ಸರ್ಕಾರಿ ಶಾಲಾ ಮಕ್ಕಳಿಗೆ ಗುರುತಿನ ಚೀಟಿ,ಟೈ, ಬೆಲ್ಟ್ ಮತ್ತು ನೋಟ್ ಪುಸ್ತಕ ವಿತರಿಸಿದ ನೆರಿಗಾ ಎನ್ ಮೂರ್ತಿ.
1 min read
ಸರ್ಕಾರಿ ಶಾಲಾ ಮಕ್ಕಳಿಗೆ ಗುರುತಿನ ಚೀಟಿ,ಟೈ, ಬೆಲ್ಟ್ ಮತ್ತು ನೋಟ್ ಪುಸ್ತಕ ವಿತರಿಸಿದ ನೆರಿಗಾ ಎನ್ ಮೂರ್ತಿ.
ಬೆಂ,ಆನೆಕಲ್ಲು,ಆ,11: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲಾ ಮಕ್ಕಳಿಗೆ ಬೆಲ್ಟ್, ಟೈ, ಗುರುತಿನ ಚೀಟಿ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನೆರೆಗಾ ಗ್ರಾಮ ಪಂಚಾಯತಿಯ ಸಮಾಜ ಸೇವಕ ಎನ್.ಮೂರ್ತಿ ಮಾತನಾಡಿ ‘ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈ ಜೋಡಿಸುವ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಆಕರ್ಷಿಸುವಂತೆ ಮಾಡಬೇಕು. ಸರ್ಕಾರಿ ಶಾಲೆಗಳು ನಮ್ಮೆಲ್ಲರ ಅಸ್ಮಿತೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಮುಂದಿನ ದಿನಗಳಲ್ಲಿ ನಾವೆಲ್ಲ ಸ್ನೇಹಿತರು ಸೇರಿ ಇನ್ನಷ್ಟು ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳಿಗೆ ಅನುಕೂಲವಾಗುವ ಪರಿಕರಗಳನ್ನು ವಿತರಿಸಲಾಗುವುದು’ ಎಂದರು.
ವಕೀಲ ಮುತ್ತಾನಲ್ಲೂರು ಶ್ರೀನಿವಾಸ್ ಸರ್ಜಾ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬ್ಯಾಡ್ಜ್, ಬೆಲ್ಟ್, ನೋಟ್ ಪುಸ್ತಕಗಳನ್ನು ವಿತರಿಸಿರುವುದು ಶ್ಲಾಘನೀಯ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಗಳಿಗೆ ಜೊತೆಗೂಡಿ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಈ ವೇಳೆ ನೆರೆಗಾ ಗ್ರಾಮ ಸಮಾಜ ಸೇವಕ ಮಂಜು, ವಕೀಲರಾದ ಮುತ್ತಾನಲ್ಲೂರು ಮಹೇಶ್, ನಿರ್ಮಲಾ, ಅನುರಾಧಾ, ಪುರುಷೋತ್ತಮ್, ಸ್ನೇಹಾ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಗೀತಾ, ಅಮೃತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
