕಾರ ಎಸ್ಸಿಎಸ್ಪಿ ಟಿಎಸ್ಪಿ ಕಾಯಿದೆಯ ೨೦೨೪-೨೫ರ ಅಡಿ ಎಷ್ಟು ಖರ್ಚಾಗಿದೆ ಶ್ವೇತ ಪತ್ರ ಹೊರಡಿಸಿ ಎಂದು ಜೆಟಿಎಸ್ ರಾಜ್ಯ ಎಸಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶ್ನಿಸಿದ್ದಾರೆ. ಅವರು ಅತ್ತಿಬೆಲೆಯಲ್ಲಿ ಮಾಧ್ಯಮಘೋಷ್ಟಿಯನ್ನುದ್ದೇಶಿಸಿ ಸರ್ಕಾರ ನಿಜವಾಗಲೂ ದಲಿತ ಪರವಿದ್ದರೆ ಕಾಂಗ್ರೆಸ್ ಮಾಡಿರುವ ಕಾನೂನನನ್ನೇ ತಿರುಚಿ ತಮಗೆ ಬೇಕಾದ ಹಾಗೆ ಬಳಸಿ ದಲಿತರ ಉದ್ದಾರಕ್ಕೆ ಇರುವ ಯೋಜನೆಗಳನ್ನ ಇತರೆ ಯೋಜನೆಗಳಿಗೆ ಬಳಸಿವೆ ಇದನ್ನ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಒಪ್ಪಿದ್ದಾರೆ. ಹೀಗಾಗಿ ಎಲ್ಲಿ ಕಾಂಗ್ರೆಸ್ ದಲಿತಪರವಿದೆ ಎಂದು ಪ್ರಶ್ನಿಸಿದ್ದಾರೆ.
೨೦೨೪-೨೫ರ ಆಯವ್ಯದಲ್ಲಿ ದಲಿತರಿಗೆ ಮೀಸಲಿದ್ದ ೪೨,೦೦೦ ಕೋಟಿ ಹಣದಲ್ಲಿ ೧೬,೦೦೦ ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಿಡುಗಡೆ ಮಾಡಿದ್ದೀರಿ ಇದು ದಲಿತರ ಉದ್ದಾರವಾ?
ಇನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ೭ಡಿ ಕಲಂ ನಂತೆ ಎಸ್ಸಿಎಸ್ಪಿ ಟಿಎಸ್ಪಿ ಕಾಯಿದೆ ಹಣ ಇತರೆ ಯೋಜನೆಗಳಿಗೆ ದುರುಪಯೋಗವಾದರೆ ಗರಿಷ್ಟ ಕಠಿಣ ಕ್ರಮ ಎಂದ ಸರ್ಕಾರವೇ ಅದನ್ನ ಸಿ ಕಾಯಿದೆ ಮಾಡಿ ತಮ್ಮ ಮೂಗಿಗೆ ತಕ್ಕಂತೆ ಮರ‍್ಪಾಡಿಸಿ ಸಮರ್ಥನೆ ಮಾಡಿಕೊಂಡು ದಲಿತ ಮೂಗಿಗೆ ತುಪ್ಪ ಸವರಿದೆ ಎಂದು ಆರೋಪಿಸಿದರು. ಅಲ್ಲದೆ ೨೦೨೫-೨೬ರ ಮುಂಗಡ ಆಯವ್ಯಕ್ಕೆ ಬಳಸಿಕೊಮಡಿರ ೧೬೦೦೦ ಕೋಟಿ ಹಣ ಜಮಾಯಿಸಬೇಕು ಎಂದು ಬೇಡಿಕೆಯಿತ್ತರು.
ಇದೇ ಕಾಯಿದೆಯಡಿ ದಲಿತರಿಗೆ ಭೂಮಿ ಹೊಂದುವ (ಎಲ್ಪಿಎಸ್) ಯೋಜನೆ ಎಷ್ಟು ಎಕರೆ ಎಲ್ಲೆಲ್ಲಿ ಎಷ್ಟೆಷ್ಟು ಖರ್ಚು ಮಾಡಿದ್ದೀರಿ, ಎಷ್ಟು ಅರ್ಜಿಗಳು ಬಂದವು ಎನ್ನುವುದನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಎಂದರು.

ನಗರ ಪ್ರದೇಶಗಳಲ್ಲಿ ದಲಿತರ ಭೂಮಿ ಸರ್ಕಾರದ ವಿವಿಧ ಯೋಜನೆಗಳಿಗೆ ಕಳೆದುಕೊಂಡಿದ್ದಾರೆ. ಎಕೆರಗಳು ಹೋಗಿ ಗುಂಟೆಗಳಾಗಿ ಮಾರ್ಪಟ್ಟಿವೆ ಗಂಗಾ ಕಲ್ಯಾಣ ಯೋಜನೆಗೂ ಬಾರದಂತಾಗಿದೆ ದಲಿತರ ಪರಇಸ್ಥಿತಿ. ಹೀಗಾಗಿ ೧.೧೫ ಎಕೆರ ನಿಯಮದ ಬದಲಿಗೆ ೨೦ ಗುಂಟೆಯ ಮಿತಿಯನ್ನು ಕಡಿಮೆಗೊಳಿಸಿ ಕೊಳವೆ ಬಾವಿ ತೆರೆಯಲು ದಲಿತರಿಗೆ ನೆರವಾಗಿ ಎಂದರು.

ಆಶ್ರಯ ಯೋಜನೆಯಲ್ಲಿ ೧೦೦ ಚದರ ಅಡಿಯಷ್ಟು ವಿಸ್ತೀರ್ಣ ಮಾತ್ರ ನೀಡಲಾಗುತ್ತಿದೆ ಆದರೆ ಇದು ಸಾಲದು, ಕನಿಷ್ಟ ೨೦೦ ಚದರ ಟಡಿಗೂ ಮಿಗಿಲಾದ ಜಾಗ ನೀಡಿ ಎಂದು ಮನವಿ ಮಾಡಿದರು.
ದಲಿತೋಧ್ಯಮಿಗಳ ಭದ್ರತಾ ಹಣವನ್ನು ೨ಕೋಟಿಗೆ ಹೆಚ್ಚಳ ಮಾಡಿ, ಕೈಗಾರಿಕಾ ವಲಯದಲ್ಲಿ ದಲಿತರಿಗೆ ೧೮-೨೫ ಶೇಕಡ ಮೀಸಲಾತಿ ಜಾರಿಗೊಳಿಸಿ ಎಂದರು.
ಹೆಚ್‌ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದಾಗ ಬೆಳೆ ಸಾಲಕ್ಕಾಗಿ ಸಹಕಾರಿ ಬ್ಯಾಂಕುಗಳಲ್ಲಿ ಅಡವಿಟ್ಟ ಚಿನ್ನದ ಸಾಲವನ್ನು ಮನ್ನಾ ಮಾಡುವಷ್ಟರಲ್ಲಿ ಸರ್ಕಾರ ಇಲ್ಲವಾದ್ದರಿಂದ ಈ ಯೋಜನೆ ಮತ್ತೆ ಜಾರಿಯಾಗುವ ಮೂಲಕ ಕಾಂಗ್ರೆಸ್ ರೈತ ಪರವೆಂದು ಸಾಭೀತುಪಡಿಸಿ ಎಂದರು.

ಗ್ರಾಮೀಣ ಭಾಗದಲ್ಲಿ ಕ್ರೀಡಾ ಮನೋಭಾವವನ್ನು ಹೆಚ್ಚುವಲ್ಲಿ ದಲಿತ ಯುವ ಜನ ಕ್ರೀಡಾ ಇಲಾಖೆ ಸ್ಥಾಪಿಸಿ ಅವರಿಗೆ ನೆರವಾಗುವ ಯೋಜನೆ ಜಾರಿಗೊಳಿಸಿ.
ಪ್ರತಿ ಏಪ್ರಿಲ್ ೧೪ರಂದು ಡಾ ಬಿಆರ್ ಅಂಬೇಡ್ಕರ್ ಜಯಂತಿಗೆ ಹಸಿರು ಪಡಿತರ ಚೀಟಿ ಹೊಂದಿರುವ ಎಲ್ಲ ಬಡವರಿಗೆ ೩೦೦೦ರೂ ನೀಡುವ ಮೂಲಕ ಗ್ರಾಮೀಣ ಭಾಗದವರಿಗೂ ಡಾ ಅಂಬೇಡ್ಕರ್ ಜಯಂತಿ ಹಬ್ಬ ಆಚರಿಸುವಂತೆ ನೆರವಾಗಿ ತಾವು ನಿಜವಾದ ಅಹಿಂದ ನಾಯಕರು ಎಂದು ಸಾಭೀತು ಪಡಿಸಿ ಎಂದು ಮನವಿ ಮಾಡಿದರು.

ಘೋಷ್ಟಿಯಲ್ಲಿ ಅತ್ತಿಬೆಲೆ ಬಷೀರ್ ಮತ್ತಿತರರು ಬಾಗವಹಿಸಿದ್ದರು.

 

Loading

Leave a Reply

Your email address will not be published. Required fields are marked *

error: Content is protected !!