ದಲಿತ ಹಕ್ಕುಗಳ ಸಮಿತಿಯಿಂದ ನವೆಂಬರ್ 17ರಂದು ಆನೇಕಲ್ ಪುರಸಭೆ ಮುಂದೆ ಪ್ರತಿಭಟನೆಗೆ ಕರೆ.
1 min read
ದಲಿತ ಹಕ್ಕುಗಳ ಸಮಿತಿಯಿಂದ ನವೆಂಬರ್ 17ರಂದು ಆನೇಕಲ್ ಪುರಸಭೆ ಮುಂದೆ ಪ್ರತಿಭಟನೆಗೆ ಕರೆ.
ಬೆಂ,ಆನೇಕಲ್,ಅ,06: ಆನೇಕಲ್ ಪುರಸಭೆ ವ್ಯಾಪ್ತಿಯ ದಲಿತ ನಾಗರೀಕರ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು ಈ ಕುರಿತಂತೆ ಪುರಸಭೆ ಅಧಿಕಾರಿ ಹಾಗು ಜನಪ್ರತಿನಿಧಿಗಳ ನಿರ್ಲಕ್ಷ್ಯ ಖಂಡಿಸಿ ನವೆಂಬರ್ ಪ್ರತಿಭಟನರ ನಡೆಸುವ ತೀರ್ಮಾನವನ್ನು ಆನೇಕಲ್ ದಲಿತ ಹಕ್ಕುಗಳ ಸಮಿತಿ ನಿರ್ಧರಿಸಿತು.
ಸೋಮವಾರ ಬೆಳಗ್ಗೆ ಆನೇಕಲ್ ಸಿಐಟಿಯು ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರತಿಭಟನೆ ಕುರಿತು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಬ್ಯಾಂಕ್ ಬೆಟ್ಟಪ್ಪ ವಹಿಸಿದ್ದು ಜಿಲ್ಲಾ ಕಾರ್ಯದರ್ಶಿ ಡಿ ಮಹದೇಶ್ ಹಾಗೂ ಜಿಲ್ಲಾಧ್ಯಕ್ಷ ಪಿ .ನಾಗರಾಜು ಇದ್ದರು.
ಸಭೆಯಲ್ಲಿ ಕಳೆದ ಒಂದು ವರ್ಷದಿಂದ ನಡೆದಂತಹ ದಲಿತರ ಸಮಸ್ಯೆಗಳ ಕುರಿತು, ಆನೇಕಲ್ ತಾಲೂಕು ಮಟ್ಟದ ಎಲ್ಲಾ ಗ್ರಾಮ ಸಭೆಗಳನ್ನ ನಡೆಸಲು ಹಾಗೂ ಆ ಸಭೆಯಲ್ಲಿ ಆ ಗ್ರಾಮದ ಸಮಸ್ಯೆಯನ್ನು ಗುರುತಿಸಿ ಅಕ್ಟೋಬರ್ 17ರಂದು ಆನೇಕಲ್ ಪುರಸಭೆಗೆ ಸ್ಥಳೀಯ ನಾಗರಿಕರು ಹಾಗೂ ದಲಿತರ ಸಮಸ್ಯೆಗಳನ್ನು ಪಟ್ಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಇದೇ ಸಂದರ್ಭದಲ್ಲಿ ನವೆಂಬರ್ 26ರಂದು ಸಂವಿಧಾನ ಸಮರ್ಪಣಾ ದಿನ ಆಚರಣೆಯನ್ನ ಗ್ರಾಮ ಘಟಕಗಳಲ್ಲಿ ಆಚರಿಸಲು ಕರೆ ನೀಡಲಾಗಿದೆ. ನಾಗರಿಕರ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡಿತಾ ಇದೆ ಈ ಸಮೀಕ್ಷೆಯಲ್ಲಿ ದಲಿತ ಹಕ್ಕುಗಳ ಕಾರ್ಯಕರ್ತರು ಸಮಗ್ರ ಮಾಹಿತಿಯನ್ನು ನೀಡಲು ತಿಳಿಸಲಾಯಿತು. ದಲಿತರ ಸ್ಥಿತಿಗತಿಯನ್ನ ವಿವರವಾಗಿ ತಿಳಿಸಲು ಸದಸ್ಯರಿಗೆ ಸೂಚಿಸಲಾಗಿದೆ ಹಾಗೂ ಡಿಸೆಂಬರ್ 6 ರಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸಲು ಕರೆ ನೀಡಲಾಗಿದೆ. ಸಮಿತಿಯ ಕನಿಷ್ಠ 10 ಘಟಕಗಳ ಪಟ್ಟಿ ಮಾಡಿ ಘಟಕ ರಚನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಭೆಯ ಅಧ್ಯಕ್ಷ ತಿಳಿಸಿದರು.
