ಪ್ರಶಸ್ತಿಗಳಿಗೆ ಭಾಜನರಾದ ಪೊಲೀಸ್ ಹೆಚ್‌ಸಿ ಶಂಕರ್ ವೈ ಸಮುದಾಯದ ಮಾದರಿ ಅಧಿಕಾರಿಯಾಗಲಿ, -ಪ್ರಜ್ವಲ್ ಜಿಗಣಿ ಶಂಕರ್. ರಿಪಬ್ಲಿಕನ್‌ಸೇನೆ ರಾಜ್ಯಾಧ್ಯಕ್ಷ.
1 min read
ಪ್ರಶಸ್ತಿಗಳಿಗೆ ಭಾಜನರಾದ ಪೊಲೀಸ್ ಹೆಚ್‌ಸಿ ಶಂಕರ್ ವೈ ಸಮುದಾಯದ ಮಾದರಿ ಅಧಿಕಾರಿಯಾಗಲಿ, -ಪ್ರಜ್ವಲ್ ಜಿಗಣಿ ಶಂಕರ್. ರಿಪಬ್ಲಿಕನ್‌ಸೇನೆ ರಾಜ್ಯಾಧ್ಯಕ್ಷ.
ಬೆಂ,ಆನೇಕಲ್,ಆ,೧೬: ಪೊಲೀಸ್ ಇಲಾಖೆಯ ಆಂತರೀಕ ಭದ್ರತೆಯ ಮುಖ್ಯ ಪೇದೆ ಆನೇಕಲ್ ನರಸಾಪುರದ ವೈ ಶಂಕರ್ ಭಾಜನರಾಗಿದ್ದು ಸತತ ನಾಲ್ಕು ವರ್ಷಗಳಿಂದ ಅನೇಕ ಪ್ರಶಸ್ತಿಗಳನ್ನು ಪಡೆದು ಮಾದರಿಯಾಗಿ ನಿಂತಿದ್ದಾರೆ, ಇಂತಹ ಪ್ರಾಮಾಣಿಕ ಅಧಿಕಾರಿಗಳು ದಲಿತ ಸಮುದಾಯದ ಆದರ್ಶ ಯುವಕರಿಗೆ ಮಾರ್ಗದರ್ಶಿಗಳಾಗಬೇಕೆಂದು ಕರ್ನಾಟಕ ರಿಪಬ್ಲಿಕನ್ ಪಕ್ಷದ ರಾಜ್ಯಾಧ್ಯಕ್ಷ ಜಿಗಣಿ ಪ್ರಜ್ವಲ್ ಶಂಕರ್ ಕರೆ ನೀಡಿದರು. ಅವರು ಜಿಗಣಿ ಹೊರ ವರ್ತುಲ ರಸ್ತೆಯ ತಮ್ಮ ನಿವಾಸದಲ್ಲಿ ವೈ ಶಂಕರ್ ಗೆ ಸ್ನೇಹಿತರ ಬಳಗದಿಂದ ಸನ್ಮಾನಿಸಿ ಅಭಿನಂದನಾ ಭಾಷಣ ಮಾಡುವ ಸಂದರ್ಭದಲ್ಲಿ ಮಾತನಾಡಿದರು.
ವೈ ಶಂಕರ್ ಮಾತನಾಡಿ ನನ್ನ ಅಲ್ಪ ಸಾಧನೆಯನ್ನು ಪೊಲೀಸ್ ಇಲಾಖೆ ಗುರ್ತಿಸಿ ಹಲವು ಪ್ರಶಸ್ತಿ ನೀಡಿದೆ ಅಲ್ಲದೆ ರಾಷ್ಟ್ರ ಹಾಗು ರಾಜ್ಯ ಸರ್ಕಾರಗಳು ನನಗೆ ಪ್ರಶಸ್ತಿ ನೀಡುವ ಮುಖಾಂತರ ಇನ್ನಷ್ಟು ಜವಾಬ್ದಾರಿಗಳನ್ನು ನೀಡಿದೆ. ಇವಕ್ಕೆಲ್ಲ ಕಾರಣ ಡಾ ಅಂಬೇಡ್ಕರ್ ಅವರ ಆದರ್ಶವೇ ಕಾರಣ, ಅವರಿಂದಲೇ ಇವೆಲ್ಲಾ ಸಾಧ್ಯ ಇಲ್ಲವಾದಲ್ಲಿ ನಮ್ಮ ದಲಿತ ಸಮುದಾಯ ಇನ್ನಷ್ಟು ಬಾಧಿತ ಮಟ್ಟಕ್ಕೆ ಶೋಷಣೆಗೆ ಒಳಗಾಗುತ್ತಿತ್ತು. ಅವರನ್ನು ಓದಿಕೊಂಡರೆ ಜೀವನದ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಿದೆ ಇದಕ್ಕೆ ನಾನೇ ಉದಾಹರಣೆ ಇಂದಿನ ಶೋಷಿತ ಸಮುದಾಯದ ಯುವಕರು ಮಾದಕ ವ್ಯಸನಿಗಳಾಗಿ ಅಪರಾದ ಕೃತ್ಯಗಳಲ್ಲಿ ತೊಡಗುತ್ತಿರುವುದು ದುರಂತವೆನಿಸಿದೆ. ಅವರು ಮೊದಲು ಶಿಕ್ಷಣ ಪಡೆದು ಸಮಾಜದ ಮುಂಚೂಣಿಗೆ ಬರಬೇಕು ಇದೇ ಅಂಬೇಡ್ಕರ್ ಅವರ ಆಶಯ ಎಂದರು.
ಹೆನ್ನಾಗರ ಗ್ರಾ ಪಂ ಸದಸ್ಯ ಕುಮಾರ್ ಮಾತನಾಡಿ ಪೊಲೀಸ್ ಇಲಾಖೆಯಲ್ಕಿ ನಿಷ್ಟಾವಂತರಾಗಿರುವುದು ಸುಲಭದ ಮಾತಲ್ಲ, ಅದರಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾಗುವುದು ಕಷ್ಟಸಾಧ್ಯ. ಹುಟ್ಟಿನಿಂದಲೇ ನರಸಾಪುರದಿಂದ ಸರ್ಕಾರಿ ಶಾಲೆ ಹಾಸ್ಟಲ್ ಗಳಲ್ಲಿಯೇ ಓದಿ ಮುಖ್ಯವ ಪೇದೆವರೆಗೆ ಸೇವೆ ಸಲ್ಲಿಸಿ ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ ವೈ ಶಂಕರ್ ಸಮುದಾಯದ ಆದರ್ಶ ವ್ಯಕ್ತಿತ್ವ ಎಂದರು.
ಉಳಿದಂತೆ ಅಶ್ವಥ್, ತಾ ಅಧ್ಯಕ್ಷ ಮೇಡಹಳ್ಳಿ ಮುರಳಿ, ಪ್ರದೀಪ್, ಮಾರುತಿನಗರ ರಾಮು, ಹೆನ್ನಾಗರ ನವೀನ್, ಬಸವರಾಜ್, ವೆಂಕಟೇಶ್, ರಾಜಣ್ಣ ಮೌರ್ಯ,ರಮೇಶ್ ಮುಂತಾದವರು ಮಾತನಾಡಿ ಅಭಿನಂದನೆ ಸಲ್ಲಿಸಿದರು.
