ಪತಿಯಿಂದ ಪತ್ನಿಯ ದೇಹಕ್ಕೆ ಪಾದರಸ ಚುಚ್ಚಿ ಕೊಲೆ ಆರೋಪ.
1 min read

ಪತಿಯಿಂದ ಪತ್ನಿಯ ದೇಹಕ್ಕೆ ಪಾದರಸ ಚುಚ್ಚಿ ಕೊಲೆ ಆರೋಪ.
ಆನೇಕಲ್,ನ,29: ಪತ್ನಿಯ ದೇಹಕ್ಕೆ ಪತಿಯೊಬ್ಬ ಪಾದರಸ ವನ್ನು ಇಂಜೆಕ್ಟ್ ಮಾಡುವ ಮೂಲಕ ಕೊಲೆ ಮಾಡಿದ್ದಾನೆ ಎಂಬ ಆರೋಪವನ್ನು ಸಾವಿಗೂ ಮುನ್ನ ಪೊಲೀಸರಿಗೆ (ಡಯಿಂಗ್ ಡಿಕ್ಲರೇಷನ್ ಸ್ಟೇಟ್ಮೆಂಟ್) ಸಾವಿಗೂ ಮುನ್ನ ನೀಡುವ ಹೇಳಿಕೆಯಲ್ಲಿ ದೃಢಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತೀರ್ವ ಡಯಾಲಿಸಿಸ್ ನಲ್ಲಿದ್ದ 37 ವರ್ಷದ ವಿದ್ಯಾ ಎ ಅತ್ತಿಬೆಲೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಇಂತಹದ್ದೊಂದು ಸ್ಪೋಟಕ ವಿಚಾರ ತಿಳಿಸಿದ್ದಾಳೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ಸರ್ಜಾಪುರ ರಸ್ತೆಯ ತಿಲಕ್ ನಗರದ ನಿವಾಸಿಯ ಪತಿ ಬಸವರಾಜ್ ಮತ್ತು ಮಾವ ಮಾರಿಸ್ವಾಮಾಚಾರಿ ಸಂಚು ನಡೆಸಿ ಫೆಬ್ರವರಿ 26ರ ಶಿವರಾತ್ರಿಯಂದು ಮತ್ತು ಬರೆಸಿ ತೊಡೆಗೆ ಪಾದರಸ್ ಇಂಜೆಕ್ಟ್ ಮಾಡಿದ್ದಾರೆ. ಮರುದಿನ ಬಲಗಾಲು ಊತ ಕಂಡು ನಿತ್ರಾಣಳಾಗಿ ಅತ್ತಿಬೆಲೆ ಆಸ್ಪತ್ರೆಗೆ ಪರಿಶೀಲನೆಗೆ ಹೋದಾಗ ಕಾಲಿನ ಊತ ಹೆಚ್ಚಾಗಿದ್ದರಿಂದ ಹೆಚ್ಚಿನ ತಪಾಸಣೆಗೆ ಮಾರ್ಚ್ 7ರಂದು ಅತ್ತಿಬೆಲೆ ಆಕ್ಸಫರ್ಡ್ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು. ಅಲ್ಲಿನ ಸ್ಕಾನಿಂಗ್ ತಪಾಸಣೆಯಲ್ಲಿ ತೊಡೆ ಪಾದರಸದ ಅಂಶಗಳು ದೇಹದಲ್ಲಿ ಕಂಡು ಬಂದಿದ್ದು ಅದು ವಿಷಕಾರಿಯಾಗಿ ಪತಿಣಮಿಸಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಇದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ವರ್ಗಾಯಿಸಲಾಗಿತ್ತಾದರೂ ದಿನೇ ದಿನೇ ಆರೋಗ್ಯ ಕ್ಷೀಣಿಸಿ ಡಯಾಲಿಸಿಸ್ ಅಲ್ಲಿ ಬದುಕುವಂತಾಯಿತು ಎಂದು ಪೊಲೀಸರಿಗೆ ಮಾಹಿತಿ ಇತ್ತಿದ್ದಾರೆ.
ಇದಕ್ಕೆ ಮೂಲ ಕಾರಣ ಗಂಡ ಬಸವರಾಜ್ ಆಗಿದ್ದು 2020ರಲ್ಲಿ ಪರಿಚಯವಾಗಿ ಶಿವಮೊಗ್ಗ ಮೂಲದ ವಿದ್ಯಾಳನ್ನು ಮೇ 18ರಂದು ಮದುವೆಯಾಗಿದ್ದು ಓವ್ರ ಮಗನಿದ್ದಾನೆ ಯಾರೊಂದಿಗೂ ಬೆರೆಯುವುದಾಗಲಿ ಎಲ್ಲಿಗೂ ಹೋಗುವುದಕ್ಕೆ ಮಾವ ಮತ್ತು ಗಂಡ ಆಸ್ಪದ ಕೊಡುತ್ತಿರಲಿಲ್ಲ. ಸಿಕ್ಕವರಿಗೆಲ್ಲಾ ವಿದ್ಯಾಗೆ ಹುಚ್ಚು ಹಿಡಿದಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದರು. ಇದರಿಂದ ಮಾನಸಿಕ ಹಿಂಸೆ ಅನಿಭವಿಸುತ್ತಿದ್ದೆ. ಮಗುವಾದ ಮೇಲೆ ಇದು ವಿಪರೀತಕ್ಕೆ ಹೋಗಿ ಹೀಗೆ ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿಕೆ ನೀಡಿದ್ದು ಇದೇ ಸೋಮುವಾರ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾ ಕೊನೆಯುಸಿರೆಳೆದಿದ್ದಾರೆ.
ಇದರಿಂದ ಅತ್ತಿಬೆಲೆ ಇನ್ಸಪೆಕ್ಟರ್ ರಾಘುಎಸ್ಗೌಡ ಗಂಡ ಮತ್ತು ಮಾವನ ಮೇಲೆ ಕೊಲೆ ಪ್ರಕರಣ ದಾಖಲಿಸಿ ವೈದ್ಯಕೀಯ ವರದಿಗಳ ಕೂಲಂಕುಷ ಮಾಹಿತಿಗಾಗಿ ಕಾಯುತ್ತಿದ್ದಾರೆ.
ಚಿನ್ನದ ಅಂಗಡಿಗಳಲ್ಲಿ ಸಿಲ್ವರ್ ಬಣ್ಣದ ಪಾದರಸವನ್ನು ದೇಹಕ್ಕೆ ಇಂಜೆಕ್ಟ್ ಮಾಡಲು ಸಾಧ್ಯವಾ ಎಂದು ನೋಡುವುದಾದರೆ ಅದು ನೇರವಾಗಿ ಅಸಾಧ್ಯ ಎನ್ನುವುದು ವೈದ್ಯಕೀಯ ಲೋಕದ ಲೆಕ್ಕಾಚಾರವಾಗಿದೆ. ಅದನ್ನು ನೀರಿನಲ್ಲಿ ಕಾಯಿಸಿ ಆವಿ ರೂಪದಲ್ಲಿ ಇಂಜೆಕ್ಟ್ ಮಾಡುವ ಸಾಧ್ಯತೆ ಇದೆ. ಅಷ್ಟಲ್ಲದೆ ಅದು ಹಾಗೇನಾದರೂ ದೇಹಕ್ಕೆ ತಲುಪಿದರೆ ವಿಷಕಾರಿಯಾಗಿ ಮಾರ್ಪಟ್ಟು ದಿನೇ ದಿನೇ ದೇಹ ಕ್ಷೀಣಿಸುವುದಲ್ಲದೆ.ಲ್ಯಾಬ್ ಒಂದರಲ್ಲಿ ಕೆಲಸ ಮಾಡುವ ಟೆಕ್ನಿಷಿಯನ್ ದಂಪತಿ ಇದಕ್ಕೆ ಸಹಕಾರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೀಗ ಗಂಡ ಬಸವರಾಜುನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.
ಪತ್ನಿ ಸಾವಿಗೆ ಪರಿ ಕಾರಣ ಅಲ್ಲ:
ವಿದ್ಯಾ ಮದುವೆ ಆಗುವ ಮುನ್ನ 2017ರಿಂದಲೂ ಮಾನಸಿಕವಾಗಿ ವರ್ತನೆ ಸರಿ ಇರಲಿಲ್ಲ. ಮಗು ಆದ ನಂತರ ತೀರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೊನೆಯವರೆಗೂ ಜೊತೆಯಲ್ಲಿದ್ದು ಹಾರೈಕೆ ಮಾಡಿದ್ದೇನೆ, ಯಾವುದೇ ಇಂಜೆಕ್ಷನ್, ಮಾದಕ ವಸ್ತು ನೀಡಿಲ್ಲ ಎಂದು ಪತಿ ಬಸವರಾಜು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಮೊದಲೇ ವಿದ್ಯಾರ ಹೇಳಿಕೆಯಂತೆ ಪೊಲೀಸರು ಆರಂಭದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಇದೀಗ ಪ್ರಕರಣವು ವರದಕ್ಷಿಣೆ ಕಿರುಕುಳದ ಹಿನ್ನೆಲೆಯ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.
ಮೃತ ದೇಹದಲ್ಲಿ ಪಾದರಸದ ಅಂಶ ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
![]()

