ಕನ್ನಡದ ಮೇರು ನಟನ ಸ್ಮಾರಕ ದ್ವಂಸ ಖಂಡನೀಯ ಕಂಠೀರವ ಸ್ಟುಡಿಯೋದಲ್ಲಿ ಜಾಗ ಮೀಸಲಿಡಿ. -ಕಜಾವೇ ರಾಜ್ಯಾದ್ಯಕ್ಷ ಕೆ ಮಂಜುನಾಥ ದೇವ ಆಗ್ರಹ.
1 min read
ಕನ್ನಡದ ಮೇರು ನಟನ ಸ್ಮಾರಕ ದ್ವಂಸ ಖಂಡನೀಯ ಕಂಠೀರವ ಸ್ಟುಡಿಯೋದಲ್ಲಿ ಜಾಗ ಮೀಸಲಿಡಿ. -ಕಜಾವೇ ರಾಜ್ಯಾದ್ಯಕ್ಷ ಕೆ ಮಂಜುನಾಥ ದೇವ ಆಗ್ರಹ.
ಆನೇಕಲ್. ಆ.09: ಯಾವುದೇ ತಕರಾರಿಲ್ಲದ ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಮಾಡಲು ಜಾಗ ನೀಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಸಂಘಟನೆಯ ರಾಜ್ಯಾದ್ಯಕ್ಷ ಕೆ ಮಂಜುನಾಥ್ ದೇವ ಆಕ್ರೋಶ ಹೊರಹಾಕಿದರು.
ಅವರು ಶನಿವಾರ ತಾಲ್ಲೂಕಿನ ಅತ್ತಿಬೆಲೆಯಲ್ಲಿ ವಿಷ್ಣು ಸ್ಮಾರಕ ಧ್ವಂಸ ಮಾಡಿರುವುದನ್ನು ಖಂಡಿಸಿ ಕನ್ನಡ ಜಾಗೃತಿ ವೇದಿಕೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಸಭೆ ಬಳಿಕ ಪ್ರತಿಕಾಘೋಷ್ಟಿಯಲ್ಲಿ ಮಾತನಾಡಿದರು.
ಸ್ಮಾರಕ ದ್ವಂಸ ಮಾಡಿರುವ ಕಿಡಿಗೇಡಿಗಳ ಬಂಧನ ಆಗಬೇಕು. ಕನ್ನಡ ಸಿನಿಮಾ ರಂಗಕ್ಕೆ ವಿಷ್ಣುವರ್ಧನ್ ಅವರ ಕೊಡುಗೆ ಅಪಾರ, ಡಾಕ್ಟರ್ ರಾಜಕುಮಾರ್ ಪುನೀತ್ ರಾಜಕುಮಾರ್ ಹಾಗೂ ಅಂಬರೀಶ್ ಅವರಿಗೆ ನಾವು ಗೌರವ ನೀಡಿದ್ದೇವೆ ಇದಕ್ಕೆ ನಮ್ಮ ತಕರಾರು ಇಲ್ಲ ಅವರಂತೆಯೇ ವಿಷ್ಣುವರ್ಧನ್ ಅವರಿಗೂ ನ್ಯಾಯ ಸಿಗಬೇಕು ಎಂದರು.
ಸರ್ಕಾರ ಕಿಡಿಗೇಡಿಗಳು ಧ್ವಂಸ ಮಾಡಿರುವ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಿ, ಈ ಜಮೀನನ್ನು ಸರ್ಕಾರ ಭೋಗ್ಯಕ್ಕೆ ನೀಡಿದ್ದು ಸದ್ಯ ಬಾಲಣ್ಣರ ಮಕ್ಕಳು ಜಮೀನು ನಮ್ಮದು ಎಂದು ಕೋರ್ಟಿನಲ್ಲಿ ದಾವೆ ಹೂಡಿ ಸ್ಮಾರಕ ತೆರವು ಮಾಡಿದ್ದಾರೆ. ಇದು ಇಡೀ ಕನ್ನಡ ನಾಡಿಗೆ ಮಾಡಿರುವ ಅಪಮಾನವಾಗಿದೆ ಎಂದರು.
ಸ್ಮಾರಕ ದ್ವಂಶ ಮಾಡಿದ ಮೇಲೆ ಅಲ್ಲಿ ವಿಷ್ಣುಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸೇರಿ ಹಲವರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ ಈ ಸಂದರ್ಭದಲ್ಲಿ ಹಲವರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.
ಅಭಿಮಾನಿ ಸ್ಟುಡಿಯೋ ಸುತ್ತಮುತ್ತಲಿನ ಭೂಮಿಗೆ ಚಿನ್ನದಂತಹ ಬೆಲೆ ಇದ್ದು ಇದರಲ್ಲಿ ರಾಜಕೀಯ ಹುನ್ನಾರ ಅಡಗಿದೆ. ಮೈಸೂರಿನಲ್ಲಿ ಸ್ಮಾರಕ ಆದ ನಂತರ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಜಾಗ ಕೊಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. 2007ರಲ್ಲಿ ಕಾವೇರಿ ಹೋರಾಟಕ್ಕೆ ಸಿನಿಮಾ ರಂಗವನ್ನು ಒಗ್ಗೂಡಿಸಿ ಹೋರಾಟ ಮಾಡಿದ್ದ ನಾಯಕ ನಟನಿಗೆ ನ್ಯಾಯ ಒದಗಿಸುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಸರ್ಕಾರ ಹಾಗೂ ಇಲಾಖೆಗಳು ವಿಷ್ಣುವರ್ಧನ್ ಅವರಿಗೆ ನ್ಯಾಯಪೂರಕವಾಗಿ ಏನನ್ನು ನೀಡಿಲ್ಲ ಎಲ್ಲವನ್ನು ಅವರ ಅಭಿಮಾನಿಗಳು ಹೋರಾಟ ಮಾಡಿ ಪಡೆದುಕೊಂಡಿದ್ದಾರೆ. ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರು ವಿಷ್ಣುವರ್ಧನ್ ಸ್ಮಾರಕ ಮಾಡಲು ಸಹಕಾರ ನೀಡುವುದಾಗಿ ಕೂಡ ಹೇಳಿದ್ದರು ಮುಂದಿನ ಹೋರಾಟ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.
ಕ.ಜಾ.ವೇ ಯುವ ಘಟಕ ಉಪಾಧ್ಯಕ್ಷ ಜಾವೇದ್ ಮಾತನಾಡಿ, ಕನ್ನಡ ನಾಡಿನಲ್ಲಿ ಜನಿಸಿ ಇಲ್ಲಿನ ಸಿನಿಮಾಗಳ ಮೂಲಕ ನಾಡು-ನುಡಿಗೆ ಸೇವೆ ಸಲ್ಲಿಸಿದ ವಿಷ್ಣುವರ್ಧನ್ ಅವರಿಗೆ ನ್ಯಾಯ ಕೊಡಿಸಬೇಕಾದ ಜವಾಬ್ದಾರಿ ಸರ್ಕಾರಗಳದ್ದಾಗಿದ್ದರೂ ಈವರೆಗೂ ಯಾವುದೇ ಸರ್ಕಾರವು ಮಾಡದೆ ಇರುವುದು ಬೇಸರದ ಸಂಗತಿ ಎಂದು ಹೇಳಿದರು.
ಕರ್ನಾಟಕ ದೃವ ಸರ್ಜಾ ಅಭಿಮಾನಿಗಳ ಸಂಘದಿಂದ ತೀರ್ವ ಖಂಡನೆ, -ರಾಜ್ಯಾಧ್ಯಕ್ಷ ಮಹಾನ್.
ಡಾ ವಿಷ್ಣುವರ್ದನ್ ಸಮಾಧಿ ತೆರವು ಕನ್ನಡ ಮೇರು ನಟನಿಗೆ ಹಾಗು ಕನ್ನಡ ಚಿತ್ರ ರಂಗಕ್ಕೆಒಂದು ಕರಾಳ ದಿನವಾಗಿದೆ, ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗೆ ಕೈ ಎತ್ತಿದ ಹಿರಿಯ ನಟನಿಗೆ ಇಡೀ ವ್ಯವಸ್ಥೆ ಮಾಡಿದ ದ್ರೋಹ ಇದಾಗಿದೆ. ವೀರಕ ಪುತ್ರ ಶ್ರೀನಿವಾಸ್ ರ ಪರ ಬೆನ್ನ ಹಿಂದೆ ನಾವು ಸದಾ ನಿಲ್ಲುತ್ತೇವೆ.
ಅಭಿಮಾನಿಗಳು ಕೇವಲ ಪೋಸ್ಟರ್ ಹಾಕುವುದರ ಮುಖಾಂತರ ಬೆಂಬಲ ಬೇಡ, ನೇರವಾಗಿ ದಿಟ್ಟ ಹೋರಾಟಕ್ಕೆ ಮುಂದಾಗುವ ಅಗತ್ಯವಿದೆ. ನಮ್ಮ ಕಣ್ಣ ಮುಂದೆಯೇ ಮೇರು ನಟನಿಗೆ ಈ ರೀತಿ ಅವಮಾನವಾದರೆ ಮುಂಬರುವ ಕನ್ನಡ ನಟರ ಪಾಡೇನು…ಚಿತ್ರಗಳಲ್ಲಿ ನ್ಯಾಯ ಕೊಡಿಸುವ ಪಾತ್ರ ಮಾಡುವ ಮೂಲಕ ಸಿಳ್ಳೆ ಅಭಿಮಾನ ಗಿಟ್ಟಿಸುವ ನಾಯಕನ ಸಮಾಧಿಗೆ ಹೋರಾಡುವವರ್ಯಾರು? ನಾವೆಲ್ಲ ಇದ್ದೀವೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಕಲಾವಿದರು ಎಲ್ಲರೂ ಒಂದಾಗಿ ಮುಂದೆ ಬಂದು ಹೋರಾಟ ಮಾಡಬೇಕು, ವಿಷ್ಣುವರ್ದನ್ ಅವರು ಕರ್ನಾಟಕ ರಾಜ್ಯದಲ್ಲಿ ಜನಿಸಿದ್ದೇ ತಪ್ಪಾ ಎನ್ನುವ ಪ್ರಶ್ನೆ ಮೂಡುವ ಪರಿಸ್ಥಿತಿ ಬಂದಿದೆ,ಅವರು ಮಾಡಿರುವ ಸಿನೆಮಾ ಬೇರೆ ರಾಜ್ಯದ ನಟರು ಮಾಡಿದ್ದರೆ ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದರು.ಈಗಲೂ ಕಾಲ ಮಿಂಚಿಲ್ಲ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ
ರಾಜ್ಯ ಮುಖಂಡ ಆರ್.ಎನ್.ಎಸ್ ರವಿ,ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾಸ್,ಯುವ ಘಟಕ ಜಿಲ್ಲಾಧ್ಯಕ್ಷ ಆರ್.ಮಧುಕುಮಾರ್,ಮುಖಂಡರಾದ ಸೆಂಟ್ರಿಂಗ್ ಮಂಜುನಾಥ್, ನಟರಾಜ್,ಶರಣು, ಎಚ್.ಎಲ್. ಟಿ ಮಂಜುನಾಥ್,ಹಳೇಹಳ್ಳಿ ಹರೀಶ್ ಮತ್ತಿತರರು ಇದ್ದರು.
