ಅಪಾರ್ಟ್ಮೆಂಟ್ ಮನೆಗೆ ನುಗ್ಗಿ 14 ಲಕ್ಷ, ನಗ ನಾಣ್ಯ ದೋಚಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ ಹೆಬ್ಬಗೋಡಿ ಪೊಲೀಸರು

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಮಂಗಲದ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಕಳುವಾಗಿದ್ದ ಒಂದು ಕೋಟಿ 14 ಲಕ್ಷ ನಗದು ಮತ್ತು 16 ಗ್ರಾಂ ಚಿನ್ನದ ಸರವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳುವಲ್ಲಿ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬೆಂಗಳೂರು ಸುಂಕದಕಟ್ಟೆ ಮೂಲದ ಶ್ರೀನಿವಾಸ್ ಮೂರ್ತಿ (39), ಮತ್ತು ದಾಸನಪುರ ಚಿಕ್ಕ ಗೊಲ್ಲರಹಟ್ಟಿಯ ಅರುಣ್ ಕುಮಾರ್ (39) ಎಂದು ಗುರುತಿಸಲಾಗಿದೆ.
ನವೆಂಬರ್ 8ರಂದು ಹುಲಿಮಂಗಲ ಗ್ರಾಮದ ಎಲಿಗನ್ಸ್ ಅಪಾರ್ಟ್ವೊಂದರಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು ನಗದು ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದರು.
ನವೆಂಬರ್ 9ರಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ತೀವ್ರನಿಘಾವಹಿಸಿ ಆರೋಪಿಗಳ ಬೆನ್ನ ಹಿಂದೆ ಬಿದ್ದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್, ಎಸಿಪಿ ಸತೀಶ್ ಅವರ ಮಾರ್ಗದರ್ಶನದಲ್ಲಿ ಹೆಬ್ಬಗೋಡಿ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸೋಮಶೇಖರ್, ಸಬ್ ಇನ್ಸ್ಪೆಕ್ಟರ್ ಅಯ್ಯಪ್ಪ, ಸಿಬ್ಬಂದಿಗಳಾದ ಮಹಾಂತೇಶ್ ಗೌಡ, ಸಂತೋಷ್, ಪ್ರವೀಣ್, ವೇಣುಗೋಪಾಲ್, ಅಶೋಕ್, ನಾಗೇಶ್, ಆನಂದ್, ಮುರುಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.