ಚುರುಕುಗೊಂಡ ಆನೇಕಲ್ ವಕೀಲರ ಸಂಘದ ಮತದಾನ
1 min read
ಚುರುಕುಗೊಂಡ ಆನೇಕಲ್ ವಕೀಲರ ಸಂಘದ ಮತದಾನ
ಆನೇಕಲ್ ವಕೀಲರ ಸಂಘದ ಚುನಾವಣಾ ಕಣ ರಂಗೇರಿದೆ, ಒಟ್ಟು 691 ವಕೀಲರ ಸಂಖ್ಯಾಬಲ ಹೊಂದಿರುವ ವಕೀಲರು ತಲಾ ಹದಿನೆಂಟು ಮತಗಳನ್ನು ಚಲಾಯಿಸಬೇಕಿದೆ.
ಸ್ಪರ್ದಿಸಿರುವ ಎರೆಡು ಸಿಂಡಿಕೇಟ್ ತಮ್ಮ ಬಲಾಬಲ ಒಲವಿರುವ ವಕೀಲರ ಮತಗಳನ್ನ ಸೆಳೆಯುವಲ್ಲಿ ಇನ್ನಿಲ್ಲದ
ಕಸರತ್ತು ನಡೆಸುವ ಮೂಲಕ ಇಂದು ನ್ಯಾಯಾಲಯದಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಪಟಾಪಟ್ ವೈ ಪ್ರಕಾಶ್ ಸಿಂಡಿಕೇಟ್ ಮತ್ತು ಎಮ್ ಆರ್ ವೇಣುಗೋಪಾಲ್ ನೇರಾನೇರ ಅದ್ಯಕ್ಷಗಾದಿಗೆ ಪೈಪೋಟಿ ಇದೆ.
ಉಳಿದ ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ಯಾರೇ ಗೆದ್ದರೂ ಸೋತರು ಅದು ಗಣನೀಯ ಗಮನವೇನೂ ಅಲ್ಲದಿದ್ದರೂ ಸಿಂಡಿಕೇಟ್ ಅದ್ಯಕ್ಷರ ಆಯ್ಕೆಯೇ ಬಹುಮುಖ್ಯವಾಗಿ, ಇದು ವಕೀಲರ ಪ್ರತಿಷ್ಟೆಯಾಗಿ ಮಾರ್ಪಟ್ಟಿದೆ.
ಇರುವ ಎರೆಡು ಎರೆಡು ಮತಗಟ್ಟೆಗಳಲ್ಲಿ ಮದ್ಯಾಹ್ನದ ವರೆಗೆ ಶೇಕಡ 50ರಷ್ಟು ಮತದಾನ ದಾಖಲಾಗಿದೆ ಎಅಮದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಚುನಾವಣಾ ಪ್ರಕ್ರಿಯೆ ಬಗ್ಗೆ ನೋಡೋದಾದ್ರೆ
ಬೆಳಗ್ಗೆ 9ಕ್ಕೆ ಸಾಮಾನ್ಯ ಸಭೆ ನಂತರ 10ಕ್ಕೆ ಮತದಾನ ನಡೆದು ಪ್ರತಿ ವಕೀಲರು ಒಂದೊಂದು ಮತದಂತೆ ಹದಿನೆಂಟು ಮತ ಚಲಾಯಿಸಲಿದ್ದಾರೆ. 11 ಮತ ಕನಿಷ್ಟ ಮತ ಹಾಕಲೇಬೇಕಿದ್ದು ಬಹುಶಃ ಸಂಜೆ 5ಕ್ಕೆ ಮತದಾನ ಮುಗಿಯಲಿದ್ದು ಅನಂತರ ಮತ ಎಣಿಕೆ ಶುರುವಾಗಲಿದ್ದು ಬ್ಯಾಲೆಟ್ ಪೇಪರ್ ಅಧಿಕವಾಗಿದ್ದು ತಡರಾತ್ರಿವರೆಗೂ ಮತ ಎಣಿಕೆ ನಡೆಯಲಿದೆ.
ಇನ್ನೂ ಸಹಜವಾಗಿ ಕೋರ್ಟಿನ ಆಜುಬಾಜು ಎರೆಡೂ ಸಿಂಡಿಕೇಟ್ ಪ್ಲೆಕ್ಸ್ ರಾರಾಜಿಸುತ್ತಿದ್ದು ಈಗಲೂ ಮತ ಸೆಳೆಯುವ ತಂತ್ರಕ್ಕೆ ಕೊನೆಯಿಲ್ಲದಂತಾಗಿದೆ.
