June 2025
M T W T F S S
 1
2345678
9101112131415
16171819202122
23242526272829
30  
January 29, 2026

c24kannada

ವಸ್ತುಸ್ಥಿತಿಯತ್ತ

ಭೂಮಿಗೆ ಒಂದು ಗಟ್ಟಿ ಬೀಜ ಬಿದ್ದರೆ, ಅದು ಸಾವಿರಾರು ಬೀಜಗಳನ್ನ ಹುಟ್ಟುಹಾಕುತ್ತದೆ. ಅದುವೇ ಡಾ ಬಿಆರ್ ಅಂಬೇಡ್ಕರ್., -ಪಟಾಪಟ್ ನಾಗರಾಜ್.

Share it

ಭೂಮಿಗೆ ಒಂದು ಗಟ್ಟಿ ಬೀಜ ಬಿದ್ದರೆ, ಅದು ಸಾವಿರಾರು ಬೀಜಗಳನ್ನ ಹುಟ್ಟುಹಾಕುತ್ತದೆ. ಅದುವೇ ಡಾ ಬಿಆರ್ ಅಂಬೇಡ್ಕರ್., -ಪಟಾಪಟ್ ನಾಗರಾಜ್.

ಬೆಂ,ಆನೇಕಲ್, ಜೂ,02: ಒಂದು ಬೀಜದಿಂದ ಸಾವಿರಾರು ಬೀಜ ಹಣ್ಣುಗಳನ್ನ ನೀಡುತ್ತೆ. ಇಡೀ ಭುವಿಯ ಜೀವಸೆಲೆಯಾಗಿ ನಿಲ್ಲುವ ಅಂತಹ ಬೀಜವೇ ನಮ್ಮೆಲ್ಲರ ಆದರ್ಶ ಡಾ ಬಿಆರ್ ಅಂಬೇಡ್ಕರ್. ಕಾನ್ಷಿರಾಮ್ ಅದನ್ನ ಇನ್ನಷ್ಟು ಪಾಲಿಶ್ ಮಾಡಿ ನಮಗೆ ಜೀವಂತ ನಿದರ್ಶನಗಳನ್ನು ನೀಡಿ ಸ್ಪೂರ್ತಿ ಕೊಟ್ಟರು. ಎಂದು ತಮ್ಮ ಹೋರಾಟದ ಏಳು-ಬೀಳುಗಳನ್ನು‌ ನೆನಪಿಸಿಕೊಳ್ಳುವ ಮೂಲಕ ತಮ್ಮ 63 ನೇ ಹುಟ್ಟು ಹಬ್ಬವನ್ನು ಹಿರಿಯ ಹೋರಾಟಗಾರ ಪಟಾಪಟ್ ನಾಗರಾಜ್ ಅಭಿಮಾನಿಗಳ ಸಮಾರಂಭದಲ್ಲಿ ಹಂಚಿಕೊಂಡರು.

ಆನೇಕಲ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ
ಪಟಾಪಟ್ ನಾಗರಾಜ್ ಅಭಿನಂದನಾ ಸಮಾರಂಭವನ್ನು ಪ್ರಜಾ ವಿಮೋಚನಾ ಚಳವಳಿ ಸಮತಾವಾದ ಹಮ್ಮಿಕೊಂಡಿತ್ತು. ಬೃಹತ್ ಹೂವಿನ‌ಹಾರ ಹಾಕಿ ಸ್ವಾಗತಿಸಿದ ಸಂಘಟಕರು ಡಾ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಿಪಿಎಂ ಡಿ‌ ಮಹದೇಶ್ ಮಾತನಾಡಿ ಹೋರಾಟಗಳೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ಗಟ್ಟಿದನಿಯಾಗಿ ನಿಂತಿದ್ದ ಪಟಾಪಟ್ ನಾಗರಾಜ್ ನಮ್ಮ ಭಾಗದಲ್ಲಿ ಒಂದು ಹಿರಿಮೆ, ಸದಾ ಅವರ ಹೋರಾಟದ ಮೆಲುಕುಗಳನ್ನ ಯುವ ಜನತೆ ಮುಂದಿನ‌ ಪೀಳಿಗೆ ನೆನಪಿಸಿಕೊಳ್ಳುವ ಹಾಗೆ ಸಣ್ಣ ಕಿರುಹೊತ್ತಿಗೆಯನ್ನು ಹೊರತರುವ ಅಗತ್ಯವಿದೆ ಎಂದರು.
ಹೋರಾಟಗಳು ಸಣ್ಣ ಸಣ್ಣ ಗುಂಪುಗಳಾಗಿರುವ ಸಂದರ್ಭದಲ್ಲಿ ಒಗ್ಗಟ್ಟಾಗುವ ಅಗತ್ಯತೆ ಇದೆ ಎಂದರು.

ಹೋರಾಟಗಾರ ಕುಮಾರ್ ಮಾತನಾಡಿ 2006-7ರಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಮನೆ ಮುಂದಿನ‌ ಮೀಸಲಾತಿ ಕುರಿತ ಹೋರಾಟದಲ್ಲಿ ಮಾತನಾಡಿದ ಹೋರಾಟದ ಮಾತು ಪ್ರಮುಖ ಆಕರ್ಷಣೆ. ಇಂದಿಗೂ ಅದು ನಮ್ಮ ಎದೆಗಳಲ್ಲಿ ಮಾರ್ದನಿಸುತ್ತಲಿದೆ ಎಂದರು.

ಜೈಲಿನಲ್ಲಿನ‌ ಕೈದಿಗಳಿಗೆ ಪರಿವರ್ತನೆ ಕುರಿತು ಒಂದು ಕಾರ್ಯಕ್ರಮದಲ್ಲಿ ಅಂಗುಲಿಮಾಲನನ್ನು‌ಬದಲಾಯಿಸಿದ ಬುದ್ದನ ಚರಿತ್ರೆಯನ್ನ ತಿಳಿಸಿದ್ದು ಅಂದಿನ ಕಾಲದಲ್ಲಿ ಪರಿವರ್ತನೆಗೆ ನಾಂದಿಯಾಗಿದೆ ಎಂದು ಖಾನ್ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯಾದ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ ಮಾತನಾಡಿ1987-88 ಅಂತರ್ಜಾತೀಯ ಪ್ರೇಮ ಪ್ರಕರಣ ವಿಚಾರದಲ್ಲಿ ಪೊಲೀಸ್ ಠಾಣಾ ಮುಂದೆ ಸೈಕಲ್ ತುಳಿಯಲಿಕ್ಕೂ ಹೆದರಿಕೆಯಾಗುತ್ತಿದ್ದ ಸಂದರ್ಭದಲ್ಲಿ ಭಗವಾನ್ ಅಳ್ಳೆಳ್ಳಪ್ಪ ಮೂಲಕ ಪಟಾಪಟ್ ನಾಗರಾಜ್ ಅಣ್ಣನ ಪರಿಚಯವಾಗಿತ್ತು.‌ ಅಂತಹ ಪೊಲೀಸ್ ಠಾಣೆಯಲ್ಲಿ ಸಿಕ್ಕ ಗೌರವ ಇಂದು ನಮ್ಮನ್ನ ಪ್ರತಿ ದನಿಯಾಗಿ ನಿಲ್ಲಿಸಿದ ಕೀರ್ತಿ ಇಂದಿನ ಸ್ಪೂರ್ತಿಯಾಗಿದೆ ಎಂದರು. ಅಲ್ಲಿಂದ ಚಳವಳಿಗಳ ಅನುಭವ ಆಗಿ ಈವರೆಗೂ ಅವರನ್ನ ನೆನಪಿಸದ ದಿನವಿಲ್ಲ ಎಂದರು.

ರಾಜ್ಯ ಪ್ರ ಕಾರ್ಯದರ್ಶಿ ಆದೂರು ಮದ್ದೂರಪ್ಪ ಸ್ವಾಗತ- ನಿರೂಪಣೆ ಮಾಡಿದರು.

ಹಿರಿಯ ಹೋರಾಟಗಾರ್ತಿ ನಾರಾಯಣಮ್ಮ,
ತಾಲೂಕು ಅಧ್ಯಕ್ಷ ಸಬ್ಮಂಗಲ ಚಿನ್ನಪ್ಪ, ಮೇಡಹಳ್ಳಿ ರಮೇಶ್, ಹೊಂಪಲಘಟ್ಟ ಶ್ರೀನಿವಾಸ್, ವೆಂಕಟೇಶ್, ನಾರಾಯಣ್, ಕುಮಾರ್, ಬಳ್ಳೂರು ಶ್ರೀನಿವಾಸ್ ಇದ್ದರು.

Loading

Leave a Reply

Your email address will not be published. Required fields are marked *

error: Content is protected !!