ಕೋಲಾರದಲ್ಲಿ ಭೀಕರ ಪ್ರೇಮ ಹ**ತ್ಯೆ: ವಿವಾಹಿತ ಪ್ರಿಯಕರನಿಂದ ನರ್ಸ್ ಸುಜಾತಾ ಬರ್ಬರ ಕೊ**ಲೆ
ಕೋಲಾರದಲ್ಲಿ ಭೀಕರ ಪ್ರೇಮ ಹ**ತ್ಯೆ: ವಿವಾಹಿತ ಪ್ರಿಯಕರನಿಂದ ನರ್ಸ್ ಸುಜಾತಾ ಬರ್ಬರ ಕೊ**ಲೆಪ್ರೀತಿ ಮತ್ತು ಹಣಕಾಸಿನ ವ್ಯವಹಾರದ ನಡುವಿನ ಕಲಹವು ಕೊಲೆಯಲ್ಲಿ ಅಂತ್ಯವಾದ ಹೃದಯವಿದ್ರಾವಕ ಘಟನೆ ಕೋಲಾರ ನಗರದ ಹೊರವಲಯದ ಬಂಗಾರಪೇಟೆ ಬ್ರಿಡ್ಜ್ ಬಳಿ ನಡೆದಿದೆ. ವಿವಾಹಿತನಾಗಿದ್ದ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಕ್ರೂರವಾಗಿ ಹ**ತ್ಯೆ ಮಾಡಿದ್ದಾನೆ.ಬಂಗಾರಪೇಟೆ ತಾಲ್ಲೂಕಿನ ದಾಸರಹೊಸಹಳ್ಳಿ ಮೂಲದ ಸುಜಾತಾ (28) ಕೊ**ಲೆಯಾದ ಯುವತಿ. ಕಳೆದ ಮೂರು ತಿಂಗಳಿಂದ ನರಸಾಪುರ ಕೈಗಾರಿಕಾ ಪ್ರದೇಶದ ‘ಬೆಲ್ರೈಸ್’ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಯಳಬುರ್ಗಿ ಗ್ರಾಮದ ಚಿರಂಜೀವಿ (27) ಎಂಬಾತನೇ ಕೊಲೆ ಮಾಡಿದ ಆರೋಪಿ. ಈತ ಹೊಸಕೋಟೆಯ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ.ಪೋಲೀಸರ ಮಾಹಿತಿಯಂತೆ, ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಹಲವು ದಿನಗಳಿಂದ ತೀವ್ರ ಜಗಳ ನಡೆಯುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಲ್ಲೆ ನಡೆದಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆದರೂ ಇಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಸುಜಾತಾಳನ್ನು ಕೋಲಾರ ಬಸ್ ಡಿಪೋ ಬಳಿ ತಡೆದು ಮಾತುಕತೆಗೆ ಇಳಿದ ಆರೋಪಿ, ಮಾತಿನ ತೀವ್ರತೆಯಲ್ಲಿ ತನ್ನ ಬಳಿಯಿದ್ದ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ.ಸುಜಾತಾಳ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಆರೋಪಿಯನ್ನು ಬೆನ್ನಟ್ಟಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿ ಬಂಧನದಲ್ಲಿದ್ದಾನೆ.
![]()