ಇಬ್ಬರ ಕೊಲೆ ಆರೋಪಿ ಕಾಲಿಗೆ ಹೆಬ್ಬಗೋಡಿ ಇನ್ಸಪೆಕ್ಟರ್ ಸೋಮಶೇಖರ್ ಗುಂಡು
1 min read

ಬೆಂಗಳೂರು: ಅಪಹರಣ, ಇಬ್ಬರ ಕೊಲೆ ಆರೋಪಿ ಮೇಲೆ ಬೆಂಗಳೂರು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಂಧ್ರಪ್ರದೇಶ ಮೂಲದ ರವಿಪ್ರನಾದ್ ರೆಡ್ಡಿ ಮೇಲೆ ಫೈರಿಂಗ್ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂರು ಬೊಮ್ಮಸಂದ್ರೆ ಸ್ಮಶಾನದ ಬಳಿ ರಾತ್ರಿ 10.30 ಕ್ಕೆ ಫೈರಿಂಗ್ ಮಾಡಲಾಗಿದೆ.ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ ಎಂಬುವರ ಕೊಲೆ ಪ್ರಕರಣದ ಆರೋಪಿ ರವಿಪ್ರಸಾದ್ ರೆಡ್ಡಿ ಮೇಲೆ ಹೆಬ್ಬಗೋಡಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ದಾಳಿ ಮಾಡಿದ್ದಾನೆ. ಹೆಡ್ ಕಾನ್ ಬಲ್ ಅಶೋಕ್ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಎರಡು ಮತ್ತು ಗುಂಡು ಹಾರಿಸುವ ವಾರ್ನಿಂ ಮಾಡಲಾಗಿದೆ. ಕೊನೆಗೆ ಹಬ್ಬಗೋಡಿ ಇನ್ನೆಕ್ಟರ್ ಸೋಮಶೇಖರ್ ಆರೋಪಿ ಮೇಲೆ ಪೈರಿಂಗ್ ಮಾಡಿದ್ದಾರೆ. ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಅಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![]()

