ಹೊಸ ವಕೀಲರನ್ನ ಪ್ರೋತ್ಸಾಹಿಸಿ- ಅದ್ಯಕ್ಷ ಗಾದಿಯ ಹಿರಿಯ ವಕೀಲ ಎಮ್ಆರ್ ವೇಣುಗೋಪಾಲ್ ಕರೆ

ವಕೀಲರ ಸರ್ವತೋಮುಖ ಅಭಿವೃದ್ದಿಗೆ ಹೊಸ ಮುಖಗಳನ್ನ ಬೆಂಬಲಿಸಿ. -ಹಿರಿಯ ವಕೀಲ ಎಂಆರ್ ವೇಣುಗೋಪಾಲ್ ಕರೆ.
ಆನೇಕಲ್: 3ರ ಭಾನುವಾರ ಆನಾಎಕಲ್ ವಕೀಲರ ಸಂಘದ ಚುನಾವಣೆಯಲ್ಲಿ ವಕೀಲರ ನೈಜ ಹಿತ ಚಿಂತಕರನ್ನು ಗುರುತಿಸಿ ವಕೀಲರ ಏಳಿಗೆಗೆ ದುಡಿಯುವ ಹೊಸ ಮುಖಗಳಿಗೆ ಪ್ರೋತ್ಸಾಹ ನೀಡುವ ಮುಖಾಂತರ ಬದಲಾವಣೆ ಜಗದ ನಿಯಮ ಅಂತ ಸಾಭೀತು ಪಡಿಸಿ ಎಂದು ಹಿರಿಯ ವಕೀಲ ಅದ್ಯಕ್ಷಗಾದಿಯ ಸ್ಪರ್ದಿ ಎಂ ಆರ್ ವೇಣುಗೋಪಾಲ್ ಸಮಸ್ತ ವಕೀಲರಿಗೆ ಮನವಿ ಮಾಡಿದರು.
ಅವರು ಆರಂಭಿಕ ಮಾತುಗಳಲ್ಲೇ ಯಾರೋ ಆರೋಪಿಸುತ್ತಾರೆ ಎಂದು ನಾನು ಅವರ ಮಟ್ಟಕ್ಕೆ ಇಳಿಯಲಾರೆ. ನಾವು ಕಾಮ್ ಕಿ ಬಾತ್ ನಲ್ಲಿ ವಿಶ್ವಾಸ ಇಡಲು ಸ್ಪರ್ದೆಗೆ ಇಳಿದಿದ್ದೇವೆ. ಬದಲಾಗಿ ಆರೋಪಿಸುವುದೇ ನಮ್ಮ ಕಸುಬಲ್ಲ ಎಅಮದು ಮಾರ್ಮಿಕವಾಗಿ ಮಾರುತ್ತರ ನೀಡಿದರು.
ಸಂಘದ ಸದಸ್ಯರಿಗೆ ಔಷಧಿ, ಆಸ್ಪತ್ರೆ ಹಾಗೂ ತುರ್ತು ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮೆ ಯೋಜನೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಅವರು ಖಾಸಗೀ ಹೋಟೆಲ್ನಲ್ಲಿ ಕರೆದಿದ್ದ ಪತ್ರಿಕಾಘೋಷ್ಟಿಯಲ್ಲಿ ಮಾತನಾಡಿದರು.
ಪೈಪೋಟಿ ಮಾತುಗಳನ್ನ ಬಿಟ್ಟು ನಾನು 40 ವರ್ಷದಲ್ಲಿ ರಾಜಕಾರಣವೂ ನೋಡಿದ್ದೇನೆ. ಎಲ್ಲರ ಹಿತ ಕಾಪಾಡುವುದು ನನ್ನ ಗುರಿಯಾಗಿದೆ ಬದಲಾ್ಇ ಇನ್ನೊಬ್ಬರ ಹೀಗೆಳೆಯುವ ಪ್ರವೃತ್ತಿ ನನ್ನದಲ್ಲ ಎಂದರು.
ವಕೀಲರ ಕ್ಷೇಮಾಭಿವೃದ್ದಿಗೆ ನಾವು ಶ್ರಮಿಸಲು ಬಂದಿದ್ದೇನೆ. ಈವರೆಗೆ 30 ವರ್ಷಗಳಿಂದ ಸಂಘ ಸಂಸ್ಥೆಗಳಲ್ಕಿ ಸೇವೆ ಸಲ್ಲಿಸಿದ್ದೇನೆ ಅದನಗನ ನಾನೇ ಹೇಳಿಕೊಂಡರೆ ಅದು ಸಮಂಜಸವಲ್ಲ ಎಂದರು. ಯುವ ವಕೀಲರಿಗೆ ಆರ್ಥಿಕ, ಸಾಮಾಜಿಕ ವ್ಯವಸ್ಥೆಗೆ ಸಹಕಾರ ನೀಡುವೆ. ಇಲ್ಲಿ ಮೊದಲ ವಕೀಲರಿದ್ದಾರೆ. ಅವರು ನಮ್ಮ ಮಾರ್ಗದರ್ಶಿಗಳಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಾನು ಎಲ್ಲ ವಕೀಲರ ಹಿತ ಕಾಪಾಡಲು ಸೇವೆಗಾ್ಇ ಬಂದಿದ್ದೇನೆ ಟೀಕೆ ಟಿಪ್ಪಣಿಗಳ ಬಗ್ಗೆ ಮಾತನಾಡುವುದಿಲ್ಲ ಎಂದರು.
ವಕೀಲರ ಆರೋಗ್ಯ ಹಾಗೂ ಯೋಗ ಕ್ಷೇಮವೇ ನಮಗೆ ಮುಖ್ಯವಾಗುತ್ತದೆ. ಬಹಳ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ನಮ್ಮ ವಕೀಲರ ತಂಡ ಚುನಾವಣೆಗೆ ಸ್ಪರ್ಧಿಸಿದ್ದೇವೆ.
ವಕೀಲರ ಸಂಘ ನಿಂತ ನೀರಾಗಬಾರದು ಹರಿವ ನೀರಾಗಬೇಕಿದೆ ಪೊಳ್ಳು ಭರವಸೆಗಳು ಬೇಡ ಆಗಬೇಕಾದ್ದನ್ನ ಮಾತ್ರ ಮಾತನಾಡೋಣ ಆ ಮೂಲಕ ಹೊಸ ಭರವಸೆಯನ್ನು ಮೂಡಿಸೋಣ ಎಂದರು. ಜೊತೆಗೆ ಆನೇಕಲ್ ವಕೀಲರ ಸಂಘವನ್ನು ರಾಜ್ಯದಲ್ಲಿ ಮಾದರಿ ಸಂಘವನ್ನಾಗಿ ರೂಪಿಸಲು ಪಣ ತೊಟ್ಟಿದ್ದೇವೆ. ಹೀಗಾಗಿ ವಕೀಲ ಬಂಧುಗಳು ನಮ್ಮ ಕೈ ಬಲಪಡಿಸುವ ಮೂಲಕ ಜೊತೆಯಾಗಬೇಕೆಂದು ಮನವಿ ಮಾಡಿದರು.
ಹಿರಿಯ ವಕೀಲ ಬಿ.ನಾರಾಯಣ ಸ್ವಾಮಿ ಮಾತನಾಡಿ, ಆನೇಕಲ್ ವಕೀಲರು ಬದಲಾವಣೆ ಬಯಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಎಂ.ಆರ್.ವೇಣುಗೋಪಾಲ್ ತಂಡ ಹೊಸತನದಿಂದ ಕೂಡಿದ್ದು, ಆ.3 ರಂದು ನಡೆಯುವ ಚಳವಳಿಗೆ ಅವರನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಇರುವ ಕೋರ್ಟ್ ಮುಂಭಾಗದ ಶಿಥಿಲ ಕಟ್ಟಡಗಳ ನೆಲಸಮಗೊಳಿಸಿ ವಾಹನ ನಿಲ್ದಾಣ ಉಳಿದ ಕೋರ್ಟಿಗೆ ಸಂಬಂದಪಟ್ಟ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಅಮದು ಆಶ್ವಾಸನೆ ನೀಡಿದರು.
ಹಿರಿಯ ವಕೀಲ ಮಾಜಿ ವಕೀಲರ ಸಂಘದ ಅಧ್ಯಕ್ಷರಾಗಿದ್ದ ಶ್ರೀನಿವಾಸ್ ರೆಡ್ಡಿ ಮಾತನಾಡಿ ವಕೀಲರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಶಾಶ್ವತ ಅಧ್ಯಕ್ಷರಾಗಿರಬಾರದು, ಬದಲಾಗಿ ಮತ್ತೊಬ್ಬರಿಗೆ ಅವಕಾಶ ಮಾಡಿ ಮಾದರಿಯಾಗಬೇಕೆಂದರು.
ಪೈಪೋಟಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಏನು ಪ್ರಸ್ತಾಪಿಸಿದರು ಎನ್ನುವುದನ್ನ ಇಲ್ಲಿ ಮಾತನಾಡದೆ ನಾವೆಲ್ಲ ವಕೀಲರು ವಕೀಲರ ಹಿತ ಕಾಪಾಡುವ ಕೆಲಸ ಮಾಡುವ ಅಗತ್ಯವಿದೆ ಎಂದರು.
ನಾನು ಎರೆಡು ಬಾರಿ ಅಧ್ಯಕ್ಷನಾಗಿದ್ದು ಮತ್ತೆ ನಮ್ಮ ಸಿಂಡಿಕೇಟ್ ನಲ್ಲಿ ಅವಕಾಶ ಬಂದಿತ್ತು ನಿರಾಕರಿಸಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಯುವ ಉತ್ಸಾಹಿ ವಕೀಲರನ್ನು ಬೆಳೆಸಲು ಮುಂದಾಗಿದ್ದೇನೆ ಎಂದರು.
ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶಿವರಾಜು, ಬಾಲರೆಡ್ಡಿ, ಶಾರದಮಣಿ, ಆಶಾ, ನೀಲಮ್ಮ, ನಿರ್ಮಲಾ, ಲಕ್ಷ್ಮಿ ಸಂಪತ್ತು, ಮಾದೇಶ್, ಮೋಹನ್, ಮುರಳಿ, ಮೂರ್ತಿ, ಪುರುಷೋತ್ತಮ, ರಮೇಶ್, ಸತೀಶ್, ಶಾಂತಕುಮಾರ್, ಶಿವಕುಮಾರ್, ತಿಮ್ಮರಾಜು ಸೇರಿದಂತೆ ಹಿರಿಯ ವಕೀಲರು ಪತ್ರಿಕಾಗೋಷ್ಡಿಯಲ್ಲಿ ಭಾಗವಹಿಸಿದ್ದರು.
ಎ.ಎಂ.ಶ್ರೀನಿವಾಸ್ ರೆಡ್ಡಿ, ಜಿ.ನಾರಾಯಣಸ್ವಾಮಿ, ವಿಶ್ವನಾಥ್, ಜಗನ್ನಾಥ್, ಆರ್.ವಿ.ಮೂರ್ತಿ, ವೈ.ಮಂಜುನಾಥ್, ಸಿ.ವಿಜಯಕುಮಾರ್, ನಾಗರಾಜು ಗೌಡ, ಕೂಗೂರು ರಮೇಶ್, ಬಿ.ಲೋಕೇಶ್, ಜಗನ್ನಾಥ್ ರಾಥೋಡ್, ಈ ವೇಳೆ ಅಭ್ಯರ್ಥಿಗಳಾದ ಶಿವರಾಜು, ಬಾಲರೆಡ್ಡಿ, ಶಾರದಾಮಣಿ, ಆಶಾ, ನೀಲಮ್ಮ, ನಿರ್ಮಲಾ,ಲಕ್ಷ್ಮಿಸಂಪತ್ತು, ಮಾದೇಶ್ ಜಿ, ಮೋಹನ್ ಎಂ, ಮುರಳಿ ಬಿ.ಆರ್, ಮೂರ್ತಿ ಎಂ, ಪುರುಷೋತ್ತಮ ಎ, ರಮೇಶ್ ಸಿ, ಸತೀಶ್.ಆರ್, ಶಾಂತಕುಮಾರ್ ಎಂ, ಶಿವಕುಮಾರ್ ಎಂ, ತಿಮ್ಮರಾಜು ಜೆ ಎಂ ಉಪಸ್ಥಿತರಿದ್ದರು
![]()