ಮೂರು ದಿನಗಳಿಂದ ಆನೇಕಲ್ ಸುತ್ತ ಕಾಣಿಸಿಕೊಳ್ಳುತ್ತಿರುವ ಕಾಡು ಕೋಣ. ಜಾಣ ಕಿವುಡರಾದ ಅರಣ್ಯಾಧಿಕಾರಿಗಳು.
1 min read

ಮೂರು ದಿನಗಳಿಂದ ಆನೇಕಲ್ ಸುತ್ತ ಕಾಣಿಸಿಕೊಳ್ಳುತ್ತಿರುವ ಕಾಡು ಕೋಣ.
ಜಾಣ ಕಿವುಡರಾದ ಅರಣ್ಯಾಧಿಕಾರಿಗಳು.
ಆನೇಕಲ್,ನ,28: ಎರೆಡು ಮೂರು ದಿನಗಳಿಂದ ಹಳ್ಳಿಗರ ಮೊಬೈಲ್ ದೃಶ್ಯಗಳಲ್ಲಿ ಸೆರೆಯಾದ ಕಾಡು ಕೋಣದ ಆಟೋ ಟೋಪ ಮಿತಿ ಮೀರುತ್ತಿದ್ದರೂ ಅರಣ್ಯಾಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಲಿದೆ.
ಮೊದಲದಿನ ಸೊಪ್ಪಹಳ್ಳಿ ಕಡೆಯಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್ ಹೋಗುತ್ತಿದ್ದವರಿಗೆ ಮರಗಳ ನಡುವೆ ಕಾಡು ಕೋಣ ಪತ್ತೆಯಾಗಿರುವುದನ್ನು ಮೊಬೈಲ್ನಲ್ಲಿ ದೃಶ್ಯ ಸೆರೆಹಿಡಿದಿದ್ದಾರೆ. ಅನಂತರ ಸ್ಥಳೀಯವಾಗಿ ಆ ದೃಶ್ಯ ವೈರಲ್ ಆಗಿತ್ತು. ಅದಾದ ನಂತರ ನಿನ್ನೆ ಖಾಸಗೀ ಬಡಾವಣೆಯ ಗೋಡೆ ಕೆಡವಿ ನಿಲ್ಲಿಸಿದ್ದ ಬೈಕನ್ನು ಕೊಂಬಿನಿಂದ ಚಿಮ್ಮಿದ ದೃಶ್ಯವೂ ವೈರಲ್ ಆಗಿದೆ. ರಾತ್ರಿ ದೊಡ್ಡ ಹಾಗಡೆ ಗ್ರಾಮದಲ್ಲಿ ನಿಂತಿರುವ ದೃಶ್ಯವೂ ಸಾರ್ವಜನಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು ಸುತ್ತಲ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಸರ್ವೇ ಸಾಮಾನ್ಯವಾಗಿ ಆನೇಕಲ್ ನತ್ತ ಆನೆಗಳು ಬರುವುದು ಸಹಜ ಆಗಾಗ ಚಿರತೆ, ಕರಡಿ ಮತ್ತಿತರ ಪ್ರಾಣಿಗಳು ಗ್ರಾಮಗಳತ್ತ ಬರುವುದು ಸಿಸಿ ಕ್ಯಾಮೆರಾಗಳ ಅಳವಡಿಸಿದ್ದರಿಂದ ಬಯಲಾಗಿತ್ತು.
ಆಗೆಲ್ಲ ಸಮರೋಪಾದಿಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತು ಕಾಡಿನತ್ತ ಡ್ರೈವ್ ಮಾಡಿ ಯಶಸ್ವಿಯಾಗಿತ್ತು.
ಆದರೆ ಇದೀಗ ಮೂರು ದಿನಗಳಿಂದ ಸತತವಾಗಿ ಗ್ರಾಮಗಳಲ್ಲಿ ಆಟೋಟೋಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಕ್ಕರೂ ಅರಣ್ಯಾಧಿಕಾರಿಗಳು ಹಾಗು ವನ್ಯ ಜೀವಿ ಸಂರಕ್ಷಣ ಇಲಾಖೆ ಧಿವ್ಯ ಮೌನಕ್ಕೆ ಇಳಿದಿದೆ.
![]()

