ಸರ್ಜಾಪುರ ನೂತನ ಪೊಲೀಸ್ ಠಾಣಾ ಕಟ್ಟಡ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಬಿ ಶಿವಣ್ಣ.

1 min read
Share it

ಸರ್ಜಾಪುರ ಗ್ರಾಮ ಒಂದು ಸಣ್ಣ ಹಳ್ಳಿ ಎಂದು ತಿಳಿದಿದ್ದೆ, ಆದರೆ ಇದೊಂದು ಪಟ್ಟಣ ಅಂತ ಇಲ್ಲಿಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು, ನಗರದಂತೆ ಬೆಳೆದಿದೆ. ಇಂತಹ ಭಾಗದಲ್ಲಿ ಚಿಕ್ಕ- ಹಳೆಯದಾದ ಪೊಲೀಸ್ ಠಾಣೆಯ ಕಟ್ಟಡದಲ್ಲಿ ಕೆಲಸ ನಿರ್ವಹಿಸುವುರು ಕಷ್ಟಸಾಧ್ಯವಾಗಿದೆ, ಇದನ್ನು ಮನಗಂಡು ಪ್ರೆಸ್ಟೀಜ್ ಸಂಸ್ಥೆಯು ಸುಮಾರು ನಾಲ್ಕುವರೆ ಕೋಟಿ ವೆಚ್ಚದಲ್ಲಿ ನೂತನವಾಗಿ ಪೊಲೀಸ್ ಠಾಣೆ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರೀಕ್ಷಕ ಡಾ. ಎಮ್.ಎ ಸಲೀಂ ತಿಳಿಸಿದರು.

ಅವರು ಸರ್ಜಾಪುರ ಪಟ್ಟಣದ ಪೋಲಿಸ್ ಠಾಣೆಯ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಬೆಳೆದಿರುವಂತಹ ಸರ್ಜಾಪುರ ಮಹಾನಗರಕ್ಕೆ ಸೂಕ್ತವಾದಂತಹ ಕಟ್ಟಡವನ್ನು ನಿರ್ಮಿಸಿ ಕೊಡಿ ಎಂಬ ಮನವಿಗೆ ಪ್ರೆಸ್ಟೀಜ್ ಕಂಪನಿ ಆಧುನಿಕ ರೀತಿಯಲ್ಲಿ ನಿರ್ಮಿಸಿ ಕೊಡುತ್ತಿರುವುದು ಸಂತಸ ತಂದಿದೆ. ವಿಚಾರವಾಗಿದೆ ಈ ಹಿಂದೆ ಪ್ರೆಸ್ಟೀಜ್ ಸಂಸ್ಥೆಯು ವೈಟ್ ಫೀಲ್ಡ್ ಪೊಲೀಸ್ ಠಾಣೆಯನ್ನು ಸಹ ನಿರ್ಮಿಸಿ ಇಲಾಖೆ ಹಸ್ತಾಂತರ ಮಾಡಲಾಗಿತ್ತು. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡಕ್ಕೆ ಶಾಸಕರು ಸರ್ಕಾರದ ಹಂತದಲ್ಲಿ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡಿ ಈ ಭಾಗದಲ್ಲಿ ಸುಸಜ್ಜಿತ ಪೊಲೀಸ್ ಠಾಣೆಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ಶಾಸಕ ಬಿ ಶಿವಣ್ಣ ಮಾತನಾಡಿ, ಆನೇಕಲ್ ತಾಲೂಕಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ, ಇದರಿಂದ ಎಲ್ಲ ಕಡೆ ಸಂಚಾರ ದಟ್ಟಣೆ ಹೆಚ್ಚುತ್ತಿದೆ ಹೀಗಾಗಿ ಈ ಭಾಗಗಳಲ್ಲಿ ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ನಿರ್ಮಿಸಬೇಕೆಂದು ಈಗಾಗಲೇ ಗೃಹ ಸಚಿವರಲ್ಲಿ ಮನವಿ ಮಾಡಿದ್ದು ಜೊತೆಗೆ ಆನೇಕಲ್ ತಾಲೂಕಿನಲ್ಲಿ ಮಹಿಳಾ ಪೊಲೀಸ್ ಠಾಣೆಯು ಸಹ ಆಗಬೇಕಾಗಿದೆ ಹೀಗಾಗಿ ಪೊಲೀಸ್ ಮಹಾ ನಿರ್ದೇಶಕರು ತಾಲೂಕಿಗೆ ಮೊದಲ ಆದ್ಯತೆ ನೀಡಿ ಈ ಕೆಲಸಗಳನ್ನು ಮಾಡಬೇಕು ಎಂದರು.

ಕಟ್ಟಡ ಕಾಮಗಾರಿ ತುರ್ತಾಗಿ ಪ್ರಾರಂಭಿಸಿ, ಒಂದು ವರ್ಷದ ಅವಧಿಯೊಳಗೆ ಠಾಣೆಯನ್ನು ನಿರ್ಮಿಸಿ ಕೊಡಬೇಕಾಗಿದೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಜಿಪಿ ಡಾ. ಅರುಣ್ ಚಕ್ರವರ್ತಿ,‌ ಕೇಂದ್ರವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಲಾಬೂರಾಮ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್ ಅಧಿಕ್ಷಕ ಸಿ ಕೆ ಬಾಬಾ, ಆನೇಕಲ್ ಉಪ ವಿಭಾಗ ಡಿವೈಎಸ್ಪಿ ಮೋಹನ್ ಕುಮಾರ್, ಸರ್ಜಾಪುರ ಪೊಲೀಸ್ ನಿರೀಕ್ಷಕ ಪಿ‌ಜಿ ನವೀನ್ ಕುಮಾರ್, ಪ್ರಿಸ್ಟೇಜ್ ಸಂಸ್ಥೆಯ ಮುಖ್ಯಸ್ಥ ವಿಜಯ್ ಶ್ರೀವತ್ಸವ್, ನಟರಾಜ್, ಲಕ್ಷ್ಮಣ್ ಸಿಂಗ್, ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ವೀಣಾ, ಉಪಾಧ್ಯಕ್ಷ ಡಾ. ಎಸ್ ಮಂಜುನಾಥ್ ಸರ್ಜಾ, ಮಾಜಿ ಅಧ್ಯಕ್ಷ ವೈ.ಶ್ರೀರಾಮುಲು, ಎಸ್.ಎಂ ಶ್ರೀನಿವಾಸ್, ಎಸ್.ವಿ ಶ್ರೀನಿವಾಸ್ ಬುಡಗಪ್ಪ, ಡಾ.ಎನ್ ಕಲಾವತಿ ಮೂರ್ತಿ ಕುಮಾರ್ ಮತ್ತಿತ್ತರರು ಹಾಜರಿದ್ದರು.

 

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?