ಸೆ15-17ರವರೆಗೆ ಕದಸಂಸ ಅಂಬೇಡ್ಕರ್ ವಾದದಿಂದ ಮೂರು ದಿನಗಳ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ.

1 min read
Share it

ಸೆ15-17ರವರೆಗೆ ಕದಸಂಸ ಅಂಬೇಡ್ಕರ್ ವಾದದಿಂದ ಮೂರು ದಿನಗಳ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ.
ಬೆಂ,ಆನೇಕಲ್.ಸೆ,12: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದಿಂದ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರವನ್ನು ಇದೇ 15,16 ಮತ್ತು 17ರಂದು ಬನ್ನೇರುಘಟ್ಟದ ರಂಗನಾಥ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರಕ್ಕೆ ಎಲ್ಲ ಸಂಘಟನೆಯ ಕಾರ್ಯಕರ್ತರು ಆಗಮಿಸಬೇಕೆಂದು ರಾಜ್ಯ ಸಮಿತಿ ಸದಸ್ಯ ಜಿಗಳ ಶ್ರೀರಾಮ್ ಕರೆ ನೀಡಿದ್ದಾರೆ.
ಬೆಂ ನಗರ ಸಂಚಾಲಕ ಬನ್ನೇರುಘಟ್ಟ ಟಿ ಸಂಪಂಗಿರಾಮ್ ಕಾರ್ಯಕ್ರಮದ ರೂಪರೇಷೆಗಳನ್ನ ಪರಿಚಯಿಸುತ್ತಾ. ಇಂದು ರಾಜ್ಯದಲ್ಲಿ ನಮ್ಮ ಸಂಘಟನೆ ಮಾದರಿಯಾಗಿದ್ದು ಈ ಸಂಘಟನೆಯ ಹಿಂದಿನಿಂದ ಬೆಳೆದು ಬಂದ ಹಾದಿ ಹಲವಾರು ಚಳವಳಿಗಾರರು ಸವೆಸಿದ ದಾರಿಯನ್ನ ನೆನೆಯುತ್ತಾ ಇಂದಿನ‌ ಸಮಕಾಲೀನ ಪರಿಸ್ಥಿತಿಯಲ್ಲಿ ಹೇಗೆ ಸಂಘಟನೆ ಎದುರಿಸಬೇಕೆಂಬ ವಿಚಾರಗಳ ಕುರಿತು ಚರ್ಚಿಸಿ ಶಿಬಿರದಲ್ಲಿ ಸಂಘಟಕರು ಇನ್ನಷ್ಟು ಗಟ್ಟಿಗೊಳ್ಳುತ್ತಾ ದಿಟ್ಟ ಹೆಜ್ಜೆಗಳನ್ನ ಇಡುವ ಅನಿವಾರ್ಯತೆಗೆ ಒಗ್ಗಿಕೊಳ್ಳಲು ಅಷ್ಟಲ್ಲದೆ ಹಿರಿಯ ಮಾರ್ಗದರ್ಶಕರ ಹಾದಿಯಲ್ಲಿ ಸಮಾಜದ ಅಂಕು ಡೊಂಕುಗಳನ್ನ ಜ್ವಲಂತ ಸಮಸ್ಯೆಗಳನ್ನ ಎದುರಿಸಲು ಈ ಶಿಬಿರ ಸಹಕಾರಿ ಎಂದರು. ಮೊದಲ ದಿನ ಧಮ್ಮ ದ್ವಜಾರೋಹಣವನ್ನು ಪೂಜ್ಯ ಸಂಘರಖ್ಕಿತ ಬಂತೇಜಿ.
ಸಂಘದ ದ್ವಜಾರೋಹಣ ರಾಜ್ಯ ಖಂಜಾಂಚಿ ಸಿದ್ದಪ್ಪ ಕಾಂಭಳೆ ನೆರವೇರಿಸಲಿದ್ದಾರೆ ಎಂದರು.
ಬೆಂ ನಗರ ಜಿಲ್ಲಾ ಸಂ ಸಂಚಾಲಕ ಮಾರಗೊಂಡಹಳ್ಳಿ ದಶರಥ್ ಮಾತನಾಡಿ ದಲಿತ ಚಳವಳಿಗೆ ದೇವನೂರು ಮಹದೇವ – ಡಾ ಸಿದ್ದಲಿಂಗಯ್ಯರಂತಹ ಚಂದ್ರಪ್ರಸಾದ್ ಅನೇಕ ಲೇಖಕ ಕಲಾವಿದರು ತಮ್ಮ ಅನುಭವವನ್ನ ಧಾರೆ ಎರೆದಿದ್ದಾರೆ. ಅಲ್ಲದೆ ವಿಚಾರವಾದಿಗಳು ಹಿರಿಯಯ ವಿಚಾರಗಳ ತಳಸ್ಪರ್ಶಿ ಅಧ್ಯಯನದ ಮಾದರಿಗಳನ್ನ ಮೆಲುಕು ಹಾಕುತ್ತಾ ಹೋರಾಟದ ಹಾಡುಗಳು ಹುಟ್ಟಿದ ತಳ ಸಮುದಾಯಗಳ ಇಂಗಿತಕ್ಕೆ ನೀರೆರೆದ ಜನ ಚಳುವಳಿಯಾಗಿ ರೂಪುಗೊಳ್ಳುವ ಹಂತಗಳನ್ನ ಮರಳಿ‌ ನೆನೆದು ಮುಂದಡಿ ಇಡುವ ಕ್ರಮಗಳನ್ನ ಅರಿಯುವುದಾಗಿದೆ ಎಂದರು.
ಎಂಟು ಘೋಷ್ಟಿಗಳನ್ನ ಶ್ರೀಮತಿ ಇಂದಿರಾ ಪ್ರೊ ಬಿ ಕೃಷ್ಣಪ್ಪ ಉದ್ಘಾಟಿಸಲಿದ್ದು, ಜನ ಚಳವಳಿ ಹಾಡುಗಾರರಾದ ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ್, ಹಿರಿಯ ಬುದ್ದಿ ಜೀವಿಗಳಿಂದ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಜನಜಾಗೃತಿ ಹಾಡುಗಳ ಮೇಳ ಶಿಬಿರವನ್ನ ಇನ್ನಷ್ಟು ಉತ್ತುಂಗಕ್ಕೆ ಏರಿಸಲಿದೆ ಎಂದರು.
ಬೆಂ ನಗರ ಜಿಲ್ಲಾ ಸಂ ಸಂಚಾಲಕ ಕೋಣನಕುಂಟೆ ಮಂಜುನಾಥ್: ಸೋಮವಾರ, ಮಂಗಳವಾರ ಮತ್ತು ಬುಧವಾರದಂದು ರಾಜ್ಯದ ಎಲ್ಲಾ ವಿಭಾಗಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ರಾಜ್ಯದ ಇತಿಹಾಸದ ಬದ್ರಾವತಿ ಭಾಗದಲ್ಲಿ 70ರ ದಶಕದಲ್ಲಿ ಶೋಷಣೆಗಳನ್ನ ಮೆಟ್ಟಿನಿಲ್ಲುವ ಅಡಿಪಾಯವನ್ನ ಹಾಕಿಕೊಟ್ಟರು. ಇದೇ ಚಳವಳಿ ರಾಜ್ಯ ದೇಶಗಳೆಡೆ ಸಮಾಜದ ದನಿಯಾಗಿ ಮುಂದುವರಿಯುವಲ್ಲಿ ಈಗ ಮಾವಳ್ಳಿ ಶಂಕರ್ ನೇತೃತ್ವದಲ್ಲಿ ಚಳವಳಿ ಆಗಿಂದಾಗ್ಗೆ ಎದುರುಗೊಳ್ಳುವ ಸಮಸ್ಯೆಗಳಿಗೆ ಮುಖಾಮುಖಿಯಾಗಿದ್ದಾರೆ ಎಂದರು ಮುಂದುವರೆದು
ಆರ್ಎಸ್ಎಸ್ ನೂರು ವರ್ಷ ಪೂರೈಸಿದ್ದು ಅದರ ಕೋಮುವಾದಿ ಸಿದ್ದಾಂತಗಳ ಮಾನವೀಯತೆಯ ಕಡು ವಿರೋಧಿ ನಿಲುವುಗಳ  ಡಿಎಸ್ಎಸ್ ಐದು ದಶಕ ಪೂರೈಸಿದರೂ ದಸಂಸ ಜನಪರವಾದ ನಿಲುವುಗಳನ್ನ ಸಂವಿಧಾನದಡಿ ಮುಂದುವರೆದಿದೆ. ಇದು ನಮ್ಮ ಹೆಮ್ಮೆ ಎಂದರು.
ಸ್ವಾಗತ ಕೋರಿದ ತಾ ಸಂ ಸಂಚಾಲಕ ಬನ್ನೇರುಘಟ್ಟ ತಂಗರಾಜು, ಜಿಲ್ಲಾ ಸಮಿತಿ ಸದಸ್ಯರಾದ ಕೆಂಗೇರಿ ಡಿ ಬಾಲಯ್ಯ. ಬೊಮ್ಮನಹಳ್ಳಿ ಅಯ್ಯಪ್ಪ, ಸಂ ಸಂಚಾಲಕ ವಸೀಂ ಖಾನ್. ತಾ ಸಂ ಸಂ ನಾಗರಾಜು ಭಾಗವಹಿಸಿದ್ದರು.

Loading

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?