ಚಲನೆ ಕಳೆದುಕೊಂಡ ಸಮಾಜದ ದಿಕ್ಕನ್ನು ಸಮಾಜಮುಖಿಯತ್ತ ಹೊರಳಿಸಿದ‌ ಕಾಯಕ ತತ್ವಕ್ಕೆ ಮುಂಚೂಣಿಯಾಗಿದ್ದ ಶರಣ ನುಲಿಯ ಚಂದಯ್ಯ ಇಂದಿನ‌ ಆದರ್ಶ, – ಅಧ್ಯಕ್ಷ ಸೋಮಣ್ಣ ಅಭಿಮತ.

1 min read
Share it

ಚಲನೆ ಕಳೆದುಕೊಂಡ ಸಮಾಜದ ದಿಕ್ಕನ್ನು ಸಮಾಜಮುಖಿಯತ್ತ ಹೊರಳಿಸಿದ‌ ಕಾಯಕ ತತ್ವಕ್ಕೆ ಮುಂಚೂಣಿಯಾಗಿದ್ದ ಶರಣ ನುಲಿಯ ಚಂದಯ್ಯ ಇಂದಿನ‌ ಆದರ್ಶ, – ಅಧ್ಯಕ್ಷ ಸೋಮಣ್ಣ ಅಭಿಮತ.

ಆನೇಕಲ್: ಅಂದಿನ ಜಡ್ಡುಗಟ್ಟಿದ ಚಲನೆ ಕಳೆದುಕೊಂಡ ಸಮಾಜಕ್ಕೆ ಕಾಯಕ ಪ್ರೇರಿತ ಚಲನೆ ಸಿಕ್ಕಿದ್ದು ಬಸವಣ್ಣನವರ ಶರಣ ಪರಂಪರೆಯಾಗಿತ್ತು. ಅದಕ್ಕೆ ಜತೆಯಾಗಿದ್ದು ಕೊರಮ ಸಮುದಾಯದ ಮೇರು ವ್ಯಕ್ತಿತ್ವ
ಕಾಯಕ ಯೋಗಿ ಶರಣ ನುಲಿಯ ಚಂದಯ್ಯ ಹೀಗಾಗಿ ಇಂದಿಗೂ ಅವರ ಚಿಂತನೆಗಳು ಸಮಾಜಕ್ಕೆ ಪ್ರೇರಣೆಯಾಗಿದ್ದು, ಇವೇ ಇಂದಿನ‌ ಮಾದರಿಗಳಾಗಿವೆ ಎಂದು ಅಖಿಲ ಕರ್ನಾಟಕ ಕೊರಮ‌ರ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಣ್ಣ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಅವರ 918 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಯಕ ಶ್ರೇಷ್ಟತೆಯನ್ನು ಜಗತ್ತಿಗೆ ಸಾರಿದ ನುಲಿಯ ಚಂದಯ್ಯ ಚಿಂತನೆ ನಮ್ಮ ದಿನನಿತ್ಯದ ಬದುಕಿನಲ್ಲಿ ಅನುಷ್ಟಾನಕ್ಕೆ ಬರಲಿ ಎಂದು ತಿಳಿಸಿದರು.

ಕೊರಮ ಸಮುದಾಯದ ಮುಖಂಡ ಗೋವಿಂದರಾಜು ಮಾತನಾಡಿ, ಶರಣ ನುಲಿಯ ಚಂದಯ್ಯ ಅವರು ಕೊರಮ ಸಮುದಾಯದಲ್ಲಿ ಜನಿಸಿದ್ದಾರೆಂಬುದು ಹೆಮ್ಮೆಯ ಸಂಗತಿಯಾಗಿದೆ. ಅವರ ಚಿಂತನೆಯ ದಾರಿಯಲ್ಲಿ ಕೊರಮ ಸಮುದಾಯ ಸಾಗಲಿ ಎಂದು ತಿಳಿಸಿದರು. ಅಲ್ಲದೆ ಮುಂದೆ ಅಧಿಕೃತವಾಗಿ ಕೊರಚ-ಕೊರಮ ಜಾತಿ ಗಣತಿ ಕುರಿತು ಈಗಾಗಲೇ‌ ಅಂಕರ‌ಸಂಖ್ಯೆಗಳ ದತ್ತಾಂಶವನ್ನು ನಮ್ಮ ಸಮಾಜ ಸಂಗ್ರಹಿಸಿದೆ. ಜಸ್ಟೀಸ್ ನಾಗಮೋಹನ ದಾಸ್ ಅವರ ವರದಿಯ ಸಂಖ್ಯಾಬಲ ನಮ್ಮ ಅನಿಸಿಕೆಯಂತೆ ಬರಲಿದೆ ಎಂಬ ಭರವಸೆ ಇದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಲೋಕೇಶ್, ಮಂಜು, ರವಿ ಹಾಗು
ಅಖಿಲ ಕರ್ನಾಟಕ‌ ಕೊರಮರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಜಿ ಎಸ್, ಖಜಾಂಜಿ ಕಂದುಕುಮಾರ್, ನಿರ್ದೇಶಕರಾದ ದೇವರಾಜು, ರಾಜಪ್ಪ, ಕಾನೂನು ಸಲಹೆಗಾರ ಗೋಪಾಲಕೃಷ್ಣ ಗೌರವಾಧ್ಯಕ್ಷ ಮಂಜಣ್ಣ, ಮಂಜುನಾಥ್ ದಾಸನಪುರ, ಉಪಸ್ಥಿತರಿದ್ದರು.

Loading

2 thoughts on “ಚಲನೆ ಕಳೆದುಕೊಂಡ ಸಮಾಜದ ದಿಕ್ಕನ್ನು ಸಮಾಜಮುಖಿಯತ್ತ ಹೊರಳಿಸಿದ‌ ಕಾಯಕ ತತ್ವಕ್ಕೆ ಮುಂಚೂಣಿಯಾಗಿದ್ದ ಶರಣ ನುಲಿಯ ಚಂದಯ್ಯ ಇಂದಿನ‌ ಆದರ್ಶ, – ಅಧ್ಯಕ್ಷ ಸೋಮಣ್ಣ ಅಭಿಮತ.

Leave a Reply

Your email address will not be published. Required fields are marked *

error: Content is protected !!
Open chat
Hello
Can we help you?