ಲಕ್ಷ್ಮಿನಾರಾಯಣ ನಾಗವಾರ ಅಗಲಿಕೆಯ ನಂತರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಪುನರಚನೆ.
1 min read
ಲಕ್ಷ್ಮಿನಾರಾಯಣ ನಾಗವಾರ ಅಗಲಿಕೆಯ ನಂತರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಪುನರಚನೆ.
ಬೆಂ,ಅ,06: ಬೆಂಗಳೂರಿನ ಜೈ ಭೀಮ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವಿರೋಧವಾಗಿ ಸಮಿತಿಯನ್ನು ನೇಮಕ ಮಾಡಲಾಯಿತು ಎಂದು ನೂತನ ರಾಜ್ಯ ಸಂ ಸಂಚಾಕಕ ಆನೇಕಲ್ ವೆಂಕಟೇಶ್ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದರು.
ಭಾನುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಘಟನಾ ಸಂಚಾಲಕ ಶಾಮರಾವ ಘಾಟಗೆ ವಹಿಸಿದ್ದು ನೂತನ ರಾಜ್ಯ ಸಂಚಾಲಕರಾಗಿ ಆಯ್ಕೆಯಾದರು.
ರಾಜ್ಯ ಸಂಘಟನಾ ಸಂಚಾಲಕರಾಗಿ ಕೆಂಪಣ್ಣ ಸಾಗ್ಯ, ವೆಂಕಟೇಶ್ ಮೂರ್ತಿ. ಚಂದ್ರು ಚಕ್ರವರ್ತಿ, ಪ್ರಭುಲಿಂಗ ಮೇಗಳಮನಿ, ಖಜಾಂಚಿಯಾಗಿ ರಾಮಸ್ವಾಮಿ ಗುಟ್ಟೆ,
ಕಾರ್ಯಕಾರಿ ಕಾರ್ಯದರ್ಶಿ ಸಮಿತಿ ಸದಸ್ಯರಾಗಿ ವಿ ಬಸವರಾಜ, ವಿ ರಾಮಯ್ಯ,
ಮಹಿಳಾ ರಾಜ್ಯ ಸಂಚಾಲಕಿಯಾಗಿ ಶೋಭಾ ಕಟ್ಟೀಮನಿ, ಸಂಸಂಚಾಲಕರಾಗಿ ಗೌರಮ್ನ ಪಿ ದೊಡ್ಡಮನಿ, ವೈಕೆ ಬುಡ್ಡಮ್ಮ, ಪ್ರಮೀಳಾ, ಖಜಾಂಚಿಯಾಗಿ ಜಯಶ್ರೀ ಕಾಂಬಳೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೋಭಾ ಆಯ್ಕೆಯಾದರು.
ಉಳಿದಂತೆ ವಿಭಾಗೀಯ ಸಂಚಾಲಕರಾಗಿ ಆನಂದ ಬೆಳ್ಳಾರೆ ಆಯ್ಕೆಯಾದರೆ ಕೊಡಗಿನ ವೀರೇಂದ್ರ, ಮಂಡ್ಯ ರಮಾನಂದ, ಬೆಳಗಾವಿಯ ರಮೇಶ್ ಸಣ್ಣಹಕ್ಕಿ, ವಿಜಯಪುರದ ದೇವೇಂದ್ರ ಹಾದಿಮನಿ, ಬಾಗಲಕೋಟೆಯ ಹನುಮಂತ ಚಿನ್ನಲಗಿ ಹಾಗು ರಾಜ್ಯ ಕಲಾ ಮಂಡಳಿ ಸಂಚಾಲಕರಾಗಿ ರಾವುತ್ ತಳಕೆರೆ ಆಯ್ಕೆಯಾದರು ಎಂದು ರಾಜ್ಯ ಸಂಗಟನಾ ಸಂಚಾಲಕ ಕೆಂಪಣ್ಣ ಸಾಗ್ಯ ತಿಳಿಸಿದ್ದಾರೆ.
